ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕಳ್ಳತನಕ್ಕೆ ಯತ್ನ: ಏನೂ ಸಿಗದೇ ಬರಿಗೈಯಲ್ಲಿ ಕಾಲ್ಕಿತ್ತ ಖದೀಮರು

0
🌐 Belgaum News :

ವಿಜಯಪುರ:   ಬ್ಯಾಂಕ್ ನ ಕಿಟಕಿ ಮುರಿದ್ದು  ಹಣ, ಚಿನ್ನಾಭರಣ ಕಳ್ಳತನಕ್ಕೆ ಯತ್ನಿಸಿದ ಕಿಡಿಗೇಡಿಗಳಿಗೆ ಬರಿಗೈಯಲ್ಲಿ ಅಲ್ಲಿಂದ ಕಾಲ್ಕಿತ್ತಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ಜಿಲ್ಲೆ ಕೊಲ್ಹಾರ ಪಟ್ಟಣದಲ್ಲಿರುವ ಕೆವಿಜಿ ಬ್ಯಾಂಕ್ ಶಾಖೆಯ ಕಟ್ಟಡದ ಹಿಂಬದಿ ಭಾಗದ ಕಿಟಕಿ ಮುರಿದು ಖದೀಮರು ಒಳ ನುಗ್ಗಿದ್ದಾರೆ. ಇನ್ನು ಬ್ಯಾಂಕ್ ಒಳಗೆ ಜಾಲಾಡಿ ಹಣ ಹಾಗೂ ಚಿನ್ನಕ್ಕಾಗಿ ತಡಕಾಟ ಮಾಡಿದ್ದಾರೆ. ಆದ್ರೇ, ಕಳ್ಳರಿಗೆ ಏನೂ ಸಿಗದೇ ಕಳ್ಳರು ವಾಪಸ್ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಕಳ್ಳರ ಓಡಾಟ ಒಂದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಲ್ಲದೇ, ಬ್ಯಾಂಕ್ ಗೆ ಅಳವಡಿಸಿದ್ದ ಸೈರನ್ ಹಾಗೂ ಇತರೆ ಸಿಸಿ ಕೆಮೆರಾ ಖದೀಮರು ಹಾಳು ಮಾಡಿದ್ದು,ಸ್ಥಳಕ್ಕೆ ಕೊಲ್ಹಾರ ಪೊಲೀಸ್ ಠಾಣೆಯ ಆಧಿಕಾರಿಗಳ ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');