ಶಾಸಕ ಅಭಯ ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕೆಂದು ಕರ್ನಾಟಕ ಜೈನ ಅಸೋಷಿಯೇಶನ್‍ದ ನಿರ್ದೇಶಕರಾದ ಅರುಣಕುಮಾರ ಯಲಗುದ್ರಿ ಒತ್ತಾಯಿಸಿದ್ದಾರೆ.

0
🌐 Belgaum News :

ಶೇಡಬಾಳ : ಕರ್ನಾಟಕ ರಾಜ್ಯದ 224 ಶಾಸಕರ ಪೈಕಿ ಏಕೈಕ ಜೈನ ಶಾಸಕರಾಗಿರುವ ಅಭಯಕುಮಾರ ಪಾಟೀಲರಿಗೆ ನೂತನ ಸಂಪುಟದಲ್ಲಿ ಸಚಿವ ಸ್ಥಾನ ನೀಡದೇ ಇರುವುದು ಖೇಧಕರ ಸಂಗತಿಯಾಗಿದೆ. ಮುಂಬರುವ ಸಂಪುಟ ವಿಸ್ತರಣೆ ಸಮಯದಲ್ಲಿ ಶಾಸಕ ಅಭಯಕುಮಾರ ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕೆಂದು ಕರ್ನಾಟಕ ಜೈನ ಅಸೋಷಿಯೇಶನ್‍ದ ನಿರ್ದೇಶಕರಾದ ಅರುಣಕುಮಾರ ಯಲಗುದ್ರಿ ಒತ್ತಾಯಿಸಿದ್ದಾರೆ.

ಅವರು ಮಂಗಳವಾರ ದಿ. 10 ರಂದು ಶೇಡಬಾಳ ಪಟ್ಟಣದ ಶ್ರೀ ಶಾಂತಿಸಾಗರ ಆಶ್ರಮದಲ್ಲಿ ಜರುಗಿದ ಪಕ್ಷಾತೀತ ಜೈನ ಮುಖಂಡರ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅವರು ಮುಂದೆ ಮಾತನಾಡಿ 1978 ರಿಂದ ಹಿಂದಿನ ಪ್ರತಿಯೊಂದು ಸರ್ಕಾರದಲ್ಲಿ ಜೈನರಿಗೆ ಪ್ರಾತಿನಿಧ್ಯ ನೀಡಿ ಸಚಿವ ಸ್ಥಾನ ನೀಡಲಾಗುತ್ತಿತ್ತು.

ಮಾಜಿ ಸಚಿವರಾದ ಎ.ಬಿ.ಜಕನೂರ, ಲಕ್ಷ್ಮೀ ಸಾಗರ, ವೀರಕುಮಾರ ಪಾಟೀಲ, ಅಭಯಕುಮಾರ ಜೈನ, ಡಿ. ಸುಧಾಕರ ಮೊದಲಾದವರು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಸರ್ಕಾರಗಳಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ ಬಿಜೆಪಿ ಸರ್ಕಾರ ಜೈನರನ್ನು ಕಡೆಗಣಿಸಿ ಬೆಳಗಾವಿಯ ಏಕೈಕ ಶಾಸಕರಾಗಿರುವ ಅಭಯಕುಮಾರ ಪಾಟೀಲರಿಗೆ ಸಚಿವ ಸ್ಥಾನ ನೀಡದೇ ಇರುವುದು ಜೈನ ಸಮುದಾಯಕ್ಕೆ ಅನ್ಯಾಯ ಎಸಗಿದಂತಾಗಿದೆ. ಇನ್ನು ಮುಂದಾದರೂ ಜೈನರಿಗೆ ಪ್ರಾತಿನಿಧ್ಯ ನೀಡಿ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು.

ಕರ್ನಾಟಕ ಜೈನ ಅಸೋಷಿಯೇಶನ್‍ದ ಉಪಾಧ್ಯಕ್ಷ ಎ.ಸಿ.ಪಾಟೀಲ ಮಾತನಾಡಿ ಕರ್ನಾಟಕ ರಾಜ್ಯದ 60 ಲಕ್ಷ ಜೈನ ಸಮುದಾಯದ ಏಕೈಕ ಪ್ರತಿನಿಧಿಯಾಗಿರುವ ಶಾಸಕ ಅಭಯಕುಮಾರ ಪಾಟೀಲರು ನಿಷ್ಠಾವಂತ ಬಿಜೆಪಿ ಪಕ್ಷದ ಶಾಸಕರಾಗಿದ್ದು ಆರ್‍ಎಸ್‍ಎಸ್ ಅನುಯಾಯಿಗಳಾಗಿದ್ದಾರೆ. 3 ಬಾರಿ ಅತ್ಯಧಿಕ ಮತಗಳ ಅಂತರದಿಂದ ವಿಜಯಶಾಲಿಗಳಾಗಿದ್ದಾರೆ.

ಪಕ್ಷ ಸಂಘಟನೆಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಇಷ್ಟೆಲ್ಲಾ ಅರ್ಹತೆ ಇದ್ದರು ಕೂಡ ಅವರನ್ನು ನೂತನ ಸಂಪುಟದಲ್ಲಿ ಕೈ ಬಿಟ್ಟಿರುವುದಕ್ಕೆ ಜೈನ ಸಮುದಾಯಕ್ಕೆ ನೋವು ಉಂಟಾಗಿದೆ. ಮುಂದಿನ ಸಂಪುಟ ವಿಸ್ತರಣೆ ಸಮಯದಲ್ಲಿ ಅಭಯಕುಮಾರ ಪಾಟೀಲರಿಗೆ ಸಚಿವ ಸ್ಥಾನ ನೀಡದೇ ಹೋದಲ್ಲಿ ಜೈನರು ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆಂದು ಎಚ್ಚರಿಕೆ ನೀಡಿದರು.

ಈ ಸಮಯದಲ್ಲಿ ಕರ್ನಾಟಕ ಜೈನ ಅಸೋಷಿಯೇಶನ್‍ದ ಉಪಾಧ್ಯಕ್ಷ ಎ.ಸಿ. ಪಾಟೀಲ, ನಿರ್ದೇಶಕ ಅರುಣಕುಮಾರ ಯಲಗುಂದ್ರಿ, ವಿಜಯಕುಮಾರ ಅಕಿವಾಟೆ, ಸುರೇಶ ಚೌಗಲಾ, ಆರ್.ಬಿ.ಪಾಟೀಲ, ರಾಜೇಂದ್ರ ಚೌಗಲೆ, ಪ್ರಕಾಶ ಹೇಮಗೇರಿ, ಜಗದೀಶ ಕುಸನಾಳೆ, ಡಾ. ಸತೀಶ ಮುಗ್ಗನ್ನವರ, ಅಜೀತ ಕರವ, ಆದಿನಾಥ ಬಿಂದಗೆ, ಸುನೀಲ ಚೌಗಲೆ, ಬಾಳಾಸಾಬ ಕೊಗನೊಳ್ಳಿ, ಭಾಸ್ಕರ ಪಾಟೀಲ, ಶೀತಲ ಹೇರಲೇಕರ. ಟಿ.ಕೆ.ಧೋತರೆ, ಕುಮಾರ ಬರಗಾಲೆ, ನೇಮಿನಾಥ ಘೇನಪ್ಪಗೋಳ, ವರ್ಧಮಾನ ಸೇರಿದಂತೆ ಅನೇಕ ಗ್ರಾಮಗಳ ಜೈನ ಶ್ರಾವಕರು ಇದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');