ಪ್ರಕಟಣೆ

0
🌐 Belgaum News :

“ಕನ್ನಡ ಸಾಹಿತ್ಯಕ್ಕೆ ಕಾದರವಳ್ಳಿ ಸೀಮಿಮಠದ ಕೊಡುಗೆ” ಕುರಿತು ಗೂಗಲ್ ಮೀಟ್ ತಂತ್ರಾಂಶದ ಮೂಲಕ ಉಪನ್ಯಾಸ ಕಾರ್ಯಕ್ರಮ

ಬೆಳಗಾವಿ,ಆ.06: ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲೆ ಗೂಗಲ್ ಮೀಟ್ ತಂತ್ರಾಂಶದ ಮೂಲಕ ಕ.ಸಾ.ಪ. ಬೆಳಗಾವಿ ಜಿಲ್ಲೆಯ ಚ.ಕಿತ್ತೂರು ತಾಲೂಕಾ ಘಟಕ ಹಾಗೂ ಎಲ್ಲ ತಾಲೂಕು ಕಸಾಪ ಘಟಕಗಳ ಸಹಯೋಗದೊಂದಿಗೆ ರವಿವಾರ (ಆ.08) ರಂದು ಸಾಯಂಕಾಲ 4 ಗಂಟೆಗೆ “ಕನ್ನಡ ಸಾಹಿತ್ಯಕ್ಕೆ ಕಾದರವಳ್ಳಿ ಸೀಮಿಮಠದ ಕೊಡುಗೆ” ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

ವೆಬಿನಾರ್ ಮೂಲಕ ನಡೆಯುವ ಈ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು ಸಾನಿಧ್ಯವನ್ನು ವಹಿಸುವರು. ಬೆಳಗಾವಿ ಕ.ಸಾ.ಪ. ಜಿಲ್ಲಾಧ್ಯಕ್ಷರಾದ ಮಂಗಲಾ ಮೆಟಗುಡ್ಡ ಅವರು ಅಧ್ಯಕ್ಷತೆಯನ್ನು ವಹಿಸುವರು.

ದಾನೇಶ್ವರ ಎಸ್ ಸಾಣಿಕೊಪ್ಪ ಅವರು “ಕನ್ನಡ ಸಾಹಿತ್ಯಕ್ಕೆ ಕಾದರವಳ್ಳಿಯ ಸೀಮಿಮಠದ ಕೊಡುಗೆ” ಕುರಿತು ಉಪನ್ಯಾಸವನ್ನು ನೀಡಲಿದ್ದಾರೆ. ಡಾ. ಎಸ್.ಬಿ.ದಳವಾಯಿ ಅವರು ಸ್ವಾಗತವನ್ನು ಮಾಡಲಿದ್ದಾರೆ. ಎಂ.ಎಸ್.ಕಲ್ಮಠ ಅವರು ವಂದನಾರ್ಪಣೆಯನ್ನು ಮಾಡಲಿದ್ದಾರೆ. ಕಸಾಪ ಚ.ಕಿತ್ತೂರಿನ ಅಧ್ಯಕ್ಷರಾದ ಡಾ.ಶೇಖರ ಹಲಸಗಿ ಅವರು ಕಾರ್ಯಕ್ರಮದ ಸಂಯೋಜನೆ ಹಾಗೂ ನಿರೂಪಣೆಯನ್ನು ಮಾಡಲಿದ್ದಾರೆ.

ಪ್ರಕಾಶಗೌಡ ಶಿ ಪಾಟೀಲ ಕೋಶಾಧ್ಯಕ್ಷರು, ಕ.ಸಾ.ಪ.ತಾಲೂಕ ಕಿತ್ತೂರು ಅವರು ಸ್ವಾಗತವನ್ನು ಮಾಡಲಿದ್ದಾರೆ. ಶ್ರೀ.ಎಂ.ವಾಯ್ ಮೆಣಸಿನಕಾಯಿ ಕ.ಸಾ.ಪ.ಬೆಳಗಾವಿ ಜಿಲ್ಲೆ, ಗೌ.ಕಾರ್ಯದರ್ಶಿಗಳು ವಂದನಾರ್ಪಣೆಯನ್ನು ಮಾಡಲಿದ್ದಾರೆ. ಡಾ.ಶೇಖರ ಹಲಸಗಿ ಅಧ್ಯಕ್ಷರು ಕಸಾಪ ಚ.ಕಿತ್ತೂರು ಅವರು ಅವರು ಕಾರ್ಯಕ್ರಮವನ್ನು ಸಂಯೋಜನೆ ಹಾಗೂ ನಿರೂಪಣೆಯನ್ನು ಮಾಡಲಿದ್ದಾರೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಸಾಪ ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕಾ ಅಧ್ಯಕ್ಷರುಗಳು ಮತ್ತು ಎಲ್ಲ ತಾಲೂಕಿನ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಹಿರಿಯ-ಕಿರಿಯ ಸಾಹಿತಿಗಳು, ಕಲಾವಿದರು ಮತ್ತು ಸಮಸ್ತ ಕನ್ನಡಾಭಿಮಾನಿಗಳು ಇಮೇಲ್ ವಿಳಾಸ Meeting URL:https://meet.google.com/qkh-meqs-aaoಚಿಚಿoವನ್ನು ಬಳಸಿಕೊಂಡು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಕ.ಸಾ.ಪ. ಬೆಳಗಾವಿ ಜಿಲ್ಲಾಧ್ಯಕ್ಷರಾದ ಮಂಗಲಾ ಮೆಟಗುಡ್ಡ ಅವರು ಮತ್ತು ಜಿಲ್ಲಾ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

1960 ರ ಅಡಿ ನೊಂದಣಿಯಾದ ಸಂಘ-ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಡಿಸೆಂಬರ್ ಅಂತ್ಯದವರೆಗೆ ಮುಂದೂಡಿಕೆ

ಬೆಳಗಾವಿ,ಆ.06 : ಕರ್ನಾಟಕ ಸಂಘಗಳ ಅಧಿನಿಯಮ 1960 ರ ಅಡಿ ನೊಂದಣಿಯಾದ ಸಂಘ-ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ, ಉಪಚುನಾವಣೆಗಳನ್ನು ಡಿಸೆಂಬರ್ 2021 ರ ಅಂತ್ಯದವರೆಗೆ ಸರ್ಕಾರದ ಆದೇಶದ ಮೇರೆಗೆ ಮುಂದೂಡಲಾಗಿದೆ ಎಂದು ಬೆಳಗಾವಿ ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

ವಿಶ್ವಕರ್ಮ ಸಮುದಾಯಕ್ಕೆ ಅಧಿಕಾರೇತರ ಸದಸ್ಯರನ್ನು ನಾಮಕರಣ ಮಾಡಲು ಅರ್ಜಿ ಆಹ್ವಾನ

ಬೆಳಗಾವಿ,ಆ.06 : ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಬೆಳಗಾವಿ ಇವರ ಅಧ್ಯಕ್ಷತೆಯಲ್ಲಿ ಸರ್ಕಾರದಿಂದ ರಚಿಸಿರುವ ಜಿಲ್ಲಾ ಮಟ್ಟದ ಆಯ್ಕೆ ಸಮಿತಿಗೆ ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಅಧಿಕಾರೇತರ ಒಬ್ಬ ಸದಸ್ಯರನ್ನು ನಾಮಕರಣ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಅರ್ಹತೆಗಳು/ಮಾನದಂಡಗಳು:-
ನಾಮ ನಿರ್ದೇಶನ ಬಯಸುವ ವ್ಯಕ್ತಿಯು ಬೆಳಗಾವಿ ಜಿಲ್ಲೆಯವರಾಗಿದ್ದು ವಿಶ್ವಕರ್ಮ ಸಮುದಾಯಕ್ಕೆ ಸೇರಿದವರಾಗಿರಬೇಕು. ಅದೇ ಜಿಲ್ಲೆಯಲ್ಲಿ ಕನಿಷ್ಠ 15 ವರ್ಷ ವಾಸವಾಗಿರಬೇಕು. ಕನಿಷ್ಠ 35 ವರ್ಷದಿಂದ ಗಿರಿಷ್ಠ 65 ವರ್ಷ ವಯೋಮಿತಿ ಒಳಗಿರಬೇಕು. ಕನಿಷ್ಠ ಎಸ್.ಎಸ್.ಎಲ್.ಸಿ ಯವರೆಗೆ ವಿದ್ಯಾಭ್ಯಾಸ ಮಾಡಿರಬೇಕು. ಸಂಬಂಧಿಸಿದ ಜಿಲ್ಲೆಯ ಸಮಗ್ರ ಮಾಹಿತಿ ಹಾಗೂ ವಿಶ್ವಕರ್ಮ ಜನಾಂಗದವರು ವಾಸಿಸುವ ಸ್ಥಳ, ಕೈಗೊಳ್ಳುತ್ತಿರುವ ಉದ್ಯೋಗ ಇತ್ಯಾದಿ ಅಂಕಿ ಅಂಶಗಳ ಮಾಹಿತಿ ತಿಳಿದಿರಬೇಕು. ಆಯ್ಕೆಯಾಗುವ ವ್ಯಕ್ತಿಯು ನಿಗಮದಲ್ಲಿ ಅನುಷ್ಠಾನಗೊಳ್ಳುತ್ತಿರುವ ಪಂಚವೃತ್ತಿ ಯೋಜನೆಗಳ ಪರಂಪರಾಗತವಾಗಿ ಸ್ವಂತ ನಿರ್ವಹಿಸಿರುವ ಅನುಭವ ಹೊಂದಿರಬೇಕು.
ಆಯ್ಕೆಯಾಗುವ ವ್ಯಕ್ತಿಯು ಯಾವುದೇ ರೀತಿಯ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರಬಾರದು ಹಾಗೂ ದಂಡ/ಜುಲ್ಮಾನೆ/ಶಿಕ್ಷೆ ಅನುಭವಿಸಿರಬಾರದು. ಆಯ್ಕೆ ಸಮಿತಿಯು ಜಿಲ್ಲಾ ಮಟ್ಟದ ಉನ್ನತ ಮಟ್ಟದ ಅಧಿಕಾರಿಗಳ ಸಮಿತಿಯಾಗಿದ್ದು ಅಂತಹ ಸಮಿತಿಗೆ ಸರಳ ಸಜ್ಜನಿಕೆ ಹಾಗೂ ಇತರರೊಂದಿಗೆ ಗೌರವಾನ್ವಿತವಾಗಿ ವರ್ತಿಸುವಂತಹ ವಿವೇಕವುಳ್ಳ ಪ್ರಜ್ಞಾವಂತರಾಗಿರಬೇಕು. ಈ ಆಯ್ಕೆಯು ನೇಮಕಗೊಂಡ ದಿನದಿಂದ 02 ವರ್ಷಗಳ ಕಾಲಾವಧಿ ಇರುತ್ತದೆ. ಈ ಅವಧಿಯಲ್ಲಿ ಸತತ 03 ಸಭೆಗಳಿಗೆ ಗೈರು ಹಾಜರಾದಲ್ಲಿ ಮತ್ತು ಆಯ್ಕೆ ಸಮಿತಿಯ ಅಧ್ಯಕ್ಷರು/ಸದಸ್ಯರೊಂದಿಗೆ ಅನುಚಿತವಾಗಿ ವರ್ತಿಸಿದಲ್ಲಿ ವಜಾ ಮಾಡಬಹುದಾಗಿದೆ. ನಿವೃತ್ತ ಸರ್ಕಾರಿ/ಅರೆ ಸರ್ಕಾರಿ ನೌಕರರು ಆಯ್ಕೆ ಸಮಿತಿಯ ಸದಸ್ಯರಾಗಬಸಿದ್ದರೆ ಮೇಲ್ಕಂಡ ಎಲ್ಲಾ ಅಂಶಗಳನ್ನು ಪರಿಗಣಿಸಿ ಜವಾಬ್ದಾರಿ/ಪಾರದರ್ಶಕ ಗುಣ ಹೊಂದಿದವರನ್ನು ಆಯ್ಕೆ ಮಾಡಲಾಗುವದು.
ಈ ಮೇಲಿನ ಅರ್ಹತೆಗಳನ್ನು ಹೊಂದಿರುವ ಆಸಕ್ತರು ಅಗಸ್ಟ್ 16 ರಂದು ಸಾಯಂಕಾಲ 5-00 ಗಂಟೆಯೊಳಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ, ಸುವರ್ಣ ವಿಧಾನಸೌಧ ಬೆಳಗಾವಿ, ಇವರಿಗೆ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು ಹಾಗೂ ಅನರ್ಹ ಮತ್ತು ನಿಗಧಿತ ದಿನಾಂಕದ ನಂತರ ಬರುವ ಅರ್ಜಿಗಳನ್ನು ತಿರಸ್ಕರಿಸಲಾಗುವದು ಎಂದು ಕರ್ನಾಟಕ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ./////

ಚರ್ಮ ಕುಶಲಕರ್ಮಿ ಕೋವಿಡ್-19 ಪರಿಹಾರಕ್ಕೆ ಅರ್ಜಿ ಆಹ್ವಾನ

ಬೆಳಗಾವಿ,ಆ.06 : ರಾಜ್ಯ ಸರ್ಕಾರವು ಚರ್ಮ ಕುಶಲಕರ್ಮಿಗಳಿಗೆ ಕೋವಿಡ್ ಪ್ಯಾಕೇಜ ಅಡಿಯಲ್ಲಿ ಚಮ್ಮಾರರು ಮತ್ತು ಚರ್ಮ ಕುಶಲಕರ್ಮಿಗಳಿಗೆ ಒಂದು ಬಾರಿ ಆರ್ಥಿಕ ನೆರವು ಪರಿಹಾರದ ಅಡಿಯಲ್ಲಿ ಪಾದರಕ್ಷೆಗಳ ತಯಾರಿಕೆ, ದುರಸ್ತಿ ಮತ್ತು ಚರ್ಮ ಹದ ಮಾಡುವ ಕಾರ್ಯದಲ್ಲಿ ತೊಡಗಿರುವವರಿಗೆ ರೂ. 2000/_ ಗಳನ್ನು ಕೋವಿಡ್-19 ಪರಿಹಾರ ಘೋಷಿಸಿದೆ.
ಈ ಪರಿಹಾರ ಧನವನ್ನು ಪಡೆಯಲು ಆನ್ ಲೈನ್ ಮೂಲಕ ಸೇವಾ ಸಿಂಧು  sevasindu.karnataka.gov.in ಪೋರ್ಟಲ್‍ನಲ್ಲಿ ಆಗಸ್ಟ್ 31 ರ ವರೆಗೆ ಅವಧಿಯನ್ನು ವಿಸ್ತರಿಸಲಾಗಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳ ಬೇಕು ಎಂದು ಡಾ. ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಜಿಲ್ಲಾ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

 

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');