ಸಚಿವ ಸ್ಥಾನ ಸಿಗುವವರೆಗೆ ನಮ್ಮ ಹೋರಾಟ ನಿಲ್ಲದು ಎಂದು ಅಲ್ಪಸಂಖ್ಯಾತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಮುಸ್ಲಿಂ ಸಮಾಜದ ಮುಖಂಡ ಅಬ್ದುಲ ಮುಲ್ಲಾ

0
🌐 Belgaum News :

ಶೇಡಬಾಳ : ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಾರಣಕರ್ತರಾಗಿರುವ ಶಾಸಕ ಶ್ರೀಮಂತ ಪಾಟೀಲರಿಗೆ ಸಚಿವ ಸ್ಥಾನ ಸಿಗುವವರೆಗೆ ನಮ್ಮ ಹೋರಾಟ ನಿಲ್ಲದು ಎಂದು ಅಲ್ಪಸಂಖ್ಯಾತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಮುಸ್ಲಿಂ ಸಮಾಜದ ಮುಖಂಡ ಅಬ್ದುಲ ಮುಲ್ಲಾ ಹೇಳಿದರು.

ಅವರು ಸೋಮವಾರ ದಿ. 9 ರಂದು ಉಗಾರ ಬುದ್ರುಕ ಗ್ರಾಮದಲ್ಲಿ ಕಾಗವಾಡ ವಿಧಾನ ಸಭಾ ಮತಕ್ಷೇತ್ರದ ಸಮಸ್ತ ಮುಸ್ಲಿಂ ಬಾಂಧವರು ರಾಜ್ಯ ಸಚಿವ ಸಂಪುಟದಲ್ಲಿ ಕಾಗವಾಡ ಶಾಸಕರಾದ ಶ್ರೀಮಂತ ಪಾಟೀಲರನ್ನು ಕೈ ಬಿಟ್ಟಿರುವುದಕ್ಕೆ ಸರ್ಕಾರದ ಗಮನ ಸೆಳೆಯಲು ಜರುಗಿದ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಗತಿಸಿದರೂ ಇಲ್ಲಿಯವರೆಗೆ ಈ ಭಾಗದ ಮುಸ್ಲಿಂ ಸಮಾಜಕ್ಕೆ ಒಂದಿಷ್ಟು ಅನುದಾನವೂ ಬಂದಿರಲಿಲ್ಲ. ಆದರೆ ಶ್ರೀಮಂತ ಪಾಟೀಲರು ಅಲ್ಪಸಂಖ್ಯಾತರ ಸಚಿವರಾದ ನಂತರ ನೂರಾರು ಕೋಟಿ ಅನುದಾನ ತಂದು ಈ ಭಾಗದ ಮಸೀದಿಗಳ ಅಭಿವೃದ್ಧಿ, ಕಂಪೌಂಡ ನಿರ್ಮಾಣ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ.

ವಕ್ತ್ ಕಮೀಟಿಯಿಂದಲೋ ಕೋಟ್ಯಾಂತರ ಅನುದಾನವನ್ನು ಬಿಡುಗಡೆಗೊಳಿಸಿದ್ದಾರೆ. ಅವರ 2 ವರ್ಷದ ಅಧಿಕಾರವಧಿಯಲ್ಲಿ ಇಲ್ಲಿಯವರೆಗೆ ಯಾವುದೇ ಸಚಿವರು ಮಾಡದೇ ಇರುವಂತಹ ಅಭಿವೃದ್ಧಿ ಕಾಮಗಾರಿಯನ್ನು ಶ್ರೀಮಂತ ಪಾಟೀಲರು ಮಾಡಿದ್ದಾರೆ. ಕಾರಣ ಅವರನ್ನು ಮತ್ತೇ ಸಚಿವ ಸಂಪುಟದಲ್ಲಿ ಸೇರ್ಪಡೆಗೊಳಿಸಿಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಉಗಾರ ಬುದ್ರುಕ ಗ್ರಾಮ ಪಂಚಾಯತ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಅಮೀನ ಶೇಖ ಮಾತನಾಡಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಾರಣಕರ್ತರಾಗಿರುವ ಶ್ರೀಮಂತ ಪಾಟೀಲರಿಗೆ ಬಸವರಾಜ ಬೊಮ್ಮಾಯಿಯವರ ಸಂಪುಟದಲ್ಲಿ ಸಚಿವ ಸ್ಥಾನ ತೊರೆಯುತ್ತದೆ ಎಂಬ ಆತ್ಮ ವಿಶ್ವಾಸ ಅಲ್ಪಸಂಖ್ಯಾತರಲ್ಲಿತ್ತು. ಆದರೆ ಶ್ರೀಮಂತ ಪಾಟೀಲರನ್ನು ಕೈ ಬಿಟ್ಟಿರುವುದು ಮುಸ್ಲಿಂ ಸಮುದಾಯಕ್ಕೆ ನೋವು ಉಂಟು ಮಾಡಿದೆ ಎಂದು ಹೇಳಿದರು. ಅವರು ಇಲ್ಲಿಯವರೆಗೆ ಕೋಟ್ಯಾಂತರ

ರೂ. ಅನುದಾನವನ್ನು ಬಿಡುಗಡೆಗೊಳಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಮತ್ತೇ ಅವರನ್ನು ಸಂಪುಟದಲ್ಲಿ ಸೇರ್ಪಡೆಗೊಳಿಸಿಕೊಳ್ಳುವಂತೆ ಒತ್ತಾಯಿಸಿದರು.
ಇದೇ ಸಮಯದಲ್ಲಿ ಮುಸ್ಲಿಂ ಸಮಾಜದ ವತಿಯಿಂದ ಕಾಗವಾಡ ಬ್ಲಾಕ್ ಬಿಜೆಪಿ ಅಧ್ಯಕ್ಷ ತಮ್ಮಣ್ಣ ಪಾರಶೆಟ್ಟಿಯವರಿಗೆ ಶ್ರೀಮಂತ ಪಾಟೀಲರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಮನವಿ ಪತ್ರ ಅರ್ಪಿಸಲಾಯಿತು.

ಈ ಸಮಯದಲ್ಲಿ ಸಿಕಂದರ ನದಾಫ, ಮೌಲಾ ನದಾಫ, ಮಹಮ್ಮದ ಗೌಂಡಿ, ಅಬ್ದುಲ ಮುಲ್ಲಾ, ಖಾಜಿ ಇಮಾಮ ಶೇಖ, ಸಲೀಮ ಜಮಖಾನೆ, ಜಾವೇದ ಶೇಖ, ರಜಾಕ ಮುಲ್ಲಾ, ರಾಜು ಮಾಂಜರೆ, ದಾದಾ ಚೌಧರಿ, ಮುದ್ದು ಮುಲ್ಲಾ, ಅಮೀನ ಶೇಖ, ಜಮೀರ ಜಮಾದಾರ, ದಿಲಾವರ ನೇಜಕರ, ಶಖಿಲ ಮುಲ್ಲಾ, ರಾಮು ಸೊಡ್ಡಿ, ತಮ್ಮಣ್ಣ ಪಾರಶೆಟ್ಟಿ ಸೇರಿದಂತೆ ಕಾಗವಾಡ ವಿಧಾನ ಸಭಾ ಮತಕ್ಷೇತ್ರದ ವಿವಿಧ ಗ್ರಾಮಗಳಿಂದ ಮುಸ್ಲಿಂ ಮುಖಂಡರು ಆಗಮಿಸಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');