ನ್ಯಾಯವಾದಿಗಳು ಕಾಡು ಪ್ರದೇಶದಲ್ಲಿ ವಾಸಿಸುತ್ತಿರುವ ವನವಾಸಿ ಗೌಳಿ ಕುಟುಂಬಗಳ ಸಮಸ್ಯೆ ಆಲಿಸಿದರು.

0
🌐 Belgaum News :

ಬೆಳಗಾವಿ ಅಧಿವ್ಯಕ್ತ ಪರಿಷತ್ ಹಾಗೂ ಬೈಲಹೊಂಗಲ ನ್ಯಾಯವಾದಿಗಳು ಕಾಡು ಪ್ರದೇಶದಲ್ಲಿ ವಾಸಿಸುತ್ತಿರುವ ವನವಾಸಿ ಗೌಳಿ ಕುಟುಂಬಗಳ ಸಮಸ್ಯೆ ಆಲಿಸಿದರು. ಸಿ.ಎಸ್. ಚಿಕ್ಕನಗೌಡರ ಎಸ್.ವಾಯ. ಪಾಟೀಲ, ಎಸ್.ವಿ. ಸಿದ್ದಮನಿ ಇತರರು ಇದ್ದರು.

ಬೈಲಹೊಂಗಲ- ಕಿತ್ತೂರು, ಹಳಿಯಾಳ ಮಾರ್ಗದ ಬಾಗವತಿ ಗ್ರಾಮದ ಸಮೀಪದ ಭೀಮನಳ್ಳಿ ಗ್ರಾಮದಲ್ಲಿ ಕೇಲ ವನವಾಸಿ ಗೌಳಿ ಕುಟುಂಬಗಳು ತಟ್ಟಿ ನದಿ ತಟದಲ್ಲಿ ಕಾಡಿನ ಭೂಮಿ ಸಾಗುವಳಿ ಮಾಡಿ ಜೀವನ ನಡೆಸುತ್ತಿದ್ದು, ಅವರ ಸಮಸ್ಯೆಗಳನ್ನು ಬೆಳಗಾವಿ ಅಧಿವ್ಯಕ್ತ ಪರಿಷತ್ ಹಾಗೂ ಬೈಲಹೊಂಗಲ ನ್ಯಾಯವಾದಿಗಳ ವತಿಯಿಂದ ಆಲಿಸಿ, ಅವರಿಗೆ ಕಾನುನೂ ತಿಳಿವಳಿಕೆ ನೀಡಲಾಯಿತು.

ನಂತರ ಮಾತನಾಡಿದ ಅಧಿವ್ಯಕ್ತ ಪರಿಷತ ಜಿಲ್ಲಾಧ್ಯಕ್ಷ, ನ್ಯಾಯವಾದಿ ಸಿ.ಎಸ್. ಚಿಕ್ಕನಗೌಡರ 1898ರಿಂದ ಪೂರ್ವಜರ ಕಾಲದಿಂದ ವಾಸವಾಗಿರುವ ಸುಮಾರು 60 ಕುಟುಂಬಗಳು, ಕಾಡು ಮೃಗಗಳು ವಾಸವಾಗಿರುವ ದಟ್ಟ ಅರಣ್ಯ ಪ್ರದೇಶದಲ್ಲಿ ವಾಸವಾಗಿದ್ದು, ದನ ಸಾಕಾಣಿಕೆ ಮಾಡಿ ಹಾಲು ಉತ್ಪಾದನೆ ಮೂಲಕ ಜೀವನ ನಡೆಸುತ್ತಿದ್ದು, ಪರಿಸರ ನಾಶ ಮಾಡದೆ ಮೇವಿಗಾಗಿ ಅರಣ್ಯ ಸಾಗುವಳಿ ಮಾಡಿದ್ದಾರೆ. ಸಾವಿರಾರು ಏಕರ ಕಬಳಿಸಿದವರನ್ನು ಬಿಟ್ಟು, ಅರಣ್ಯ ಅಧಿಕಾರಿಗಳು ಅವರನ್ನು ವಕ್ಕಲೆಬ್ಬಿಸಲು ತೊಂದರೆ ಕೊಡುತ್ತಿದ್ದಾರೆ. ಕೂಡಲೇ ಸರಕಾರ ಅವರ ಸಹಾಯಕ್ಕೆ ಧಾವಿಸಬೇಕಾಗಿದೆ.
ಪ್ರದೇಶ ಕಂದಾಯ ಗ್ರಾಮವಾಗಿ ಘೋಶಣೆ ಆಗಿಲ್ಲ. ಇವರಿಗೆ ಸರಕಾರದ ಯೋಜನೆಗಳು ಸರಿಯಾಗಿ ತಲುಪಿಲ್ಲ. ಮೂಲಭೂತ ಸೌಕರ್ಯ ಇಲ್ಲ. ರಾಜಕೀಯ ವ್ಯಕ್ತಿಗಳು ಇವರನ್ನು ವೋಟ್ ಬ್ಯಾಂಕ್ ಮಾಡಿಕೊಂಡು ಇವರಿಗೆ ಸೌಕರ್ಯ ಕಲ್ಪಿಸಿಲ್ಲ. ಇವರಿಗೆ ಅಧಿವಕ್ತ ಪರಿಷತ ಸದಸ್ಯರು ಕಾನೂನು ತಿಳಿವಳಿಕೆ ನೀಡಿದರು.

ಅದೇ ರೀತಿ ಖಾನಾಪುರ ತಾಲೂಕಿನಲ್ಲಿ ಸಾಕಷ್ಟು ಹಳ್ಳಿಗಳು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿವೆ. ಇವರಿಗೂ ಮೂಲಭೂತ ಸೌಕರ್ಯ ಕಲ್ಪಿಸಲು ಸರಕಾರದ ಗಮನ ಸೆಳೆಯಬೇಕಾಗಿದೆ. ನೂರಾರು ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಇಲ್ಲ. ವನವಾಸಿ ಕಲ್ಯಾಣ ವಿಭಾಗ ಕಾರ್ಯಕಾರಿಣಿಯಾದ ದಂಡು ಪಾಟೀಲ, ಬಾಬು ಪಾಟೀಲ ಅವರಿಂದ ಮಾಹಿತಿ ಪಡೆದು ಅಧಿವಕ್ತ್ ಪರಿಷತ್ ಬೆಳಗಾವಿ ವಿಭಾಗದಿಂದ ಕಾರ್ಯಪ್ರವರ್ತರಾಗುತ್ತೇವೆ ಎಂದರು.

ಪರಿಷತ ಸದಸ್ಯರಾದ ಎಸ್.ವಾಯ. ಪಾಟೀಲ, ಎಸ್.ವಿ. ಸಿದ್ದಮನಿ, ಆರ್.ಎಫ್. ಕುರಬರ, ಎ.ಬಿ. ಇನಾಮದಾರ ಹಾಗೂ ವನವಾಸಿ ಕಲ್ಯಾಣದ ಪ್ರಮುಖರು ಇದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');