ಬೃಹತ ಗಾತ್ರದ ಟಿಪ್ಪರ್ ವಾಹನಗಳ ಸಂಚಾರವನ್ನು ನಿಷೇಧಿಸುವಂತೆ ಒತ್ತಾಯಿಸಿ ಶುಕ್ರವಾರ ನೇಸರಗಿ ಗ್ರಾಮಸ್ಥರು ಪ್ರತಿಭಟನೆ

0
🌐 Belgaum News :

ಬೈಲಹೊಂಗಲ-ಮೇಕಲಮರ್ಡಿ- ನೇಸರಗಿ ರಸ್ತೆಯಲ್ಲಿ ಬೃಹತ ಗಾತ್ರದ ಟಿಪ್ಪರ್ ವಾಹನಗಳ ಸಂಚಾರವನ್ನು ನಿಷೇಧಿಸುವಂತೆ ಒತ್ತಾಯಿಸಿ ಶುಕ್ರವಾರ ನೇಸರಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಸಮೀಪದ ಮುರ್ಕಿಭಾವಿ-ಮುತವಾಡ ರಸ್ತೆ ಪಿಎಂಜೆಎಸ್‍ವೈ ಕಾಮಗಾರಿ ಪ್ರಾರಂಭವಾಗಿದ್ದರಿಂದ ಮೇಕಲಮರ್ಡಿ ಗ್ರಾಮದಿಂದ ಮುರ್ಕಿಭಾವಿ ಗ್ರಾಮದ ರಸ್ತೆಗೆ ಗೊರಚು ಮಣ್ಣು ಸಾಗಿಸಲು ಬೃಹತ್ ಗಾತ್ರದ ವಾಹನಗಳು ದಿನನಿತ್ಯ ಈ ರಸ್ತೆಯಲ್ಲಿ ಸುಮಾರು 10 ರಂದ 12 ಟಿಪ್ಪರ್‍ಗಳು ಚಲಿಸುತ್ತಿರುವುದರಿಂದ ಅವುಗಳ ದಟ್ಟನೆಗೆ ರಸ್ತೆಯು ಹದಗೆಟ್ಟಿದ್ದರಿಂದ ಗ್ರಾಮಸ್ತರು ರೊಚ್ಚಿಗೆದ್ದು ಭಾರಿ ಗಾತ್ರದ ವಾಹನಗಳ ದಟ್ಟನೆಯನ್ನು ತಕ್ಷಣವೇ ನಿಷೇಧಿಸುವಂತೆ ಆಗ್ರಹಿಸಿ, ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ನೇಸರಗಿ ಠಾಣೆ ಪಿಎಸ್‍ಐ ವೈ.ಎಲ್.ಶೀಗಿಹಳ್ಳಿ ಆಗಮಿಸಿ ಗೊರಚು ಮಣ್ಣು ತುಂಬಿದ ಭಾರಿ ಗಾತ್ರದ ವಾಹನಗಳನ್ನು ವಶಕ್ಕೆ ಪಡೆಯುತ್ತಿದ್ದಂತೆ, ಸ್ಥಳಕ್ಕೆ ಬೈಲಹೊಂಗಲ ಲೋಕೊಪಯೋಗಿ ಇಲಾಖೆ ಸಹಾಯಕ ಇಂಜನೀಯರ್ ಆರ್.ಬಿ.ಹೆಡಗೆ ಆಗಮಿಸಿ ಗ್ರಾಮಸ್ಥರನ್ನುದ್ದೇಶಿಸಿ ಅವರು ಮಾತನಾಡಿ, ಆದಷ್ಟು ಶೀಘ್ರ ರಸ್ತೆ ದುರಸ್ತಿ ಮಾಡಿ ರೈತರಿಗೆ ಸುಗಮ ಸಂಚಾರಕ್ಕೆ ಅನುವು

ಮಾಡಿಕೊಡಲಾಗುವುದೆಂದರು. ಈ ಸಂದರ್ಭದಲ್ಲಿ ರೈತ ಕ್ಷೇಮಾಭಿವೃಧ್ದಿ ಸಂಘದ ಮುಖಂಡ ಸೋಮನಗೌಡ ಪಾಟೀಲ,ಬಾಳಪ್ಪ ಮಾಳಗಿ, ಡಿಎಸ್‍ಎಸ್ ಜೈ ಭೀಮ ಸಂಘಟನೆ ರಾಜ್ಯಾಧ್ಯಕ್ಷ ರಮೇಶ ರಾಯಪ್ಪಗೋಳ, ಪಿಕೆಪಿಎಸ್ ನಿರ್ದೇಶಕ ಪ್ರಕಾಶ ತೋಟಗಿ, ಗ್ರಾಪಂ ಅಧ್ಯಕ್ಷೆ ಶೋಭಾ ಮೂಲಿಮನಿ,ಮಾಜಿ ಗ್ರಾಪಂ ಸದಸ್ಯ ದೇಮಣ್ಣ ಗುಜನಟ್ಟಿ, ಬಾಳಪ್ಪ ಹಸಬಿ, ಪುಂಡಲೀಕ ಚಿಕ್ಕನಗೌಡ್ರ, ಶ್ರೀನಿವಾಸ ಹಮ್ಮಣ್ಣವರ, ಕಾಡಪ್ಪ ಗಡದವರ, ಗುರಬಸಪ್ಪ ತರಗಾರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

 

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');