ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸವಿತಾಗೆ ಉಪನಿರ್ದೇಶಕರಿಂದ ಸನ್ಮಾನ

0
🌐 Belgaum News :

ಬೈಲಹೊಂಗಲ: ತಾಲೂಕಿನ ಉಡಿಕೇರಿಯ ಶ್ರೀ ರಾಮಲಿಂಗೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿನಿ ಸವಿತಾ ಈರಪ್ಪ ಚಿಕ್ಕಮಲ್ಲಿಗವಾಡ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ಸಲುವಾಗಿ ಬೆಳಗಾವಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ (ದ)ಯ ಉಪನಿರ್ದೇಶಕರಾದ ಡಾ. ಎ. ಬಿ. ಪುಂಡಲೀಕ ಅವರು ಇಲಾಖೆ ವತಿಯಿಂದ ವಿದ್ಯಾರ್ಥಿನಿಯನ್ನು ಸನ್ಮಾನಿಸಿ, ಮುಂದಿನ ವ್ಯಾಸಂಗಕ್ಕೆ ಇಲಾಖೆ ವತಿಯಿಂದ ಎಲ್ಲ ಸಹಾಯ ಮಾಡುವ ಭರವಸೆ ನೀಡುವುದರೊಂದಿಗೆ ವಿದ್ಯಾರ್ಥಿನಿ ಉನ್ನತ ಕನಸನ್ನು ಇಟ್ಟುಕೊಳ್ಳುವುದರ ಜೊತೆಗೆ ಅದನ್ನು ಸಾಧಿಸಿ ಉಜ್ವಲ ಭವಿಷ್ಯ ನಿರ್ಮಾಣ ಮಾಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ. ಗುರುನಾಥ ಹೂಗಾರ ಕೂಡ ವಿದ್ಯಾರ್ಥಿನಿಯನ್ನು ಗೌರವಿಸಿ ಅಭಿನಂದಿಸಿದರು. 621 ಅಂಕಗಳನ್ನು ಪಡೆದ ವಿದ್ಯಾರ್ಥಿನಿ ಸುನಿತಾ ಅಬ್ಬಾರ ಇವಳನ್ನು ಗೌರವಿಸಲಾಯಿತು. ಜಿಲ್ಲಾ ಪಂಚಾಯತ್ ಸದಸ್ಯ ಶಂಕರ ಮಾಡಲಗಿ, ಶಿಕ್ಷಣಾಧಿಕಾರಿ ಎ. ಎನ್. ಪ್ಯಾಟಿ, ಸಮನ್ವಯ ಅಧಿಕಾರಿ ಬಿ. ಎಮ್. ಕಸಾಳೆ, ಇ.ಸಿ.ಓ. ಪಿ.ಸಿ.ಮಾಸ್ತಿಹೊಳಿ, ಮಹೇಶ ಯರಗಟ್ಟಿ, ಬಿಆರ್‍ಪಿ ಎ.ಬಿ. ಅಂಗಡಿ, ಸಿಆರ್‍ಪಿ ರಾಜು ಹಕ್ಕಿ, ಆಡಳಿತ ಮಂಡಳಿ ಸದಸ್ಯರಾದ ಈರನಗೌಡ ಚಿಕ್ಕನಗೌಡರ, ಮುಖ್ಯೋಪಾಧ್ಯಾಯ ಎಸ್.ಡಿ. ಪಾಟೀಲ ಹಾಗೂ ಶಿಕ್ಷಕ ಸಿಬ್ಬಂದಿ ವಿದ್ಯಾರ್ಥಿನಿಯ ಪಾಲಕರು ಉಪಸ್ಥಿತರಿದ್ದರು. ಶಿಕ್ಷಕ ನಾಗೇಶ್ ಜೆ. ನಾಯಕ ನಿರೂಪಿಸಿ ವಂದಿಸಿದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');