ಸಾಹಿತ್ಯ ವೇದಿಕೆಯ ಅಧ್ಯಕ್ಷರಾಗಿ ಪ್ರೇಮಾಕ್ಕ ನೇಮಕ

0
🌐 Belgaum News :

ಬೈಲಹೊಂಗಲ- ಪಟ್ಟಣದ ಬಸವ ನಗರ ನಿವಾಸಿ ಹಾಗೂ ಪತ್ರಿ ಬಸವ ನಗರ ಅಭಿವೃದ್ದಿ ಸಂಘದಾಧ್ಯಕ್ಷ್ಯೆ ಖ್ಯಾತ ಪ್ರವಚನಗಾರ್ತಿ ಪ್ರೇಮಾಕ್ಕ ಗಂಗಪ್ಪ ಅಂಗಡಿ ಅವರನ್ನು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ತಾಲೂಕಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಶರಣೆ ಪ್ರೇಮಾ ಅಂಗಡಿ ಅವರು ವಚನ ಸಾಹಿತ್ಯದಲ್ಲಿ ಸಾಕಷ್ಟು ಕೃಷಿ ಮಾಡಿದ್ದು, ಬಸವ ತತ್ವ ಪ್ರಚಾರವನ್ನು ದೇಶದಲ್ಲಷ್ಟೇ ಅಲ್ಲದೇ ಹೊರ ದೇಶಗಳಿಗೂ ಪ್ರಚುರ ಪಡಿಸಿ ಆ ಮೂಲಕ ಬಸವಣ್ಣನವರ ಸಂದೇಶಗಳನ್ನು ಸಮಾಜದಲ್ಲಿನ ಮನೆ ಮನಕ್ಕೆ ಮುಟ್ಟಿಸುವಲ್ಲಿ ಪ್ರಯತ್ನದ ಅಂಗವಾಗಿ ಇವರನ್ನು ತಾಲೂಕಾ ಅಧ್ಯಕ್ಷರನ್ನಾಗಿ ನೇಮಿಸಿ ಜಿಲ್ಲಾಧ್ಯಕ್ಷ್ಯೆ ಆಶಾ ಯಮಕನಮರಡಿ ಆದೇಶ ಹೊರಡಿಸಿದ್ದಾರೆ.
ಪೋಟೋ ಶೀರ್ಷಿಕೆ- ಪ್ರೇಮಾಕ್ಕ ಗಂಗಪ್ಪ ಅಂಗಡಿ

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');