ದಿನಾಚರಣೆ ನಮಗಾಗಿ ತ್ಯಾಗ ಬಲಿದಾನ ಮಾಡಿದ ಸ್ವಾತಂತ್ರ್ಯ ಯೋಧರನ್ನು ನೆನೆಯುವ ದಿನವಾಗಿದೆ: ಜಿಲ್ಲಾಧಿಕಾರಿ ಎಂ ಜಿ ಹಿರೇಮಠ

0
🌐 Belgaum News :

79ನೆಯ” ಕ್ವೀಟ್ ಇಂಡಿಯಾ” ದಿನಾಚರಣೆ ನಮಗಾಗಿ ತ್ಯಾಗ ಬಲಿದಾನ ಮಾಡಿದ ಸ್ವಾತಂತ್ರ್ಯ ಯೋಧರನ್ನು ನೆನೆಯುವ ದಿನವಾಗಿದೆ: ಜಿಲ್ಲಾಧಿಕಾರಿ ಎಂ ಜಿ ಹಿರೇಮಠ

ಬೆಳಗಾವಿ,: ದೇಶ ಸ್ವಾತಂತ್ರ್ಯಕ್ಕೆ ಕರ್ನಾಟಕದ ಕೊಡುಗೆ ಅಪಾರ, ಅದರಲ್ಲೂ ಬೆಳಗಾವಿ ಜಿಲ್ಲೆ ಅಗ್ರಗಣ್ಯ ಸ್ಥಾನ ಹೊಂದಿದ್ದು ವಿಶೇಷ. ವೀರ ರಾಣಿ ಕಿತ್ತೂರು ಚನ್ನಮ್ಮನಿಂದಲೇ ಪ್ರಥಮ ಸ್ವಾತಂತ್ರ್ಯ ಕಿಡಿ ಹೊತ್ತಿದ್ದು. ಸಂಗೊಳ್ಳಿ ರಾಯಣ್ಣ, ಗಂಗಾಧರರಾವ ದೇಶಪಾಂಡೆ, ಅಣ್ಣೂ ಗುರೂಜಿ ಹೀಗೆ ನೂರಾರು ಯೋಧರನ್ನು ಪಡೆದ ಹೆಮ್ಮೆ ಬೆಳಗಾವಿಗಿದೆ. 79ನೆಯ” ಕ್ವೀಟ್ ಇಂಡಿಯಾ” ದಿನಾಚರಣೆ ನಮಗಾಗಿ ತ್ಯಾಗ ಬಲಿದಾನ ಮಾಡಿದ ಸ್ವಾತಂತ್ರ್ಯ ಯೋಧರನ್ನು ನೆನೆಯುವ ದಿನ ಆಗಿದೆ.ಎಂದು ಬೆಳಗಾವಿ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಅವರು ತಿಳಿಸಿದರು.
ಬೆಳಗಾವಿ ಜಿಲ್ಲಾಡಳಿತ, ಸ್ವಾತಂತ್ರ್ಯ ಸೈನಿಕರ ಹಾಗೂ ಉತ್ತರಾಧಿಕಾರಿಗಳ ಸಂಘ ಮತ್ತು ಭಾರತ ಸೇವಾದಳ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 9 ರಂದು ಗೋಗಟೆ ಕಾಲೇಜ್ ಎದುರಿಗಿರುವ ಬೆಳಗಾವಿ ಜಿಲ್ಲಾ ಸ್ವಾತಂತ್ರ್ಯ ಸೈನಿಕ ಭವನದಲ್ಲಿ ಕ್ರಾಂತಿ ದಿನ ” ಕ್ಚೀಟ್ ಇಂಡಿಯಾ” ದಿನ ಆಚರಣೆಯನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.


ಕೇಂದ್ರ ಸರಕಾರದಿಂದ ಆಯ್ಕೆ ಮಾಡಿ ಕಳಿಸಿದ ಗೌರವವನ್ನು ಮಾನ್ಯ ಜಿಲ್ಲಾಧಿಕಾರಿಗಳು ಗೋಕಾಕ ತಾಲೂಕಿನ ಅಕ್ಕತಂಗೇರಹಾಳದ (ಘಟಪ್ರಭಾ) ಅಪ್ಪಣ್ಣ ಕರಲಿಂಗಣ್ಣವರ ಮತ್ತು ಸವದತ್ತಿ ತಾಲೂಕಿನ ದಡೇರಕೋಪ್ಪದ ಗ್ರಾಮದ ಶಿವಪ್ಪ ಅಣ್ಣೀಗೇರಿ ಅವರಿಗೆ ನೀಡಿ ಗೌರವಿಸಿ ಅವರು ಮಾತನಾಡಿದರು.
ಈ ಸನ್ಮಾನ ರಾಷ್ಟ್ರಪತಿ ಭವನದಲ್ಲಿ ನಡೆಯಬೇಕಾಗಿತು.್ತ ಕೋವಿಡ್ ಕಾರಣ ಯೋಧರ ಮನೆಗೆ ತೆರಳಿ ಮಾಡಬೇಕೆಂದಾಗ ಸ್ವಾತಂತ್ರ್ಯ ಸೈನಿಕ ಸಂಘದ ಅಧ್ಯಕ್ಷರಾದ ರಾಜೇಂದ್ರ ಕಲಘಟಗಿ ಅವರು ಹೇಳಿದಂತೆ ಜಿಲ್ಲಾ ಸ್ವಾತಂತ್ರ್ಯ ಸೈನಿಕ ಭವನದಲ್ಲಿಯೇ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ವರ್ಷ ಸ್ವಾತಂತ್ರ್ಯ ಅಮೃತ ಮಹೋತ್ಸªದÀ ವರ್ಷ. 75 ವರ್ಷಗಳ ಇತಿಹಾಸದಲ್ಲಿ ನಮ್ಮ ದೇಶದ ಸ್ವಾತಂತ್ರ್ಯ ಯೋಧರನ್ನು ಸದಾ ಸ್ಮರಿಸೋಣ ಎಂದು ಹೇಳಿದರು.
ಜಿಲ್ಲಾ ಸ್ವಾತಂತ್ರ್ಯ ಸೈನಿಕ ಮತ್ತು ಉತ್ತರಾಧಿಕಾರಿಗಳ ಸಂಘದಿಂದ ಜಿಲ್ಲಾಧಿಕಾರಿಗಳಿಗೆ, ಮುಖ್ಯ ಅತಿಥಿಗಳಾಗಿದ್ದ ಸ್ವಾತಂತ್ರ್ಯ ಯೋಧರಾದ ರಂಗನಾಥ ವಡವಿ, ಭಾರತ ಸೇವಾದಳ ಜಿಲ್ಲಾ ಕಾರ್ಯದರ್ಶಿ ವಿಠ್ಠಲ ಹೆಗಡೆ, ಕೇಂದ್ರ ಸಮಿತಿ ಸದಸ್ಯರಾದ ರಾಜೇಂದ್ರ ಮಾಳಗಿ ಅವರನ್ನು ಗೌರವಿಸಲಾಯಿತು.
ರಾಜೇಂದ್ರ ಕಲಘಟಗಿ ಅಧ್ಯಕ್ಷತೆ ವಹಿಸಿದ್ದರು. ದಿಲೀಪ ಸೋಹನಿ, ಸಂತೋಷ ಹೊಂಗಲ ,ಸಂತೋಷ ಬೆಂಡಿಗೇರಿ, ಸುಭಾಷ ಹೊನಗೇಕರ, ವಿ.ಬಿ.ಮರೆಣ್ಣವರ, ವಿವೇಕಾನಂದ ಪೆÇೀಟೆ, ಕಿರಣ ಬೇಕವಾಡ, ಸಂಜೀವ ಜಾಧವ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು..
ನಮಿತಾ ಪರಮಾಜಿ ಅವರ ಜೊತೆ ಸಾಮೂಹಿಕ ವಂದೇಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಭಾರತ ಸೇವಾದಳ ರಾಜ್ಯ ಉಪದಳಪತಿ ಬಸವರಾಜ ಹಟ್ಟಿಗೌಡರ ಪ್ರಾಸ್ತಾವಿಕ ಮಾಡಿ ಸ್ವಾಗತಿಸಿದರು. ಶ್ರೇಯಾ ಸವ್ವಾಸೇರಿ ನಾಟ್ಯ ಸ್ವಾಗತ ಮಾಡಿದಳು. ಸುಭಾಷ ಹೊನಗೇಕರ ಸರ್ವರಿಗೂ ವಂದಿಸಿದರು. ಸಂತೋಷ ಹೊಂಗಲ ಕಾರ್ಯಕ್ರಮ ನಿರೂಪಿಸಿದರು.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');