ದೇವಸ್ಥಾನದಲ್ಲಿ ಯುವ ಸಾಹಿತಿ ವಿನಯ ನಂದಿಹಳ್ಳಿಮಠ ಇವರು ರಚಿಸಿದ ಭಕ್ತಿ ಸಂಗಮ, ಭಕ್ತಿ ಕುಸುಮ ಪುಸ್ತಕಗಳನ್ನು ಬಿಡುಗಡೆ

0
🌐 Belgaum News :

ಬೈಲಹೊಂಗಲ- ಇಂದಿನ ದಿನಮಾನಗಳಲ್ಲಿ ಯುವಕರು ಸಾಹಿತ್ಯ ಕ್ಷೇತ್ರದತ್ತ ಒಲವು ತೋರುವುದು ಅವಶ್ಯವಾಗಿದೆ ಎಂದು ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ.ಮಹಾಂತಯ್ಯ ಶಾಸ್ರ್ತಿ ಆರಾದ್ರಿಮಠ ಹೇಳಿದರು.

ಅವರು ಪಟ್ಟಣದ ಮುರಗೋಡ ರಸ್ತೆಯ ಬಸವನಗರದ 4 ನೇ ರಸ್ತೆಯ ದುರ್ಗಾದೇವಿ ದೇವಿ ದೇವಸ್ಥಾನದಲ್ಲಿ ಯುವ ಸಾಹಿತಿ ವಿನಯ ನಂದಿಹಳ್ಳಿಮಠ ಇವರು ರಚಿಸಿದ ಭಕ್ತಿ ಸಂಗಮ, ಭಕ್ತಿ ಕುಸುಮ ಪುಸ್ತಕಗಳನ್ನು ಬಿಡುಗಡೆ ಹಾಗೂ ಸನ್ಮಾನಿಸಿ ಮಾತನಾಡಿ, ಇವರು ತಮ್ಮ ಸಾಹಿತಿ ಬರವಣಿಗೆ ಮೂಲಕ ಭಕ್ತಿ ಸಂಗಮ, ಭಕ್ತಿ ಕುಸುಮ ಪುಸ್ತಕಗಳನ್ನು ನಾಡಿಗೆ ಸಮರ್ಪಿಸಿದ್ದಾರೆ. ಸಾಹಿತ್ಯ ಆಸಕ್ತರು ಪುಸ್ತಕಗಳನ್ನು ಓದಿ ಪ್ರೋತ್ಸಾಹಿಸಬೇಕೆಂದರು.
ಈ ಸಂದರ್ಭದಲ್ಲಿ ಪ್ರಶಾಂತ್ ಶಾಸ್ತ್ರಿ, ಗಂಗಾಧರ ಸಾಲಿಮಠ, ಅರ್ಚಕ ನಂದಿಹಳ್ಳಿ ಮಠ, ಸದ್ಭಕ್ತರು ಇದ್ದರು.

 

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');