ಅಪ್ರಾಪ್ತ ಬಾಲಕಿಯ ಮೇಲೆ ಶಿಕ್ಷಕ ಅತ್ಯಾಚಾರ , ನೀಚ ಕೃತ್ಯಕ್ಕೆ ಪತ್ನಿ ಸಾಥ್ : ಇಬ್ಬರು ಅರೆಸ್ಟ್..!

0
🌐 Belgaum News :

ಮಂಗಳೂರು:  ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಲು ಶಿಕ್ಷಕನಿಗೆ ಸಾಥ್ ನೀಡಿದ ಪತ್ನಿಯನ್ನು ಕೂಡ ಪೊಲೀಸ್ ರು ವಶಕ್ಕೆ ಪಡೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ಶಿಕ್ಷಕ  ಪ್ರಾಜೆಕ್ಟ್ ವರ್ಕ್ ನೆಪದಲ್ಲಿ ವಿದ್ಯಾರ್ಥಿನಿಯನ್ನು ಮನೆಗೆ ಕರೆಸಿಕೊಂಡಿದ್ದ, ಎರಡ್ಮೂರು ದಿನಗಳಲ್ಲಿ ಬಾಲಕಿಯನ್ನು  ಪುಸಲಾಯಿಸಿ ಲೈಂಗಿಕ ಕ್ರಿಯೆಗೆ ಬಳಿಸಿಕೊಂಡಿದ್ದಾರೆ, ಬಾಲಕಿ ಈ ಕೃತ್ಯಕ್ಕೆ ಅಲ್ಲಗೆಳೆದಿದ್ದಾಳೆ.

ಬಳಿಕ ಕಾಮುಕ ಶಿಕ್ಷಕ ಪತ್ನಿ ಸಹಕಾರ ಪಡೆದು ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾನೆ. ಬಾಲಕಿ, ವಿವಸ್ತ್ರಗೊಳಿಸಿದ ಅಶ್ಲಿಲ್ ಚಿತ್ರಗಳನ್ನು  ಮೊಬೈಲ್  ಮೂಲಕ ಫೋಟೋ ತೆಗೆಯುತ್ತಿದ್ದಾನೆ. ಫೋಟೋ ತೋರಿಸಿ ಮನೆಯಿಂದ ಹಣ ತರುವಂತೆ ಬಾಲಕಿಗೆ ಬೆದರಿಕೆ ಹಾಕುತ್ತಿದ್ದ.

ಇದರಿಂದ ಬೇಸತ್ತ ಬಾಲಕಿ  ಪಾಲಕರ ಮುಂದೆ ನಡೆದ ಘಟನೆ ತಿಳಿಸಿದ್ದಾಳೆ.  ಪೋಷಕರು ಆಕ್ರೋಶಗೊಂಡು ಶಿಕ್ಷಕನಿಗೆ  ಗೂಸಾ ನೀಡಿ ಠಾಣೆಗೆ ಕರೆತಂದು ದೂರು ದಾಖಲಿಸಿದ್ದಾರೆ.  2018 ರಿಂದ ರಾಯಚೂರು ಮೂಲದ ಶಿಕ್ಷಕ ಇಂತಹ ಕೃತ್ಯವೆಸಗಿದ್ದಾನೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕನ ವಿರುದ್ಧ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದು, ಅವರನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');