ಸಾರ್ವಜನಿಕ ಆಸ್ಪತ್ರೆಗಳಿಗೆ ಆಕ್ಸಿಜನ್ ಕಾನ್ಸೆಂಟೆಂಟರ್ ವಿತರಿಸುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಉಜ್ಜಿವನ್ ಬ್ಯಾಂಕಿನ ವಿತರಣಾ ವ್ಯವಸ್ಥಾಪಕ ಶ್ರೀನಿವಾಸ ಮೂರ್ತಿ ಹೇಳಿದರು.

0
🌐 Belgaum News :

ಬೈಲಹೊಂಗಲ- ಸಾರ್ವಜನಿಕ ಆರೋಗ್ಯದ ಹಿತದೃಷ್ಟಿ ಇಟ್ಟುಕೊಂಡು ಉಜ್ಜಿವನ್ ಬ್ಯಾಂಕಿನಿಂದ ಸಾರ್ವಜನಿಕ ಆಸ್ಪತ್ರೆಗಳಿಗೆ ಆಕ್ಸಿಜನ್ ಕಾನ್ಸೆಂಟೆಂಟರ್ ವಿತರಿಸುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಉಜ್ಜಿವನ್ ಬ್ಯಾಂಕಿನ ವಿತರಣಾ ವ್ಯವಸ್ಥಾಪಕ ಶ್ರೀನಿವಾಸ ಮೂರ್ತಿ ಹೇಳಿದರು.

ಅವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಉಜ್ಜಿವನ್ ಬ್ಯಾಂಕಿನಿಂದ ಆಕ್ಸಿಜನ್ ಕಾನ್ಸೆಂಟೆಂಟರ್ ಹಾಗೂ ಕೋವಿಡ ಪ್ರಶಂಸನಾ ಪತ್ರ ಮುಖ್ಯ ವೈದ್ಯಾಧಿಕಾರಿಗೆ ಹಸ್ತಾಂತರಿಸಿ ಮಾತನಾಡಿ, ಕೋವಿಡ ಸೊಂಕಿನಿಂದ ಲಕ್ಷಾಂತರ ರೋಗಿಗಳು ಆಕ್ಸಿಜನ್ ಕೊರತೆಯಿಂದ ಬಳಲುತ್ತಿದ್ದು ಇದನ್ನು ಮನಗಂಡು ನಮ್ಮ ಬ್ಯಾಂಕಿನ ವತಿಯಿಂದ ಈಗಾಗಲೇ ರಾಜ್ಯಾದ್ಯಂತ ಆಯಾ ಸಾರ್ವಜನಿಕ ಆಸ್ಪತ್ರೆಗಳಿಗೆ ವಿತರಿಸಲಾಗಿದ್ದು ಮುಂದೆ ಕೂಡ ಆಸ್ಪತ್ರೆಗಳಿಗೆ ನೆರವು ನೀಡುವುದಾಗಿ ಭರವಸೆ ನೀಡಿದರು.

ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಉಜ್ಜಿವನ್ ಬ್ಯಾಂಕಿನಿಂದ ಆಕ್ಸಿಜನ್ ಕಾನ್ಸೆಂಟೆಂಟರ್ ವಿತರಣೆ ಮಾಡುವ ಕಾರ್ಯ ಅನನ್ಯವಾಗಿದೆ ಎಂದರು.

ಮುಖ್ಯ ವೈದ್ಯಾಧಿಕಾರಿ ಡಾ.ನಿರ್ಮಲಾ ಮಹಾಂತಶೆಟ್ಟಿ ಮಾತನಾಡಿದರು. ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಮಹೇಶ ಬೆಲ್ಲದ, ಡಾ.ಮಹಾಂತೇಶ ಕಳ್ಳಿಬಡ್ಡಿ, ಪುರಸಭೆ ಸದಸ್ಯ ಬಸವರಾಜ ಜನ್ಮಟ್ಟಿ, ಬ್ಯಾಂಕಿನ ಅಭಿದುಲ್ಲಾ ಶೇಖ, ರಾಜೇಂದ್ರ ಶಿಂತ್ರಿ, ಸಂದೀಪ

ಬೋಂಗಾಳೆ, ಬಸವರಾಜ ಯಡೂರ, ಮಹೇಶ ರೆಡ್ಡಿ, ಪ್ರಶಾಂತ ಹಟ್ಟಿಹೊಳಿ ಹಾಗೂ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ, ಸಾರ್ವಜನಿಕರು ಇದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');