ಪೂರ್ಣಿಮಾರಿಗೆ ಸಚಿವ ಸ್ಥಾನ ನೀಡದಿದ್ದರೆ ಸಮಾಜ ಬಿಜೆಪಿಯಿಂದ ದೂರ ಸರಿಯುತ್ತದೆ. ಶ್ರೀ ಕೃಷ್ಣಯಾದವಾನಂದ ಸ್ವಾಮೀಜಿ ಎಚ್ಚರಿಕೆ.

0
🌐 Belgaum News :

ಪೂರ್ಣಿಮಾರಿಗೆ ಸಚಿವ ಸ್ಥಾನ ನೀಡದಿದ್ದರೆ ಸಮಾಜ ಬಿಜೆಪಿಯಿಂದ ದೂರ ಸರಿಯುತ್ತದೆ.
ಶ್ರೀ ಕೃಷ್ಣಯಾದವಾನಂದ ಸ್ವಾಮೀಜಿ ಎಚ್ಚರಿಕೆ.

ದಾವಣಗೆರೆ ಆ 10 — ಹಿಂದುಳಿದ ವರ್ಗಗಳಿಗೆ ನಾಲ್ಕು ದಶಕಗಳಿಂದ ಸಮಾಜ ಸೇವೆ ಮಾಡುತ್ತಾ ಬಂದಿರುವ ಮಾಜಿ ಸಚಿವ ದಿ.ಎ.ಕೃಷ್ಣಪ್ಪರವರ ಸುಪುತ್ರಿ ಶಾಸಕಿ ಪೂರ್ಣಿಮಾ ರವರಿಗೆ ಸಚಿವ ಸ್ಥಾನ ನೀಡದಿದ್ದರೆ ರಾಜ್ಯಾದ್ಯಂತ ಇರುವ ಗೊಲ್ಲ ಸಮಾಜ ಬಿಜೆಪಿಯಿಂದ ದೂರವುಳಿಯಬೇಕಾದೀತು ಎಂದು ಚಿತ್ರದುರ್ಗ ಯಾದವ ಮಠದ ಪೀಠಾಧಿಪತಿಗಳಾದ ಶ್ರೀ ಕೃಷ್ಟಯಾದವಾನಂದ ಸ್ವಾಮೀಜಿ ಬಿಜೆಪಿ ವರಿಷ್ಠರಿಗೆ ಎಚ್ಚರಿಕೆ ನೀಡಿದ್ದಾರೆ.

ದಾವಣಗೆರೆ ಭೋವಿ ಸಮಾಜದ ಕಾರ್ಯಕ್ರಮಕ್ಕೆ ಆಗಮಿಸಿ ನಂತರ
ವಿರಕ್ತ ಮಠದಲ್ಲಿ ಪತ್ರಿಕಾ ಮಾದ್ಯಮದವರೊಂದಿಗೆ ಮಾತನಾಡಿದರು.ಇದೇ ಸಂದರ್ಭದಲ್ಲಿ ಭೋವಿ ಗುರಪೀಠದ ಶ್ರೀ ಇಮ್ಮಡಿ ಸಿದ್ದೇಶ್ವರಾಮೇಶ್ವರ ಭೋವಿ ಸಮಾಜವನ್ನು ಬಿಜೆಪಿ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಯಾದವ ಮಹಾಸಭಾದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್ ಗುರುಗಳ ಜೊತೆ ಮಾತನಾಡುತ್ತಾ ನಮ್ಮಂತಹ ಶೋಷಿತ ವರ್ಗಗಳಿಗೆ ಸಂವಿಧಾನಾತ್ಮಕವಾಗಿ ಸಿಗಬೇಕಾದಂತಹ ಅವಕಾಶಗಳಿಂದ ವಂಚಿಸಬೇಡಿ ನಮ್ಮ ಗೊಲ್ಲ ಸಮಾಜ ಮತ್ತು ಇತರೆ 108 ಅಲೆಮಾರಿ ಸಮೂದಾಯಗಳಿಗೆ ಏಕೈಕ ಶಾಸಕಿ ಪೂರ್ಣಿಮಾ ಕೃಷ್ಣಪ್ಪ ರವರಿಗೆ ಇನ್ನುಳಿದ ಮೂರು ಸಚಿವ ಸ್ಥಾನಗಳಲ್ಲಿ ಒಂದನ್ನ ನೀಡಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾದಿತು ಎಂದು ಬಾಡದ ಆನಂದರಾಜ್ ಮಾದ್ಯಮದವರೊಂದಿಗೆ ನೋವ್ವನ್ನಾಂಚಿಕೊಂಡರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');