ಮಾಜಿ ಸಚಿವ ಶ್ರೀಮಂತ ಪಾಟೀಲಗೆ ಸಚೀವ ಸ್ಥಾನಕ್ಕಾಗಿ ಜೈನ ಸಮಾಜದ ಸಭೆ

0
🌐 Belgaum News :
ಕಾಗವಾಡ: ಶಾಸಕ ಶ್ರೀಮಂತ ಪಾಟೀಲ ಅವರನ್ನು ಸಂಪುಟದಿಂದ ಕೈ ಬಿಟ್ಟ ಹಿನ್ನೆಲೆಯಲ್ಲಿ ಪ್ರತಿಭಟನಾ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳುವ ಮೂಲಕ
ಕಾಗವಾಡ ತಾಲೂಕಿನ ‌ಶೆಡಬಾಳ ಗ್ರಾಮದಲ್ಲಿ ಬಿಜೆಪಿ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಬೆಳಗಾವಿ,ಬಾಗಲಕೋಟೆ,ವಿಜಯಪುರ ಜಿಲ್ಲೆಗಳ ಜೈನ ಸಮಾಜದ ಮುಖಂಡರಿಂದ ಸಭೆ ನಡೆಸಲಾಗಿದ್ದು
ಬೆಳಗಾವಿ ಜಿಲ್ಲೆಯ ದಿಗಂಬರ ಜೈನ ಮಂದಿರಗಳ ಒಕ್ಕೂಟದಿಂದ
ಶೇಡಬಾಳ ಪಟ್ಟಣದ ಶಾಂತಿಸಾಗರ ಅನಾಥಾಶ್ರಮದಲ್ಲಿ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಮಾಜಿ ಸಚೀವ ಶ್ರೀಮಂತ ಪಾಟೀಲ ರಾಜ್ಯದಲ್ಲಿ ಜವಳಿಖಾತೆ ಮತ್ತು ಅಲ್ಪ ಸಂಖ್ಯಾತ ಸಚೀವರಾದ ಬಳಿಕ ಜೈನ ಸಮುದಾಯಕ್ಕೆ ಕೊಟ್ಟ ಕೊಡುಗೆಗಳ ಕುರಿತು ಚರ್ಚೆ ನಡೆಸಲಾಯಿತು.ಈ ವೇಳೆ ಮಾತನಾಡಿದ
ಉಗಾರದ ಪದ್ಮಾವತಿ ಮಂದಿರದ ಧರ್ಮಾಧಿಕಾರಿ ಶೀತಲ ಪಾಟೀಲ ಮಾತನಾಡುವಾಗ, ಕಾಗವಾಡ ಕ್ಷೇತ್ರ ಶಾಸಕ ಶ್ರೀಮಂತ ಪಾಟೀಲರು ಅಲ್ಪಸಂಖ್ಯಾತ ಇಲಾಖೆ ಜವಾಬ್ದಾರಿ ವಹಿಸಿಕೊಂಡು ಕಳೇದ 60 ವರ್ಷಗಳಲ್ಲಿ ಪ್ರಥಮ ಬಾರಿಗೆ ಇದೊಂದು ಇಲಾಖೆಯಿದೆಯೆಂಬ ಮಾಹಿತಿ ಅವರಿಂದ ತಿಳಿದು ಬಂದಿದೆ. ನೂರಾರು ಕೋಟಿ ರೂ. ಅನುದಾನ ಜೈನ ಸಮಾಜದ ಅಭಿವೃದ್ಧಿಗಾಗಿ ನೀಡಿದ್ದಾರೆ.
ಜೈನ ಸಮಾಜದ ಕಾಶಿ ಎಂದು ಖ್ಯಾತಿ ಪಡೆದ ಶ್ರವಣಬೆಳಗೋಳ ತೀರ್ಥಕ್ಷೇತ್ರ ಅಭಿವೃದ್ಧಿಗಾಗಿ 50 ಕೋಟಿ, ಬೆಳಗಾವಿಯಲ್ಲಿ ಜೈನ ಸಮಾಜದ ಸಮುದಾಯ ಭವನ ನಿರ್ಮಿಸಲು 200 ಕೋಟಿ ರೂ. ಅನುದಾನ ಮಂಜೂರುಗೊಳಿಸಿದ್ದಾರೆ. ಇನ್ನೂ ಸಮಾಜದ ಅಭಿವೃದ್ಧಿವಾಗಬಹುದಿತ್ತು. ಆದರೆ, ಬಸವರಾಜ ಬೊಮ್ಮಾಯಿ ಮಂತ್ರಿ ಮಂಡಳದಿಂದ ಅವರನ್ನು ಕೈಬಿಟ್ಟಿದ್ದು ಇದೊಂದು ಅನ್ಯಾಯ. ಇದನ್ನು ಸರಿಪಡಿಸಲು ಉಳಿದ 4 ಸ್ಥಾನಗಳಲ್ಲಿ ಅವರಿಗೆ ಸಚಿವ ಸ್ಥಾನ ನೀಡಿ ಇದೇ ಖಾತೆ ಜವಾಬ್ದಾರಿ ಒಪ್ಪಿಸಬೇಕೆಂದು ಹಕ್ಕು ಒತ್ತಾಯ ಮಂಡಿಸಿದ್ದೇವೆಯೆಂದರು.
ನಂತರ ಮಾತನಾಡಿದ
ನ್ಯಾಯವಾದಿಗಳಾದ ಅಭಯಕುಮಾರ ಅಕಿವಾಟೆ ಮಾತನಾಡುವಾಗ, ಶಾಸಕ ಶ್ರೀಮಂತ ಪಾಟೀಲರನ್ನು ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಿಂದ ಕೈಬಿಟ್ಟಿದ್ದು, ಇದು ತಪ್ಪು. ಅವರು ಬಿ.ಎಸ್.ಯಡಿಯೂರಪ್ಪ ಇವರು ನೀಡಿರುವ ಖಾತೆಗಳ ಜವಾಬ್ದಾರಿ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಜೈನ ಸಮಾಜದ ಅನೇಕ ಮಂದಿರಗಳ ಅಭಿವೃದ್ಧಿಗಾಗಿ ಅನುದಾನ ನೀಡಿದ್ದು, ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗಾಗಿ ವಸತಿಗೃಹ, ಮುನಿಗಳ ನಿವಾಸ ನಿರ್ಮಿಸಲು ಅನುದಾನ ನೀಡಿದ್ದು ಅವರಿಗೆ ಮತ್ತೇ ಇದೇ ಖಾತೆ ಜವಾಬ್ದಾರಿ ನೀಡಿ ಸೇವೆಗಾಗಿ ಅನವುಮಾಡಿಕೊಡಬೇಕೆಂದು ಹಕ್ಕು ಒತ್ತಾಯ ಮಂಡಿಸಿದ್ದೇವೆಯೆಂದರು.
ಸಮಾರಂಭದಲ್ಲಿ ಜೈನ ಬಾಂಧವರು, ಶ್ರೀಮಂತ ಪಾಟೀಲರಿಗೆ ಸಚಿವ ಸ್ಥಾನ ನೀಡಲೇಬೇಕೆಂಬ ಘೋಷಣೆ ಕೂಗುವುದೊಂದಿಗೆ ಸರಕಾರಕ್ಕೆ ಮನವಿ ಮಾಡಿಕೊಂಡರು.
ಶಾಂತಿಸಾಗರ ಜೈನ ಆಶ್ರಮದ ವ್ಯವಸ್ಥಾಪಕ ರಾಜು ನಾಂದ್ರೆ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಮುಖಂಡರಾದ ಭರತೇಶ ಪಾಟೀಲ, ನ್ಯಾಯವಾದಿ ಎಸ್.ಡಿ.ಪಾಟೀಲ, ಭಮ್ಮಣ್ಣ ಚೌಗುಲೆ, ಅಪ್ಪಾಸಾಹೇಬ ಚೌಗುಲೆ, ಮಹಾವೀರ ಕಾತ್ರಾಳೆ, ಅರುಣ ಗಣೇಶವಾಡಿ, ಭೂಪಾಲ ಹೋಸುರೆ, ಸೇರಿದಂತೆ ಉಗಾರ, ಶೇಡಬಾಳ, ಕಾಗವಾಡ, ಐನಾಪುರ, ಅಥಣಿ, ಜಮಖಂಡಿ, ಚಿಕ್ಕೋಡಿ, ರಾಯಬಾಗ ತಾಲ್ಲೂಕಿನ ಸಾವಿರಾರು ಕಾರ್ಯಕತರು ಉಪಸ್ಥಿತರಿದ್ದರು.
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');