ಮಾಜಿ ಗ್ರಾ.ಪಂ ಅಧ್ಯಕ್ಷನಿಂದ ನೆರೆ ಸಂತ್ರಸ್ತರಿಗೆ ಸಹಾಯ

0
🌐 Belgaum News :
ಅಥಣಿ: ಕೃಷ್ಣಾ ನದಿ ಪ್ರವಾಹದಿಂದ ತಾಲೂಕಿನ‌ ಅನೇಕ ಗ್ರಾಮಗಳುಜಲಾವೃತಗೊಂಡಿದ್ದು ಅದರಂತೆ ಸತ್ತಿ ಗ್ರಾಮವೂ ಕೂಡ ಜಲಾವೃತಗೊಂಡಿದ್ದರಿಂದ ಗ್ರಾಮದ ಕಾಳಜಿ ಕೇಂದ್ರಕ್ಕೆ ತಾನೂ ಒಬ್ಬ ನೆರೆ ಸಂತ್ರಸ್ತನಾಗಿ ಗ್ರಾಮದ ಎಲ್ಲ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ ಮುಖಂಡ, ಮಾಜಿ ಗ್ರಾ.ಪಂ ಅಧ್ಯಕ್ಷ ಮಲ್ಲಪ್ಪ ಹಂಚಿನಾಳ.
ಅವರು ತಾಲೂಕಿನ ಸತ್ತಿ ಗ್ರಾಮದ ಕಾಳಜಿ ಕೇಂದ್ರದಲ್ಲಿ ಸುಮಾರು 200 ಕುಟುಂಬಗಳಿಗೆ ಹದಿನೈದು ದಿನಕ್ಕಾಗುವಷ್ಟು ದಿನಸಿ ಕಿಟ್ ವಿತರಿಸಿದರು.ಈ ವೇಳೆ ಮಾತನಾಡಿದ ಅವರು ಪ್ರತಿ ಸಲ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುತ್ತಿದ್ದು ಸಂತ್ರಸ್ತರ ಗೋಳು ಹೇಳತೀರದಾಗಿದೆ.  ಸತ್ತಿ ಮತ್ತು ಹಲ್ಯಾಳ ಎರಡೂ ಗ್ರಾಮಗಳಿಗೆ ಶಾಶ್ವತ ಪರಿಹಾರ ಸಿಗಬೇಕು, ಮಾನ್ಯ ಲಕ್ಷ್ಮಣ ಸವದಿ ಹಾಗೂ ಮಹೇಶ ಕುಮಠಳ್ಳಿ ಅವರಿಬ್ಬರಿದ್ದು ನಮ್ಮದೇ ಸರಕಾರವಿದ್ದುದ್ದರಿಂದ ಸುಲಭವಾಗಿ ಶಾಶ್ವತ ಪರಿಹಾರ ಕೊಡಿಸಬಹುದಾಗಿದೆ.‌ಕೂಡಲೇ ನಮ್ಮ ಇಬ್ಬರು ನಾಯಕರು ಸೇರಿ ಶಾಶ್ವತ ಪರಿಹಾರ ಕೊಡಿಸಲಿ ಎಂದು ಹೇಳಿದರು.
ಈ ವೇಳೆ ಗ್ರಾ.ಪಂ ಅಧ್ಯಕ್ಷ ಜ್ಯೋತಿ ಹಳ್ಳೂರ, ಎಮ. ಎಸ್ ಪಾಟೀಲ , ಈರಪ್ಪ  ನಿಂಗವ್ವಗೊಳ, ಮಹಾಂತೇಶ ಗುಡ್ಡಾಪೂರ, ತಾ.ಪಂ ಸದಸ್ಯ ಜಡೆಪ್ಪ ಕುಂಬಾರ, ಮಲಗೌಡ ಪಾಟೀಲ, ಪುಲಕೇಶಿ ದೊಡಮನಿ, ನೌಷಾದ ಪಟೇಲ್, ಗಿರಮಲ್ಲ ತೇಲಿ, ಅನೀಲ‌ ನಾವಲಿಗೇರ, ರಮೇಶ ಬೋಗಿ, ಸಾಬು ಚೀಣಗುಂಡಿ, ರಾಮು ದಳವಾಯಿ, ಅಮರಸಿರ್ಫ ಡಾಂಗೆ, ಸುರೇಶ ಬೀರಡಿ ಅಶೋಕ ಕಾಂಬಳೆ,
ಚೇತನ ಹಂಚಿನಾಳ ದುಂಡಯ್ಯ ಮಠದ ,ಸಿದ್ದಯ್ಯ ಮಠಪತಿ, ಬಸವರಾಜ ಜಿನ್ನರಾಳ, ರಪೀಕ ಅತ್ತಾರ, ನೀಲಕಂಠ ಹಂಚಿನಾಳ, ಮಹಾಂತೇಶ ಗಂಜಾಳಿ ಸೇರಿದಂತೆ ಗ್ರಾಮ ಪಂಚಾಯತಿ ಸದ್ಯಸರು  ಇತರರು ಉಪಸ್ಥಿತರಿದ್ದರು.
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');