ಮಲ್ಲಾಪೂರದಲ್ಲಿ ಸಸ್ಯ ಸಂರಕ್ಷಣಾ ಜಾಗೃತಿ ಅಭಿಯಾನ

0
🌐 Belgaum News :

ಬೈಲಹೊಂಗಲ-ರೈತರ ಬೆಳೆ ಸಂರಕ್ಷಣೆಯ ದೃಷ್ಟಿಯಿಂದ ಬೈಲಹೊಂಗಲ ತಾಲೂಕಿನಲ್ಲಿ ನೂತನ ಅಭಿಯಾನವನ್ನು ಹಮ್ಮಿಕೊಂಡಿದ್ದು, ರೈತರು ಬೆಳೆದ ತಮ್ಮ ಬೆಳೆಗಳನ್ನು ಸಂರಕ್ಷಿಸಿಕೊಂಡು ಉತ್ತಮ ಫಸಲು ಪಡೆದು ಆರ್ಥಿಕವಾಗಿ ಸಬಲರಾಗಲು, ಕೃಷಿ ಇಲಾಖೆಯಿಂದ ಮಾಹಿತಿ ಪಡೆದುಕೊಳ್ಳಬೇಕೆಂದು ತಾಲೂಕಾ ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ ಹೇಳಿದರು.

ಅವರು ಸಮೀಪದ ನೇಸರಗಿ-ಮಲ್ಲಾಪೂರ ಕೆ.ಎನ್ ಗ್ರಾಮದ ಬಸವೇಶ್ವರ ದೇವಸ್ಥಾನದ ಸಭಾಭವನದಲ್ಲಿ ಕೃಷಿ ಇಲಾಖೆಯಿಂದ 2021-22ನೇ ಸಾಲಿನ ಮುಂಗಾರು ಹಂಗಾಮಿನ ಸಸ್ಯ ಸಂರಕ್ಷಣಾ ಜಾಗೃತಿ ಅಭಿಯಾನವನ್ನು ಉದ್ದೇಶಿಸಿ ಅವರು ಮಾತನಾಡುತ್ತಾ, ರೈತರ ಬೆಳೆಗಳಿಗೆ ಬಂದಂತಹ ಹಾಗೂ ಮುಂದೆ ರೋಗ ಭಾದೆ ಬರದಂತೆ ಕ್ರಮ ಜರುಗಿಸಲು ಬಹು ಮುಖ್ಯವಾದ ಅಭಿಯಾನವನ್ನು ಹಮ್ಮಿಕೊಂಡಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು. ಕೃಷಿ ವಿಶ್ವವಿದ್ಯಾಲಯ, ಕೃಷಿ ವಿಜ್ಜಾನ ಕೇಂದ್ರ ಹಾಗೂ ಕೃಷಿ ನುರಿತ ತಜ್ಞರ ತಂಡಗಳನ್ನು ರಚಿಸಿ ರೈತರಿಗೆ ಉಪಯುಕ್ತವಾಗುವ ಸಲಹೆಗಳನ್ನು ಪ್ರತಿ ಗ್ರಾಮ ಪಂಚಾಯತಿಗಳಿಗೆ ಹಾಗೂ ತಮ್ಮ ಮನೆ ಬಾಗಿಲಿಗೆ ತೆರಳಿ ಇಲಾಖೆ ಮಾಹಿತಿ ನೀಡುತ್ತಿದ್ದು, ಪ್ರಮುಖ ಬೆಳೆಗಳಾದ ಸೋಯಾಬಿನ್, ಶೇಂಗಾ,ಹತ್ತಿ ಹಾಗೂ ಹೆಸರು ಮುಂತಾದ ಬೆಳೆಗಳ ಕೀಟ ಮತ್ತು ರೋಗಭಾದೆಗಳನ್ನು ಪರಿಶೀಲಿಸಿ, ಸ್ಥಳದಲ್ಲಿಯೇ ಬೇಟಿ ನೀಡಿ ಸಲಹೆಗಳನ್ನು ನೀಡುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

ನೇಸರಗಿ ಆರ್‍ಎಸ್‍ಕೆ ಕೃಷಿ ಅಧಿಕಾರಿ ಆರ್. ಐ. ಕುಂಬಾರ ಮಾತನಾಡಿ, ಈ ವರ್ಷ ಉತ್ತಮ ಮಳೆಯಾಗಿದ್ದು ಉತ್ತಮ ಫಸಲು ಬಂದಿದ್ದು ನೇಸರಗಿ ಹೋಬಳಿಯ ಪ್ರದಾನ ಬೆಳೆಯಾದ ಸೋಯಾಬಿನ್ ಬೆಳೆಗೆ ಎಲೆ ತಿನ್ನುವ ಕೀಡೆ ಬಾದೆ, ಕಾಂಡ ಕೊರೆಯುವಿಕೆ ಹಾಗೂ ತುಕ್ಕು ರೋಗ, ಎಲೆ ಚುಕ್ಕೆ ರೋಗ ಭಾದೆ ಹೆಚ್ಚಾಗುತ್ತಿದ್ದು, ರೈತರಿಗೆ ರೋಗ ಹತೋಟಿಗೆ ತರಲು ಕೃಷಿ ಇಲಾಖೆಯಲ್ಲಿ ಬೇಕಾಗುವ ಔಷಧಗಳು ಲಭ್ಯವಿದ್ದು ಅವುಗಳನ್ನು ಸಿಂಪರಿಸಿ ಬೆಳೆಗಳನ್ನು ಕೀಟದಿಂದ ಹತೋಟಿಗೆ ತರಬೇಕೆಂದು ರೈತರಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪಿಡಿಓ ಬಸನಗೌಡ ಪಾಟೀಲ, ಗ್ರಾಪಂ ಅಧ್ಯಕ್ಷ ಅಶೋಕ ವಕ್ಕುಂದ, ಗ್ರಾಪಂ ಸದಸ್ಯ ಬಸವರಾಜ ಬುಗಡಿಕಟ್ಟಿ, ನಾಗಪ್ಪ ಬೂದಿಗೊಪ್ಪ, ನಾಗರಾಜ ತಲ್ಲೂರ, ಪ್ರಕಾಶ ಚಿಕ್ಕಬಸಣ್ಣವರ, ಪಂಚನಗೌಡ ಪಾಟೀಲ, ಮೌಲಾಲಿ ಸಾಧುನವರ ಹಾಗೂ ಸಿಬ್ಬಂದಿ, ರೈತರು ಇದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');