ಕುರುಬ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸುವೆ: ಸತೀಶ ಜಾರಕಿಹೊಳಿ

0
🌐 Belgaum News :

ಬೆಳಗಾವಿ: ಕುರಿ ಸಾಕಾಣಿಕೆ, ಉಣ್ಣೆ ಉತ್ಪಾದಕ ಕೂಲಿ ಕಾರ್ಮಿಕರ ಏಳಿಗೆಗಾಗಿ ಹೆಚ್ಚಿನ  ಸಾಲ ಸೌಲಭ್ಯ ಕಲ್ಪಿಸಲು ಅಧಿಕಾರಿಗಳ ಜತೆ ಚರ್ಚಿಸಲಾಗುವುದು.  ಕುರುಬರ  ಸಂಘಗಳ ಅಭಿವೃದ್ಧಿಗಾಗಿ ಸರ್ಕಾರದ ಯೋಜನೆಗಳನ್ನು  ಜಾರಿಗೆ ತರುವ ಪ್ರಯತ್ನ ಮಾಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಭರವಸೆ ನೀಡಿದರು.

ತಾಲೂಕಿನ ಶಿಂದೊಳ್ಳಿ ಗ್ರಾಮದ  ಕನಕದಾಸ ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಆವರಣದಲ್ಲಿ,  ಬೆಳಗಾವಿ ಜಿಲ್ಲೆಯ ಕುರಿ ಸಂಗೋಪನ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘಗಳ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ, ಅಧ್ಯಕ್ಷರ, ಕಾರ್ಯದರ್ಶಿಗಳ,  ಸದಸ್ಯರ ಮಿಲನ ಹಾಗೂ ಸನ್ಮಾನ ಸಮಾರಂಭ  ಉದ್ಘಾಟಿಸಿ ಅವರು ಮಾತನಾಡಿದರು.

ಮಾಜಿ ಸಿಎಂ ಸಿದ್ಧರಾಮಯ್ಯನವರು ಕುರುಬರ ಸಮುದಾಯಕ್ಕೆ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದಾರೆ. ಸರ್ಕಾರ ಬದಲಾದ ಬಳಿಕ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಇವುಗಳನ್ನು  ಜಾರಿಗೆ ತರುವ ಪ್ರಯತ್ನ ಮಾಡುತ್ತೆವೆ.  ಶಿಂದೋಳಿ ಕೂಲಿ ಕಾರ್ಮಿಕರಿಗೆ ಬೇಕಾದ ಸೌಲಭ್ಯ ಕಲ್ಪಿಸಲು ಶ್ರಮಿಸುತ್ತೆವೆ ಎಂದು ಭರವಸೆ ನೀಡಿದರು.

ಕುರಿಸಾಕಾಣಿಕೆಯಲ್ಲಿ ಬೆಳಗಾವಿ ಪ್ರಥಮ:-  ರಾಜ್ಯದಲ್ಲಿ ಅತೀ ಹೆಚ್ಚು ಕುರಿಸಾಕಾಣಿಕೆಯಲ್ಲಿ ಬೆಳಗಾವಿ ಜಿಲ್ಲೆ ಮುಂದಿದೆ. ಇಲ್ಲಿನ ಉತ್ಪಾದನೆಗಳು ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಗೆ ರಪ್ತಾಗುತ್ತಿವೆ.  ಇಲ್ಲಿನ ಕೂಲಿ ಕಾರ್ಮಿಕರನ್ನು ಬೆಳೆಸುವ ಪ್ರಯತ್ನ ನಾವು ಮಾಡುತ್ತೆವೆ ಎಂದರು.   ಬಿಡಿಸಿಸಿ ಬ್ಯಾಂಕ್ ನ ಮೂಲಕ  ಸಾಲವನ್ನು  ಪಡೆದುಕೊಳ್ಳಬಹುದು.  ಸಂಘಟನೆಗಳಲ್ಲಿ ಸಮಸ್ಯೆ ಇದ್ದರೆ ಜಿಲ್ಲಾಡಳಿತ ಮೂಲಕ ಪರಿಹರಿಸಲಾಗುವುದು ಎಂದರು.

 

ಜಿಲ್ಲೆಯಲ್ಲಿ ಹೆಚ್ಚಿನ ಉಣ್ಣೆ ಉತ್ಪಾದಕ ಘಟಕಗಳ ಪ್ರಾರಂಭಿಸಲು ಸರ್ಕಾರ ಮಟ್ಟದಲ್ಲಿ ಕೆಲಸಗಳನ್ನು  ಮಾಡಲಾಗುತ್ತಿದೆ. ಇದರಿಂದ,  ಸ್ಥಳೀಯ ಮಹಿಳೆಯರು  ಬದುಕು ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ.  ಮೂಲತ್ವ ಕುರಿ ಸಾಕಾಣಿಕೆಯಲ್ಲಿ ಪಳಗಿರುವ ಸಾವಿರಾರು ಕುರುಬ ಸಮುದಾಯಗಳು  ಹೆಚ್ಚಿನ ಕುರಿಗಳನ್ನು ಸಾಕಾಣಿಕೆ ಮಾಡುವ ಕೆಲಸಗಳನ್ನು ಮಾಡಬೇಕು ಎಂದರು.  2019 ರ ಪ್ರವಾಹದ ಬಳಿಕ ಕುರಿಸಾಕಾಣಿಕೆಯಲ್ಲಿ  ಶೇ 20% ರಷ್ಟು ಇಳಿಕೆ ಕಂಡಿದೆ. ಸಂಘಟನೆಗಳ ಸಹಕಾರದಿಂದ ಹೆಚ್ಚಿನ ಕುರಿಗಳನ್ನು ಸಾಕಾಣಿಕೆ ಮಾಡಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರು   ಕೃಷ್ಣಾ ಅನಗೋಳಕರ, ಲಕ್ಷ್ಮಣರಾವ್ ಚಿಂಗಳೆ, ಸುಭಾಷ ಡವಳೇಶ್ವರ, ಗಜಾನನ ಕೊಳ್ಳಿ, ಆರ್ ಬಿ ರೆಬ್ಬನ್ನವರ ಹಾಗೂ ಅಧ್ಯಕ್ಷರು, ನಿರ್ದೇಶಕರು, ಸದಸ್ಯರು ಇತರರು  ಇದ್ದರು.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');