80 ಕೋಟಿ ರೂ. ತಿಮಿಂಗಿಲದ ವಾಂತಿ ಮಾರಾಟಕ್ಕೆ ಯತ್ನ: ಐವರ ಬಂಧನ

0
🌐 Belgaum News :

ಬೆಂಗಳೂರು:  ಅಂಬರ್ ಗ್ರಿಸ್​(ತಿಮಿಂಗಿಲದ ವಾಂತಿ) ಸೇರಿದಂತೆ ಪುರಾತನ ವಸ್ತುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಜೀಬ್ ಪಾಶಾ (48), ಮಹಮ್ಮದ್ ಮುನ್ನಾ (45), ಗುಲಾಬ್ ಚಂದ್ (40), ಸಂತೋಷ್ (31), ಜಗನ್ನಾಥಾಚಾರ್ (52) ಬಂಧಿತ ಆರೋಪಿಗಳು.

ಆರೋಪಿಗಳು ಬಾಗಲಗುಂಟೆ ಬಳಿಯ ಕಟ್ಟಡವೊಂದರಲ್ಲಿ ಈಸ್ಟ್​ ಇಂಡಿಯಾ ಕಂಪನಿ 1818 ಸ್ಟೀಮ್ ಫ್ಯಾನ್ ಹಾಗೂ 80 ಕೆ.ಜಿ ಆಯಂಬರ್ ಗ್ರಿಸ್ ಶೇಕರಿಸಿಟ್ಟಿದ್ದರು.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿ ₹80 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');