ಸಚೀವರಿಗೆ ಶುಭಕೋರಿದ ಮಾಜಿ ಡಿ ಸಿ ಎಮ್ ಲಕ್ಷ್ಮಣ ಸವದಿ

0
🌐 Belgaum News :
ನೂತನ ಸಚಿವ ಸಂಪುಟ ರಚನೆಯ ಬಳಿಕ ಅಥಣಿ ಪಟ್ಟಣದ ಸ್ವಗೃಹದಲ್ಲಿ ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಸಚಿವ ಸಂಪುಟದ ಸದಸ್ಯರಿಗೆ ಶುಭಾಷಯ ಕೋರಿದರು.ಈ ವೇಳೆ ಲಕ್ಷ್ಮಣ ಸವದಿ ಅವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟ ಬಗ್ಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು ಬೆಂಬಲಿಗರಲ್ಲಿನ
ಪ್ರತಿಭಟನೆ ಮತ್ತು ಆಗ್ರಹಗಳು ಅಭಿಮಾನಿಗಳು ಮತ್ತು ಅವರವರ ಮುಖಂಡರ ನಡುವಿನ ಸಂಭಂಧದ ಅನುಗುಣವಾಗಿ ಇರುತ್ತದೆ.
ಸೋತತಂತಹ ವ್ಯಕ್ತಿಯನ್ನು ಡಿ ಸಿಎಮ್ ಮಾಡಿದ್ದಾರೆ ಸಚೀವನನ್ನಾಗಿ ಮಾಡಿದ್ದಾರೆ ಹೆಚ್ಚಿನ ಜವಾಬ್ದಾರಿ ನೀಡುವ ಮೂಲಕ ಉತ್ತಮ ಅವಕಾಶಗಳನ್ನು ನನಗೆ ಕೊಟ್ಟಿದ್ದಾರೆ .ಕೆಲವೊಮ್ಮೆ ಮತ್ತೊಬ್ಬರಿಗೆ ಅವಕಾಶ ಕೊಡುವುದಕ್ಕಾಗಿ ಅವಧಿ ಆಧಾರಿತ ಖಾತೆ ಹಂಚಿಕೆಯನ್ನು ಪಕ್ಷದ ವರಿಷ್ಟರು ಮಾಡಿದ್ದಾರೆ.
ರಾಜ್ಯದ  ಸಚೀವ ಸಂಪುಟದಲ್ಲಿ ಮೂವತ್ತ ಮೂರು ಖಾತೆಗಳಿವೆ ಒಬ್ಬರು ಮುಖ್ಯಮಂತ್ರಿ ಆಗುತ್ತಾರೆ ಆದರೆ ಆಸೆ ಎಲ್ಲ 224  ಜನರಿಗೂ ಇರುತ್ತದೆ.
ಉತ್ತರ ಕರ್ನಾಟಕದವರು ನನ್ನ ಆತ್ಮೀಯರಾದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾರೆ ವಿಶೇಷವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿ ಆಗುತ್ತದೆ ಎಂಬ ಆಶಯ ಇದೆ.
ಉಳಿದ ಇಪ್ಪತ್ತು ತಿಂಗಳಲ್ಲಿ ಉತ್ತಮ ಯೋಜನೆಗಳನ್ನು ಕೊಡಲಿದ್ದೇವೆ. ಕೊರೊನಾ ಮಹಾಮಾರಿ,ಮಹಾಪೂರ,ಪ್ರವಾಹ ಸೇರಿದಂತೆ ಹಲವು ಕಂಟಕಗಳಿಂದ ಸ್ವಲ್ಪ ಕೆಲಸಗಳು ವಿಳಂಬವಾಗಿವೆ.ಈ ಬಾರಿಯ ಸಚಿವ ಸಂಪುಟದಲ್ಲಿ
ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಭಾಗದಲ್ಲಿ ಖಾತೆಗಳನ್ನು ಬ್ಯಾಲೆನ್ಸ ಆಗಿ ಮಾಡಿದ್ದಾರೆ.
ಉತ್ತರ ಕರ್ನಾಟಕದ ಜನರಿಗೆ ಒಳ್ಳೊಳ್ಳೆಯ ಖಾತೆ ಕೊಟ್ಟು ಬ್ಯಾಲೆನ್ಸ್ ಮಾಡಿ ಜಾಣತನ ಮೆರೆದಿದ್ದಾರೆ.
2023 ಚುನಾವಣೆಯಲ್ಲಿ ಮತ್ತೆ ಭಾರತೀಯ ಜನತಾಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ವನ್ನು ನಾವೆಲ್ಲ ಮಾಡಿದ್ದೇವೆ.
ಮುಂಬರುವ ದಿನಗಳಲ್ಲಿ ಉತ್ತಮ ಅವಕಾಶಗಳು ಬರುತ್ತವೆ ಆದ್ದರಿಂದ ನಮ್ಮ  ಅಭಿಮಾನಿಗಳು ಮತ್ತು ಕಾರ್ಯಕರ್ತರು ಯಾವುದೇ ರೀತಿ ದೃತಿಗೆಡಬಾರದು.
ನಾನು ನನ್ನ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ ಯಾವುದೇ ರೀತಿಯ ಪಕ್ಷವಿರೋಧಿ ಚಟುವಟಿಕೆ ಮತ್ತು ಪ್ರತಿಭಟನೆ ಮಾಡದೆ ಪಕ್ಷ ಸಂಘಟನೆಗೆ ಒತ್ತು ಕೊಡಲು ಕೈ ಜೋಡಿಸಬೇಕು ಎಂದರು
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');