ಶ್ರೀಮಂತ ಪಾಟೀಲರನ್ನು ನೂತನ ಸಂಪುಟದಿಂದ ಕೈ ಬಿಟ್ಟಿರುವುದಕ್ಕೆ ಕರ್ನಾಟಕದ ಸಮಸ್ತ ಜೈನ ಸಮುದಾಯಕ್ಕೆ ಆಘಾತವಾಗಿದೆ ಎಂದು ಪಿಎಲ್‍ಡಿ ಬ್ಯಾಂಕಿನ ಅಧ್ಯಕ್ಷ ಹಾಗೂ ಸಮಾಜದ ಯುವಮುಖಂಡ ಶೀತಲಗೌಡ ಪಾಟೀಲ ಹೇಳಿದರು.

0
🌐 Belgaum News :

ಶೇಡಬಾಳ : ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಾರಣಕರ್ತರಾಗಿರುವ ಶಾಸಕ ಶ್ರೀಮಂತ ಪಾಟೀಲರನ್ನು ನೂತನ ಸಂಪುಟದಿಂದ ಕೈ ಬಿಟ್ಟಿರುವುದಕ್ಕೆ ಕರ್ನಾಟಕದ ಸಮಸ್ತ ಜೈನ ಸಮುದಾಯಕ್ಕೆ ಆಘಾತವಾಗಿದೆ ಎಂದು ಪಿಎಲ್‍ಡಿ ಬ್ಯಾಂಕಿನ ಅಧ್ಯಕ್ಷ ಹಾಗೂ ಸಮಾಜದ ಯುವಮುಖಂಡ ಶೀತಲಗೌಡ ಪಾಟೀಲ ಹೇಳಿದರು.

ಅವರು ಶುಕ್ರವಾರ ದಿ. 6 ರಂದು ಶೇಡಬಾಳ ಪಟ್ಟಣದ ಶ್ರೀ ಶಾಂತಿಸಾಗರ ಆಶ್ರಮದಲ್ಲಿ ಬೆಳಗಾವಿ ಜಿಲ್ಲೆ ದಿಗಂಬರ ಜೈನ ಮಂದಿರಗಳ ಒಕ್ಕೂಟ ಹಾಗೂ ಜೈನ ಸಮುದಾಯ ಮುಖಂಡರ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟದಲ್ಲಿ ಕಾಗವಾಡ ಶಾಸಕರಾದ ಶ್ರೀಮಂತ ಪಾಟೀಲರಿಗೆ ಸಚಿವ ಸ್ಥಾನ ಕಲ್ಪಿಸುವಲ್ಲಿ ವಿಫಲವಾಗಿರುವ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನಾ ಸಭೆ ಹಾಗೂ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಹಕ್ಕೋತ್ತಾಯ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಅವರು ಮುಂದೆ ಮಾತನಾಡಿ ಕಳೆದ 50 ವರ್ಷಗಳಲ್ಲಿ ಯಾವುದೇ ಸಚಿವರು ಮಾಡದೇ ಇರುವುದಂತಹ ಕೆಲಸವನ್ನು ಶ್ರೀಮಂತ ಪಾಟೀಲರು ಮಾಡಿದ್ದಾರೆ. ಅಲ್ಪಸಂಖ್ಯಾತರ ಸಚಿವರಾಗಿ ಜೈನ ಸಮಾಜಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆಂದು ಹೇಳಿದರು.
ಯುವ ನ್ಯಾಯವಾದಿ ಅಭಯಕುಮಾರ ಅಕಿವಾಟೆ ಮಾತನಾಡಿ ಶ್ರೀಮಂತ ಪಾಟೀಲರು ಮರಾಠಾ ಸಮಾಜದಲ್ಲಿ ಜನ್ಮ ತಾಳಿದ್ದರೂ ಕೂಡ ಜೈನ ಧರ್ಮದ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೈನ ಧರ್ಮಿಯರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರ ಅಧಿಕಾರವಧಿಯಲ್ಲಿ ಅಲ್ಪಸಂಖ್ಯಾತರ ಬಸದಿ, ಮಸೀದಿಗಳು ಎಂದು ಕಾಣದೇ ಇರುವಂತಹ ಅಭಿವೃದ್ಧಿಯನ್ನು ಹೊಂದಿವೆ. ಮುಂಬರುವ ದಿನಗಳಲ್ಲಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.

ಸಪ್ತಸಾಗರದ ರಾಜು ನಾಡಗೌಡ ಮಾತನಾಡಿ ಇಲ್ಲಿಯವರೆಗೆ ನಾವು ನಮ್ಮ ಸಮಾಜದ ಕೆಲಸಗಳನ್ನು ತೆಗೆದುಕೊಂಡು ಸಚಿವರ ಮನೆ ಬಾಗಿಲವರೆಗೆ ಸುತ್ತಾಡಿದರು ಕೂಡ ಕೆಲಸವಾಗುತ್ತಿರಲಿಲ್ಲ. ಆದರೆ ಫಲಾನುಭವಿಗಳ ಮನೆ ಬಾಗಿಲಿಗೆ ಶ್ರೀಮಂತ ಪಾಟೀಲರು ಬಂದು ಕೆಲಸ ಮಾಡಿಕೊಟ್ಟಿರುವ ಏಕೈಕ ಸಚಿವರಾಗಿದ್ದರು ಎಂದು ಹೇಳಿದ ಅವರು ಶ್ರೀಮಂತ ಪಾಟೀಲರಿಗೆ ಮತ್ತೇ ಸಚಿವ ಸ್ಥಾನ ನೀಡಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಖಾತೆಯನ್ನು ಒದಗಿಸಿಕೊಡುವಂತೆ ಒತ್ತಾಯಿಸಿದರು.
ಕಾಗವಾಡ, ಅಥಣಿ, ಚಿಕ್ಕೋಡಿ, ರಾಯಬಾಗ, ಬಾಗಲಕೋಟ ಮೊದಲಾದ ತಾಲೂಕುಗಳಿಂದ ನೂರಾರು ಸಂಖ್ಯೆಯಲ್ಲಿ ಜೈನ ಮುಖಂಡರು ಆಗಮಿಸಿ ಶ್ರೀಮಂತ ಪಾಟೀಲರ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಸಭೆಯಲ್ಲಿ ಸಮಸ್ತ ಜೈನ ಸಮುದಾಯದ ವತಿಯಿಂದ ಶ್ರೀಮಂತ ಪಾಟೀಲರಿಗೆ ಸಚಿವ ಸ್ಥಾನ ನೀಡಲೇಬೇಕೆಂದು ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಲಾಯಿತು.
ಈ ಸಮಯದಲ್ಲಿ ಶೀತಲಗೌಡ ಪಾಟೀಲ,ಅಭಯಕುಮಾರ ಅಕಿವಾಟೆ, ರಾಜು ನಾಂದ್ರೆ, ರಾಜು ನಾಡಗೌಡ, ಅಪ್ಪಾಸಾಬ ಚೌಗಲೆ, ಜಯಪಾಲ ಯರಂಡೋಲಿ, ಸುಭಾಷ ಕಠಾರೆ, ಟಿ.ಕೆ.ಧೋತರೆ, ಕುಮಾರ ಮಾಲಗಾಂವೆ, ದಾದಾ ಪಾಟೀಲ, ಶ್ರೇಣಿಕ ಅಕ್ಕೋಳೆ, ಅನಿಲ ಸುಣಕೆ, ಬೋಮ್ಮಣ್ಣ ಚೌಗಲೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜೈನ ಸಮಾಜದ ಅನೇಕ ಮುಖಂಡರು ಭಾಗವಹಿಸಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');