ಯುವತಿ ಕಾಣೆ

0
🌐 Belgaum News :

ಯುವತಿ ಕಾಣೆ

ಬೆಳಗಾವಿ,: ಕುಮಾರಿ ಅಪ್ಸಾನ ವಯಸ್ಸು 17 ವರ್ಷ ಇವಳು ಆಗಸ್ಟ್ 1 ರಂದು ಗೋವಾದ ಮಡಗಾಂವ ರೈಲು ನಿಲ್ದಾಣದಿಂದ ಹಾವೇರಿಗೆ ಹೋಗುವಾಗ ರಾತ್ರಿ 11.10 ಗಂಟೆಗೆ ರೈಲಿನಲ್ಲಿ ಹೋಗುವಾಗ ಲೋಂಡಾ ಬಳಿ ಕಾಣೆಯಾಗಿದ್ದಾಳೆ.
ಈ ಕುರಿತು ಆಗಸ್ಟ್ 5ರಂದು ಬೆಳಗಾವಿ ರೈಲ್ವೆ ಪೆÇಲೀಸ್ ಠಾಣೆಯಲ್ಲಿ ದೂರನ್ನು ಅವರ ತಂದೆ ಮುಸ್ತಾಕ್ ಅಹ್ಮದ್ ಪಟಾನ್ ದಾಖಲಿಸಿದ್ದು ಬೆಳಗಾವಿ ರೈಲ್ವೆ ಪೆÇಲೀಸ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕಾಣೆಯಾದ ಯುವತಿಯ ಹೆಸರು ಆಪ್ಸಾನ ಆಗಿದ್ದು, (17ವರ್ಷ) ಸುಮಾರು ಐದು ಅಡಿ ಎತ್ತರ ಸಾಧಾರಣ ಮೈಬಣ್ಣ ನೀಟಾದ ಮೂಗು, ಕೋಲುಮುಖ ಹೊಂದಿದ್ದು, ಗುಲಾಬಿ ಬಣ್ಣದ ಚೂಡಿದಾರ್ ಹಾಗೂ ಕೆಂಪು ಬಣ್ಣದ ಪ್ಯಾಂಟನ್ನು ಧರಿಸಿದ್ದಾಳೆ. ಯುವತಿಯು ಹಿಂದಿ-ಉರ್ದು ಮತ್ತು ಕೊಂಕಣಿ ಭಾಷೆಯನ್ನು ಮಾತನಾಡುತ್ತಾಳೆ.

ಕಾಣೆಯಾದ ಬಾಲಕಿಯ ಈ ಚಹರೆ ಪಟ್ಟಿ ಹೋಲುವ ಬಾಲಕಿಯ ಬಗ್ಗೆ ತಮ್ಮಲ್ಲಿ ಯಾವುದಾದರೂ ಮಾಹಿತಿ ಕಂಡುಬಂದಲ್ಲಿ ಬೆಳಗಾವಿ ರೈಲ್ವೆ ಪೆÇಲೀಸ್ ಠಾಣೆ ದೂರವಾಣಿ ಸಂಖ್ಯೆ (0831-2405273) 9480802127 ಅಥವಾ ರೈಲ್ವೆ ಪೆÇಲೀಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 080-22871291 ಸಂಖ್ಯೆಗೆ ಸಂಪರ್ಕಿಸಲು ರೈಲ್ವೆ ಪೆÇಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');