ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವೃದ್ಧೆಯನ್ನು ರಕ್ಷಿಸಿದ ಕಾಕತಿ ಪೊಲೀಸ್ ಠಾಣೆಯ ಸಿ ಪಿ ಐ

0
🌐 Belgaum News :

 

ಬೆಳಗಾವಿ: ಮಣ್ಣೂರಿನಲ್ಲಿ ತನ್ನ ಮಗಳೊಂದಿಗೆ ವಾಸಿಸುತ್ತಿರುವ ಬೈಲಹೊಂಗಲ ತಾಲೂಕಿನ   ನಾಗಲಾಪುರದ ವೃದ್ಧೆ  ಅಂಬೇವಾಡಿ ಸೇತುವೆ ಬಳಿ ಮಾರ್ಕಂಡೇಯ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸುವ ವೇಳೆ ಅದೇ ಸಮಯದಲ್ಲಿ ಉಚಗಾಂವಗೆ ಹೊರಟಿದ್ದ, ಕಾಕತಿ ಪೊಲೀಸ್ ಇನ್ಸ್‌ಪೆಕ್ಟರ್ ರಾಘವೇಂದ್ರ ಹಳ್ಳೂರ್ ಈ ಘಟನೆಯನ್ನು ವೀಕ್ಷಿಸಿ ತಕ್ಷಣ ಅವರನ್ನು ರಕ್ಷಿಸಿ ನಂತರ ಮನವೊಲಿಸಿ, ವೃದ್ಧೆಯನ್ನು  ಮಗಳ  ಮನೆಗೆ ಕರೆದುಕೊಂಡು ಹೋಗಿ ತಲುಪಿಸಿದ್ದಾರೆ.

ಉದ್ಧವ್ವ ಸಿದ್ದಪ್ಪ ಬದನುರ್ (65, ನಾಗಲಾಪುರದ ನಿವಾಸಿ, ತಾ. ಬೈಲಹೊಂಗಲ) ಅವರ ಮಗಳನ್ನು ಮಣ್ಣೂರಿನಲ್ಲಿ ಕೊಡಲಾಗಿದೆ.  ಪ್ರಸ್ತುತ, ಆಕೆ ತನ್ನ ಮಗಳೊಂದಿಗೆ ಅಂಬೇವಾಡಿಯಲ್ಲಿ ವಾಸಿಸುತ್ತಾರೆ.

ಈ ಕುರಿತು ವಿಚಾರಣೆ ನಡೆಸಿದ ಕಾಕತಿಯ ಇನ್ಸ್‌ಪೆಕ್ಟರ್ ರಾಘವೇಂದ್ರ ಹಳ್ಳೂರ್ ಅವರಿಗೆ ತಿಳಿದುಬಂದಿದ್ದು, ಮನೆಯಲ್ಲಿ ವಾದವಾಗಿದೆ ಇದರಿಂದ ಮನೆಯಿಂದ ಹೊರಬಂದು ಸಣ್ಣ ಕಾರಣಕ್ಕೆ ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದರು ಎಂದು ತಿಳಿದುಬಂದಿದೆ.

ಘಟನೆಯ ಕುರಿತು ವೃದ್ಧ ಮಹಿಳೆಗೆ ತಿಳಿಹೇಳಿ, ಈ ವಯಸ್ಸಿನಲ್ಲಿ  ಇಂತಹ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ ಯಾವುದೇ ಸಮಸ್ಯೆ ಇದ್ದಲ್ಲಿ ತಮ್ಮನ್ನು ಸಂಪರ್ಕಿಸುವುದಾಗಿ ಕಾಕತಿಯ ಇನ್ಸ್‌ಪೆಕ್ಟರ್ ರಾಘವೇಂದ್ರ ಹಳ್ಳೂರ್ ಅವರು ತಿಳಿಹೇಳಿದ್ದಾರೆ ಜೊತೆಗೆ ವೃದ್ಧೆಯ ಕುಟುಂಬಸ್ಥರಿಗೆ ಜಾಗೃತಿ ವಹಿಸಲು  ತಿಳಿಸಲಾಗಿದೆ ಎಂದು ತಿಳಿಸಿದರು.  ಈ ಕುರಿತು ಮಾಹಿತಿಯನ್ನು ಪೊಲೀಸ್ ಇಲಾಖೆಗೆ ವರದಿ ಮಾಡಲಾಗಿದೆ.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');