ಮೀಸಲಾತಿ ಹೋರಾಟದಲ್ಲಿ ಪಾಲ್ಗೊಂಡ ಶಾಸಕರಿಗೆ ಸಚಿವ ಸ್ಥಾನ ನೀಡದಿರುವುದು ಖಂಡನೀಯ : ಬಸವರಾಜ ಪಾಟೀಲ ಕಿಡಿ

0
🌐 Belgaum News :

ಮೂಡಲಗಿ: ಮಾಜಿ ಸಿಎಂ ಯಡಿಯೂರಪ್ಪನವರ ಕುತಂತ್ರದಿoದ ಪಂಚಮಸಾಲಿ ಹೋರಾಟದಲ್ಲಿ ಭಾಗವಹಿಸಿದ ಶಾಸಕರಿಗೆ ಸಿಎಂ ಬಸವರಾಜ ಬೊಮ್ಮಾಯಿಯವರ ಸಂಪುಟದಲ್ಲಿ ಮಂತ್ರಿ ಸ್ಥಾನ ಕೈ ತಪ್ಪಿರುವುದು ಖಂಡನೀಯ ಎಂದು ಮೂಡಲಗಿ ಪಂಚಮಸಾಲಿ ಲಿಂಗಾಯತ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಕಿಡಿ ಕಾರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಭಾಗವಹಿಸಿದ ಶಾಸಕರಿಗೆ ಯಾವುದೇ ಮಂತ್ರಿ ಸ್ಥಾನ ನೀಡದೆ, ನಮ್ಮ ಪ್ರತಿಯೊಂದು ಹೋರಾಟದಲ್ಲಿ ಭಾಗವಹಿದವರಿಗೆ ಮಾಜಿ ಸಿಎಂ ಯಡಿಯೂರಪ್ಪ ಅವರು ಕುತಂತ್ರ ಮಾಡಿದ್ದಾರೆ ಎಂದು ಆರೋಪಿಸಿದರು.

ಪಂಚಮಸಾಲಿ ಬಡ ಮಕ್ಕಳ ಭವಿಷ್ಯಕ್ಕಾಗಿ 2ಎ ಮೀಸಲಾತಿ ಹೋರಾಟದಲ್ಲಿ ಬಸನಗೌಡ ಪಾಟೀಲ ಯತ್ನಾಳ, ಸಿದ್ದು ಸವದಿ, ಅರವಿಂದ ಬೆಲ್ಲದ್ ಮತ್ತು ಆನಂದ ಮಾಮನಿ ಅವರಿಗೆ ಸಿಗಬೇಕಾದ ಸಚಿವ ಸ್ಥಾನವನ್ನು ಮಾಜಿ ಸಿಎಂ ಯಡಿಯೂರಪ್ಪನವರ ಕುತಂತ್ರದಿoದ ತಪ್ಪಿಸಲಾಗಿದೆ. ನಮ್ಮ ಸಮಾಜದ ನಾಯಕರನ್ನು ತುಳಿಯುವಂತಹ ಕಾರ್ಯ ಮಾಡುತ್ತಿದ್ದಾರೆ ಎಂದರು.

ನಮ್ಮ ಸಮಾಜದ ಹೋರಾಟ ಸಂದರ್ಭದಲ್ಲಿ ಆರು ತಿಂಗಳೊಳಗಾಗಿ 2ಎ ಮೀಸಲಾತಿ ನೀಡಲು ಭರವಸೆಯನ್ನು ನೀಡಿದ್ದರು. ರಾಜಕೀಯ ಒಳ ಜಗಳದಿಂದ ಸಿಎಂ ಸ್ಥಾನದಿಂದ ಕೆಳಗೆ ಇಳಿಯಬೇಕಾಯಿತು. ಆದರೆ ನೂತನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಯಡಿಯೂರಪ್ಪನವರು ನೀಡಿರುವ ಭರವಸೆಯಂತೆ 2ಎ ಮೀಸಲಾತಿಯನ್ನು ನೀಡಬೇಕೆಂದು ಆಗ್ರಹಿಸಿದರು.

ಸಿಎಂ ಬಸವರಾಜ ಬೊಮ್ಮಾಯಿಯವರು ಆದಷ್ಟು ಬೇಗ ನಮ್ಮ ಬೇಡಿಕೆಯಾದ 2ಎ ಮಿಸಲಾತಿಯನ್ನು ನೀಡದೆ ಇದ್ದ ಪಕ್ಷದಲ್ಲಿ ಕೂಡಲಸಂಗಮ ಸ್ವಾಮೀಜಿಯವರ ನೇತೃತ್ವದಲ್ಲಿ ಉಗ್ರ ಹೋರಾಟ ಮಾಡಲಾಗುವುದು, ಆದಷ್ಟೂ ಬೇಗ ಪಂಚಮಸಾಲಿ ಸಮಾಜಕ್ಕಾಗಿ ಹೋರಾಟ ನಡೆಸಿದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವದು ಎಂದು  ಎಚ್ಚರಿಕೆ ನೀಡಿದರು.

ಸಮಾಜದ ಮುಖಂಡರಾದ ಬಿ.ಜಿ. ನಿಡಗುಂದಿ, ವ್ಹಿ.ಎಸ್. ಮುಗಳಖೋಡ, ಮಹಾದೇವ ಗೋಕಾಕ, ರುದ್ರಪ್ಪ ಬಳಿಗಾರ, ಗುರಲಿಂಗಪ್ಪ ಗೋಕಾಕ, ಅಜ್ಜಪ್ಪ ಬಳಿಗಾರ, ಬಸವರಾಜ ಕುರುಬಗಟ್ಟಿ ಮತ್ತು ಪರಿಶುರಾಮ ಗೋಕಾಕ ಹಾಗೂ ಇನ್ನಿತರರು ಉಪಸ್ಥಿತರಿದ್ದರು./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');