ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಈಶ್ವರಚಂದ್ರ ವಿಧಿವಶ

0
🌐 Belgaum News :

ವಿಜಯಪುರ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಜಾನಪದ ಸಾಹಿತಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಈಶ್ವರಚಂದ್ರ ಚಿಂತಾಮಣಿ (96) ಶ್ರಾವಣ ಮೊದಲ ಸೋಮವಾರದ ಬೆಳಗಿನ ಜಾವ ವಿಧಿವಶರಾಗಿದ್ದಾರೆ.

ಮೂಲತಃ ಜಿಲ್ಲೆಯ ಬಿಜ್ಜರಗಿ ಗ್ರಾಮದವರಾದ ಈಶ್ವರಚಂದ್ರ ಚಿಂತಾಮಣಿ ಅವರು, 1942 ರ ಚಲೇಜಾವ್ ಚಳವಳಿಯಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳೊಡನೆ ಸೇರಿಕೊಂಡು, ಚಳವಳಿಯಲ್ಲಿ ಧುಮುಕಿ ಸೆರೆವಾಸ ಅನುಭವಿಸಿದ್ದರು.

ಆದರ್ಶ ಶಿಕ್ಷಕ ರಾಷ್ಟ್ರ ಪ್ರಶಸ್ತಿ (1974), ಜಾನಪದ ಅಕಾಡೆಮಿ ಪ್ರಶಸ್ತಿ (1980), ಭಾರತ ಸರ್ಕಾರದ ಫೆಲೋಶಿಪ್ (1999) ಹೀಗೆ ಹಲವು ಪ್ರಶಸ್ತಿಗಳು ಚಿಂತಾಮಣಿಯವರಿಗೆ ಸಂದಿವೆ.

ಮೃತರು ತಮ್ಮ ಸಾವಿನಲ್ಲೂ ಆದರ್ಶ ಮೆರೆದಿದ್ದು, ಅವರ ಇಚ್ಛೆಯಂತೆ, ಅವರ ಪಾರ್ಥಿವ ಶರೀರವನ್ನು ಇಲ್ಲಿನ ಬಿಎಲ್ ಡಿಇ ಆಸ್ಪತ್ರೆಗೆ, ಅವರ ಕುಟುಂಬಸ್ಥರು ಹಸ್ತಾಂತರಿಸಲಿದ್ದಾರೆ.
ಮೃತರು, ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು, ಬಳಗವನ್ನು ಅಗಲಿದ್ದಾರೆ.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');