9-10ನೇ ತರಗತಿ ವಿದ್ಯಾರ್ಥಿಗಳ ಕುಟುಂಬದವರಿಗೆ ಕೊರೊನಾ ಲಸಿಕೆ

0
🌐 Belgaum News :

ಬೆಂಗಳೂರು: ರಾಜ್ಯಾದ್ಯಂತ ಇದೇ 23ರಿಂದ 9 ಮತ್ತು 10ನೇ ತರಗತಿಗಳು ಆರಂಭವಾಗಲಿದ್ದು, ಆದ್ಯತೆ ಮೇರೆಗೆ ವಿದ್ಯಾರ್ಥಿಗಳ ಕುಟುಂಬದವರಿಗೆ ಹಾಗೂ ಶಾಲಾ ಸಿಬ್ಬಂದಿಗೆ ಕೋವಿಡ್ ಲಸಿಕೆ ನೀಡಲು ಸೂಚಿಸಲಾಗಿದೆ.

ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಇದೀಗ ತ್ವರಿತವಾಗಿ ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಶಿಕ್ಷಕರು ಮತ್ತು ಬೋಧಕ, ಬೋಧಕೇತರ ಸಿಬ್ಬಂದಿಗೆ ಹಾಗೂ ವಿದ್ಯಾರ್ಥಿಗಳ ಕುಟುಂಬದವರಿಗೆ ಲಸಿಕೆ ನೀಡುವಂತೆ ಇಲಾಖೆಗಳಿಗೆ ಸರ್ಕಾರ ಸೂಚನೆ ನೀಡಿದೆ.

9ನೇ ತರಗತಿ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳ ಕೋವಿಡ್-19 ಲಸಿಕೆ ಪಡೆಯದ ತಂದೆ, ತಾಯಿ ಹಾಗೂ ಪೋಷಕಕರಿಗೂ ಲಸಿಕೆ ನೀಡುವಂತೆ ತಿಳಿಸಲಾಗಿದೆ.

ಇದಕ್ಕಾಗಿ ಶಾಲೆಯ ಮುಖ್ಯಸ್ಥರಿಂದ, ವಿದ್ಯಾರ್ಥಿಗಳ ತಂದೆ, ತಾಯಿ ಹಾಗೂ ಪೋಷಕರಿಗೆ ಮಾಹಿತಿ ತಲುಪಿಸಿ, ಲಸಿಕೆ ಪಡೆಯದವರ ಪಟ್ಟಿ ತಯಾರಿಸಿ ಆರೋಗ್ಯ ಇಲಾಖೆಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಲು ಸರ್ಕಾರ ಆದೇಶಿಸಿದೆ./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');