ಚಿನ್ನದ ಪದಕ ಮಿಲ್ಕಾ ಸಿಂಗ್ ಗೆ ಅರ್ಪಿಸಿದ ಬಂಗಾರದ ಮನುಷ್ಯ ನೀರಜ್

0
🌐 Belgaum News :

ಟೋಕಿಯೋ  : ಒಲಿಂಪಿಕ್ಸ್ ನಲ್ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ನೀರಜ್ ಚೋಪ್ರಾ ಇತಿಹಾಸ ಸೃಷ್ಟಿಸಿದರು. ಚಿನ್ನದ ಪದಕ ಗೆದ್ದ ನಂತರ, ನೀರಜ್ ಚೋಪ್ರಾ ಈ ಯಶಸ್ಸನ್ನು ಮಿಲ್ಖಾ ಸಿಂಗ್ ಅವರಿಗೆ ಅರ್ಪಿಸಿದರು.

ಈ ಪದಕ ಮಿಲ್ಕಾ ಸಿಂಗ್ ಅವರ ಹೆಸರಿನಲ್ಲಿದೆ ಅವರು ಸ್ವರ್ಗದಿಂದ ಇದನ್ನು ನೋಡುತ್ತಿರುತ್ತಾರೆ ಎಂದರು. ಇದು ತುಂಬಾ ನಂಬಲಾಗದ ಕ್ಷಣ ಎಂದು ನೀರಜ್ ತಮ್ಮ ಪ್ರದರ್ಶನದ ಬಗ್ಗೆ ಹೇಳಿಕೊಂಡಿದ್ದಾರೆ.

23 ವರ್ಷದ ಚೋಪ್ರಾ ಐತಿಹಾಸಿಕ ಚಿನ್ನದ ಪದಕ ಗೆದ್ದ ನಂತರ, ನನಗೆ ನಂಬಲಾಗುತ್ತಿಲ್ಲ. ಅಥ್ಲೆಟಿಕ್ಸ್​ನಲ್ಲಿ ಭಾರತ ಚಿನ್ನದ ಪದಕ ಗೆದ್ದಿರುವುದು ಇದೇ ಮೊದಲು, ಹಾಗಾಗಿ ನನಗೆ ತುಂಬಾ ಸಂತೋಷವಾಗಿದೆ.

ಇತರ ಕ್ರೀಡೆಗಳಲ್ಲಿ ನಾವು ಕೇವಲ ಒಂದು ಒಲಿಂಪಿಕ್ ಚಿನ್ನವನ್ನು ಹೊಂದಿದ್ದೇವೆ. ಅಥ್ಲೆಟಿಕ್ಸ್‌ನಲ್ಲಿ ಇದು ನಮ್ಮ ಮೊದಲ ಒಲಿಂಪಿಕ್ ಪದಕವಾಗಿದೆ. ಇದು ನನಗೆ ಮತ್ತು ದೇಶಕ್ಕೆ ಹೆಮ್ಮೆಯ ಕ್ಷಣ ಎಂದರು.

ಜರ್ಮನಿಯ ಶ್ರೇಷ್ಠ ಅಥ್ಲೀಟ್ ಜೊಹಾನ್ಸ್ ವೆಟ್ಟರ್ ಅವರನ್ನೂ ಸೋಲಿಸಿ ಚಿನ್ನದ ಪದಕ ಗೆದ್ದಾಗ ಆಶ್ಚರ್ಯವಾಗಿದೆಯೇ ಎಂದು ಕೇಳಿದಾಗ ಅವರು, ನಾನು ಅರ್ಹತಾ ಸುತ್ತಿನಲ್ಲಿ ಉತ್ತಮ ಎಸೆತವನ್ನು ಎಸೆದಿದ್ದೇನೆ ಹಾಗಾಗಿ ಫೈನಲ್‌ನಲ್ಲಿ ನಾನು ಉತ್ತಮವಾಗಿ ಮಾಡಬಹುದು ಎಂದು ನನಗೆ ತಿಳಿದಿತ್ತು. ಆದರೆ ಅದು ಚಿನ್ನವಾಗುತ್ತದೆಯೇ ಎಂದು ನನಗೆ ಗೊತ್ತಿರಲಿಲ್ಲ ಆದರೆ ನನಗೆ ತುಂಬಾ ಸಂತೋಷವಾಗಿದೆ.

ಒಲಿಂಪಿಕ್ಸ್ ನಂತರ ಹಂತದಲ್ಲಿ ಚೋಪ್ರಾ ಪ್ರಾಬಲ್ಯ ಸಾಧಿಸಿ ಚಿನ್ನದ ಪದಕ ಗೆಲ್ಲುತ್ತಾನೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಪದಕ ಗೆದ್ದ ನಂತರ, ಪದಕ ಭಾರವಾಗಿದೆಯೇ ಎಂದು ಕೇಳಿದಾಗ, ಅವರು 10 ಕೆಜಿ ಇದ್ದರೂ ಅದು ಹಗುರವಾಗಿರುತ್ತಿತ್ತು ಎಂದು ಹೇಳಿದರು./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');