ಕೊರೊನಾ ಆತಂಕ: ಬೆಂಗಳೂರಿನ ಎಲ್ಲ ಕ್ಷೇತ್ರಗಳಲ್ಲೂ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ನಿರ್ಧಾರ: ಸಚಿವ ಆರ್. ಅಶೋಕ್

0
🌐 Belgaum News :

ಬೆಂಗಳೂರು: ಕೊರೊನಾ 3ನೇ ಅಲೆ ತಡೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕೊವಿಡ್-19 ಸೋಂಕಿನ 2ನೇ ಅಲೆಯಲ್ಲಿ ಸಾಕಷ್ಟು ಅನುಭವವಾಗಿದೆ. ನಾವು ಏನು ತಪ್ಪು ಮಾಡಿದ್ದೆವು ಎಂದು ಅರಿವಾಗಿದೆ. ಹೀಗಾಗಿ 3ನೇ ಅಲೆ ತಡೆಯಲು ಸಿದ್ಧತೆ ಮಾಡಿಕೊಳ್ತಿದ್ದೇವೆ ಎಂದು ಬೆಂಗಳೂರಿನಲ್ಲಿ ಇಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ.

ಅಗತ್ಯಬಿದ್ದರೆ ಖಾಸಗಿ ಆಸ್ಪತ್ರೆಯಿಂದ ಬೆಡ್ ಪಡೆಯುತ್ತೇವೆ. ಮತ್ತೆ ಬೆಡ್ ಪಡೆಯುವುದಾಗಿ ಖಾಸಗಿ ಆಸ್ಪತ್ರೆಗೆ ನೀಡಲಾಗಿದ್ದ ಆದೇಶದಲ್ಲಿ ತಿಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಜನಪ್ರತಿನಿಧಿಗಳು ಕೂಡ ಕೋವಿಡ್ ನಿಯಮ ಪಾಲಿಸಬೇಕು. ಕೊರೊನಾ ನಿಯಂತ್ರಣಕ್ಕೆ ಸರ್ಕಾರದಿಂದ ಕಠಿಣ ಕ್ರಮ ಜಾರಿಗೊಳಿಸಲು ಸರ್ಕಾರ ಹಿಂದೇಟು ಹಾಕಲ್ಲ. ಆಗಸ್ಟ್ 15ರ ಬಳಿಕ ಮತ್ತೊಂದು ಸುತ್ತಿನ ಸಭೆ ಮಾಡ್ತೇವೆ. ಗಡಿಗಳಲ್ಲಿ ಏನು ಕ್ರಮ ಕೈಗೊಳ್ಳಬೇಕೆಂದು ಚರ್ಚಿಸುತ್ತೇವೆ. ಕೊರೊನಾ ನಿಯಮ ಪಾಲಿಸಿ ಸ್ವಾತಂತ್ರ್ಯ ದಿನ ಆಚರಣೆ ಮಾಡಲಾಗುತ್ತದೆ ಎಂದು ನಗರದಲ್ಲಿ ಸಚಿವ ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ.

ಶ್ರಾವಣದಲ್ಲಿ ಹಬ್ಬಗಳು ಬರ್ತವೆ. ಈ ಸಂದರ್ಭದಲ್ಲಿ ಜನರು ಮೈಮರೆಯಬಾರದು. ದೇವಸ್ಥಾನಗಳಲ್ಲಿ ತೀರ್ಥ ಪ್ರಸಾದ ಕೊಡುವ ಬಗ್ಗೆ ಮಾಹಿತಿ ಬಂದಿದೆ. ಕೊರೊನಾ 3ನೇ ಅಲೆ ಬರ್ತಿದೆ, ಮುಂಜಾಗೃತಾ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಚರ್ಚೆ ನಡೆಸಿದ್ದೇವೆ. ಕರ್ನಾಟಕ ವಿಪತ್ತು ನಿರ್ವಹಣೆಯಡಿ ಹಣ ಬಿಡುಗಡೆ ಮಾಡ್ತೇವೆ ಎಂದು ಅಶೋಕ್ ಹೇಳಿದರು.

ಬೆಂಗಳೂರಿನ ಎಲ್ಲಾ ಕ್ಷೇತ್ರದಲ್ಲೂ ಮಕ್ಕಳ ಆಸ್ಪತ್ರೆಯ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗಿದೆ. ಜಿಲ್ಲಾ ಕೇಂದ್ರದಲ್ಲೂ ಮಕ್ಕಳ ಆಸ್ಪತ್ರೆ ಸ್ಥಾಪನೆಗೆ ಸೂಚನೆ ಕೊಟ್ಟಿದ್ದೇನೆ. ಪ್ರವಾಹ ಹಿನ್ನೆಲೆಯಲ್ಲೂ ಸಭೆ ಪರಿಶೀಲನೆ ನಡೆಸಿದ್ದೇವೆ. ವಿಪತ್ತು ನಿರ್ವಹಣೆಯ ಹಣ ಬಳಕೆಗೆ ಸೂಚಿಸಿದ್ದೇನೆ. ನಾಳೆ, ಅಥವಾ ನಾಡಿದ್ದು ಸಿಎಂ ಗಡಿ ಜಿಲ್ಲೆಗಳಿಗೆ ಭೇಟಿ ನೀಡ್ತಾರೆ. ಕೊರೊನಾ ತಡೆಗೆ ಎಲ್ಲ ಕ್ರಮ ತೆಗೆದುಕೊಳ್ಳುವ ವ್ಯವಸ್ಥೆ ಮಾಡ್ತಿದ್ದೇವೆ. ಖಾಸಗಿ ಆಸ್ಪತ್ರೆಗೆ ತಾತ್ಕಾಲಿಕವಾಗಿ ಬೆಡ್ ಬಳಸಲು ಅವಕಾಶ ನೀಡಿದ್ದೇವೆ. ಪ್ರಕರಣ ಹೆಚ್ಚಾದ್ರೆ ಮತ್ತೆ ಹಾಸಿಗೆ ವಾಪಸ್ ಪಡೆಯುತ್ತೇವೆ. ಈ ಬಗ್ಗೆ ಷರತ್ತು ವಿಧಿಸಿಯೇ ಹಾಸಿಗೆ ಬಳಸಲು ಅವಕಾಶ ನೀಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');