ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಹೆಸರು ಬದಲಾವಣೆ : ಬಿಜೆಪಿಯಿಂದ ದ್ವೇಷದ ರಾಜಕಾರಣವೆಂದು ಕಿಡಿಕಾರಿದ ಸಿದ್ದರಾಮಯ್ಯ

0
🌐 Belgaum News :

ಬೆಂಗಳೂರು : ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಹೆಸರು ಬದಲಾವಣೆ ಮಾಡುವ ಮೂಲಕ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಿಡಿಕಾರಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು,  ಧ್ಯಾನ್ ಚಂದ್ ಹೆಸರಲ್ಲಿ ಪ್ರಶಸ್ತಿ ನೀಡಬೇಕೆಂದರೆ ಇನ್ನೂ ದೊಡ್ಡ ಪ್ರಶಸ್ತಿ ನೀಡಲಿ, ಅದನ್ನು ಬಿಟ್ಟು ರಾಜೀವ್ ಗಾಂಧಿ ಖೇಲ್ ರತ್ನ ಹೆಸರನ್ನು ಬದಲಾವಣೆ ಮಾಡುವುದು ಬೇಡ ಎಂದರು.

ಗುಜರಾತ್ ನಲ್ಲಿ ಮೋದಿ ಕ್ರೀಡಾಂಗಣವಿದೆ. ದೆಹಲಿಯಲ್ಲಿ ಅರುಣ್ ಜೇಟ್ಲಿ ಹೆಸರಲ್ಲಿ ಕ್ರೀಡಾಂಗಣವಿದೆ. ದೀನ್ ದಯಾಳ್ ಉಪಾಧ್ಯಾಯ ಹೆಸರಲ್ಲಿ ಫ್ಲೈಓವರ್ ಇದೆ. ವಾಜಪೇಯಿ ಹೆಸರಲ್ಲಿ ಅನೇಕ ಯೋಜನೆ ಜಾರಿಯಲ್ಲಿದೆ. ಅವುಗಳನ್ನು ನಾವು ಬದಲಾವಣೆ ಮಾಡಿದ್ದೇವೆಯೇ? ಎಂದು ಪ್ರಶ್ನಿಸಿ, ಬಿಜೆಪಿ ದುರುದ್ದೇಶದಿಂದ ಹೆಸರು ಬದಲಿಸಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದರು.

ಬಳಿಕ  ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಂಪುಟ ದರ್ಜೆ ಸ್ಥಾನಮಾನ ನಿರಾಕರಿಸಿದ್ದು, ಸ್ವಾಗತಾರ್ಹ ಎಂದಿರುವ ಸಿದ್ದರಾಮಯ್ಯ, ಯಡಿಯೂರಪ್ಪ ಒಳ್ಳೆ ಕೆಲಸ ಮಾಡಿದ್ದಾರೆ. ನಾನೇ ಅವರಿಗೆ ಹೇಳಬೇಕು ಅಂತ ಇದ್ದೆ ಎಂದು ಹೇಳಿದ್ದಾರೆ./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');