ಓಲಿಂಪಿಕ್ಸ್ ಕುಸ್ತಿಯಲ್ಲಿ ಕಂಚಿನ ಪದಕ ಗಳಿಸಿದ ಭಾರತದ ಬಜರಂಗ ಪೂನಿಯಾ

0
🌐 Belgaum News :

ಟೋಕಿಯೋ: ಒಲಿಂಪಿಕ್ಸ್ 2020 ರಲ್ಲಿ ಶನಿವಾರ ನಡೆದ 65 ಕೆಜಿ ಫ್ರೀಸ್ಟೈಲ್ ವಿಭಾಗದ ಪಂದ್ಯದಲ್ಲಿ ಕಜಕಿಸ್ತಾನದ ದೌಲತ್ ನಿಯಾಜ್​ಬೆಕವೊ ಅವರನ್ನು 8-0 ಅಂತರದಿಂದ ಮಣಿಸಿದ ಬಜರಂಗ್ ಪುನಿಯಾ ಭಾರತಕ್ಕೆ ಮತ್ತೊಂದು ಕಂಚಿನ ಪದಕ ತಂದುಕೊಟ್ಟಿದ್ದಾರೆ.

ಈ ಪದಕದ ಗೆಲುವಿನೊಂದಿಗೆ ಈ ಬಾರಿ ಭಾರತ 4 ಕಂಚಿನ ಪದಕ ಗೆದ್ದಂತಾಗಿದೆ. ಬಜರಂಗ್ ಪುನಿಯಾ ಅವರ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಶನಿವಾರ ನಡೆದ 65 ಕೆಜಿ ಫ್ರೀಸ್ಟೈಲ್ ವಿಭಾಗದ ಪಂದ್ಯದಲ್ಲಿ ಕಜಕಿಸ್ತಾನದ ದೌಲತ್ ನಿಯಾಜ್​ಬೆಕವೊ ಅವರನ್ನು 8-0 ಅಂತರದಿಂದ ಮಣಿಸಿದ ಬಜರಂಗ್ ಪುನಿಯಾ ಭಾರತಕ್ಕೆ ಮತ್ತೊಂದು ಕಂಚಿನ ಪದಕ ತಂದುಕೊಟ್ಟಿದ್ದಾರೆ. ಈ ಪದಕದ ಗೆಲುವಿನೊಂದಿಗೆ ಈ ಬಾರಿ ಭಾರತ 4 ಕಂಚಿನ ಪದಕ ಗೆದ್ದಂತಾಗಿದೆ. ಬಜರಂಗ್ ಪುನಿಯಾ ಅವರ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಕಂಚಿನ ಪದಕಕ್ಕೆ ಬಜರಂಗ್ ಪುನಿಯಾ ಕೊರೊಳೊಡ್ಡುತ್ತಿದ್ದಂತೆ, ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, “ಟೋಕಿಯೋ ಒಲಿಂಪಿಕ್ಸ್​ನಿಂದ ಮತ್ತೊಂದು ಸಂತೋಷಕರ ಸುದ್ದಿ! ಅದ್ಭುತವಾದ ಹೋರಾಟ ಬಜರಂಗ್ ಪುನಿಯಾ. ನಿಮ್ಮ ಸಾಧನೆಗಾಗಿ ಅಭಿನಂದನೆಗಳು, ನಿಮ್ಮ ಗೆಲುವು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆ ಮತ್ತು ಸಂತೋಷವನ್ನು ನೀಡಿದೆ ಎಂದು ಶುಭ ಹಾರೈಸಿದ್ದಾರೆ. ಇದರ ಬೆನ್ನಲ್ಲೇ ಕರೆ ಮಾಡಿ ಮಾತನಾಡಿದ ಪ್ರಧಾನಿ,  ಕಂಚಿನ ಪದಕ ಗೆದ್ದಿದ್ದಕ್ಕೆ ನಿಮಗೆ ನಮ್ಮ ಕಡೆಯಿಂದ ಅಭಿನಂದನೆ. ನೀವು ಪಟ್ಟಂತಹ ಕಠಿಣ ಪರಿಶ್ರಮ, ಬದ್ದತೆಗೆ ನಾವು ಚಿರಋಣಿ. ನಿಮ್ಮ ಸಾಧನೆಯನ್ನು ಇಡೀ ಭಾರತ ಕೊಂಡಾಡುತ್ತಿದೆ ಎಂದು ಅಭಿನಂದಿಸಿದ್ದಾರೆ.

ಭಾರತೀಯ ಕುಸ್ತಿಗೆ ಒಂದು ವಿಶೇಷ ಕ್ಷಣ! ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕಂಚು ಗೆದ್ದಿದ್ದಕ್ಕಾಗಿ ಬಜರಂಗ್ ಪುನಿಯಾ ಅವರಿಗೆ ಅಭಿನಂದನೆಗಳು ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅಭಿನಂದನೆ ಸಲ್ಲಿಸಿದ್ದಾರೆ.

ಈ ಹಿಂದೆ ಸೆಮಿ ಫೈನಲ್​ವರೆಗೂ ಭರ್ಜರಿ ಪ್ರದರ್ಶನ ನೀಡಿದ್ದ ಪುನಿಯಾ ಫೈನಲ್​ ಪ್ರವೇಶಿಸುವಲ್ಲಿ ವಿಫಲರಾಗಿದ್ದರು. ಅಜರ್‌ಬೈಜಾನಿಯಾದ ಹಾಜಿ ಆಲಿಯಾವ್‌ ವಿರುದ್ಧ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ 5-12 ಅಂಕಗಳ ಅಂತರದಿಂದ ಪುನಿಯಾ ಸೋಲನುಭವಿಸಿದ್ದರು. ಆದರೆ 3ನೇ ಸ್ಥಾನಕ್ಕಾಗಿ ನಡೆದ ಹೋರಾಟದಲ್ಲಿ ಈ ಹಿಂದಿನ ತಪ್ಪುಗಳನ್ನು ತಿದ್ದಿಕೊಂಡಿದ್ದ ಭಾರತೀಯ ಕುಸ್ತಿಪಟು ಆಕ್ರಮಣಕಾರಿ ಆಟದೊಂದಿಗೆ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು. ಅದರಂತೆ ಎದುರಾಳಿಗೆ ಯಾವುದೇ ಅಂಕ ಬಿಟ್ಟುಕೊಡದೆ 8-0 ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರು.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');