ಸಾರ್ವಜನಿಕರಿಗೆ ಬ್ಯಾಂಕಿನಲ್ಲಿ ಪಾವತಿಸುವ ಜೊತೆಗೆ ಇ-ಸ್ವೀಕೃತಿ ತಂತ್ರಾಂಶದಲ್ಲ್ಲಿ ಸುಧಾರಿತ ತಂತ್ರಜ್ಞಾನದ ಪಿಓಎಸ್ ಮಷೀನ್ ಸೇವೆ

0
🌐 Belgaum News :

ಬೈಲಹೊಂಗಲ- ಪಟ್ಟಣದ ಸಾರ್ವಜನಿಕರಿಗೆ ಬ್ಯಾಂಕಿನಲ್ಲಿ ಪಾವತಿಸುವ ಜೊತೆಗೆ ಇ-ಸ್ವೀಕೃತಿ ತಂತ್ರಾಂಶದಲ್ಲ್ಲಿ ಸುಧಾರಿತ ತಂತ್ರಜ್ಞಾನದ ಪಿಓಎಸ್ ಮಷೀನ್ ಸೇವೆ ಪ್ರಾರಂಬಿಸಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಅವರು ಶನಿವಾರ ಪಟ್ಟಣದ ಪುರಸಭೆಯಲ್ಲಿ ಪಿಓಎಸ್ ಮಷೀನ ಗೆ ಚಾಲನೆ ನೀಡಿ ಮಾತನಾಡಿ, ಸಾರ್ವಜನಿಕರು ತಮ್ಮ ಮನೆ ಅಸ್ತಿ ತೆರಿಗೆ, ನೀರಿನ ಕರ, ಟ್ರೇಡ್ ಲೈಸನ್ಸ್, ಫೀ, ದಂಡ ಇನ್ನಿತರ ಎಲ್ಲ ರೀತಿಯ ಪುರಸಭೆಯ ಎಲ್ಲ ಶುಲ್ಕಗಳನ್ನು ತಮ್ಮ ಎಟಿಎಂ, ಫೆÇೀನ ಪೇ, ಗೂಗಲ್ ಪೇ, ಕ್ಯೂ ಆರ್ ಕೋಡ್ ಮೂಲಕ ಸ್ಕ್ಯಾನ್ ಪುರಸಭೆಯಲ್ಲಿರುವ ಪಿಓಎಸ್ ಮಷೀನ್ ಮೂಲಕ ಪಾವತಿಸಿ ಸೇವೆಯನ್ನು ಒದಗಿಸಲಾಗಿದೆ.

ತೆರಿಗೆ ಕಟ್ಟುವರರಿಗೆ ಸಮಯ ಉಳಿತಾಯ ಜೊತೆಗೆ ತ್ವರಿತ ಸೇವೆ ಸಿಗುತ್ತದೆ ಎಂದರು.
ತೆರಿಗೆದಾರರು ಸಕಾಲದಲ್ಲಿ ಆಸ್ತಿ ತೆರಿಗೆ ಪಾವತಿಸಿ ಪಟ್ಟಣದ ಅಭಿವೃದ್ದಿಗೆ ಸಹಕರಿಸಿ, ಸ್ವಚ್ಚ ಮತ್ತು ತ್ಯಾಜ್ಯ ರಹಿತ ಬೈಲಹೊಂಗಲ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಪುರಸಭೆ ಮುಖ್ಯಾಧಿಕಾರಿ ಕೆ.ಆಯ್.ನಾಗನೂರ, ಏಕ್ಸಿಸ್ ಬ್ಯಾಂಕ ವ್ಯವಸ್ಥಾಪಕ ಜಾವೇದ ಜಾಡವಾಲೆ, ಸಂತೋಷ ಮುತವಾಡ, ಅಧ್ಯಕ್ಷ ಬಾಬು ಕುಡಸೋಮನ್ನವರ, ಸ್ಥಾಯಿ ಸಮಿತಿ ಚೇರಮನ ಅರ್ಜುನ ಕಲಕುಟಕರ, ಸದಸ್ಯರಾದ ರಾಜಶೇಖರ ಮೂಗಿ, ಬಸವರಾಜ ಜನ್ಮಟ್ಟಿ, ಬುಡ್ಡೇಸಾಬ ಶಿರಸಂಗಿ, ಉಳವಪ್ಪ ಬಡ್ಡಿಮನಿ, ವಿಜಯ ಬೋಳನ್ನವರ, ಶಿವಬಸ್ಸು

ಕುಡಸೋಮನ್ನವರ, ಸದ್ರುದ್ದಿನ ಅತ್ತಾರ, ಜಗದೀಶ ಜಂಬಗಿ, ಸಾಗರ ಭಾವಿಮನಿ, ಶಿವಾನಂದ ಕೋಲಕಾರ, ಮಹೇಶ ಹರಕುಣಿ, ಬಸವರಾಜ ಶಿಂತ್ರಿ, ಕುಮಾರ ಭರಮನ್ನವರ, ಉಮಾ ಹೊಸೂರ, ವಾಣಿಶ್ರೀ ಪತ್ತಾರ, ಪ್ರೇಮಾ ಇಂಚಲ, ಸುಷ್ಮಾ ಗುಂಡ್ಲೂರ,

ಹೇಮಲತಾ ಹಿರೇಮಠ, ಶಶಿಕಲಾ ಕಲ್ಲೋಳ್ಳಿ, ಅಂಜನಾ ಬೊಂಗಾಳೆ, ದಿಲ್‍ಶಾದಬೆಗಂ ನಧಾಪ, ಶ್ರೀದೇವಿ ದೇವಲಾಪುರ, ಅಂಬಿಕಾ ಕೊಟಬಾಗಿ, ಲಕ್ಷ್ಮೀ ಬಡ್ಲಿ, ಅಮಿರಬಿ ಬಾಗವಾನ, ಸಿಬ್ಬಂದಿಗಳಾದ ಉಮಾ ಬೇಟಗೇರಿ, ರಮೇಶ ಹಿಟ್ಟಣಗಿ, ಎಂ.ಐ.ಕುಟ್ರಿ, ಸೋನಾಲಿ ಬುಬನಾಳೆ, ಎ.ವಾಯ್.ಹೆಗಡೆ, ತಿರುಪತಿ ಲಮಾಣಿ, ಬಿ.ಐ.ಗುಡಿಮನಿ, ಗಿರೀಶ ಜಿಗಜಿನ್ನಿ, ಸುರೇಶ ಓಗಿ, ಐ.ಬಿ.ಕೊಂಗವಾಡ, ಸೋಮನಿಂಗ ದೊಡಮನಿ ಮುಂತಾದವರು ಇದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');