ವಿದ್ಯುತ್ ಖಾಸಗೀಕರಣಕ್ಕೆ ತೀವ್ರ ವಿರೋಧ

0
🌐 Belgaum News :

ಬೆಳಗಾವಿ: ಕೇಂದ್ರ ಸರ್ಕಾರವು ವಿದ್ಯುತ್ ಖಾಸಗೀಕರಣಕ್ಕೆ ಪೂರಕವಾಗಿರುವ ವಿದ್ಯುಚ್ಛಕ್ತಿ ಕಾಯ್ದೆ (ತಿದ್ದುಪಡಿ) ಮಸೂದೆ-2021
ಸಿದ್ಧಪಡಿಸಿರುವುದನ್ನು ವಿರೋಧಿಸಿ ರಾಜ್ಯರೈತ ಸಂಘ  ಮತ್ತು ಹಸಿರು ಸೇನೆ ಜಿಲ್ಲಾಘಟಕದ ನೇತೃತ್ವದಲ್ಲಿ ಮುಖಂಡರು ಹಾಗೂ

ಕಾರ್ಯಕರ್ತರು ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.ಅರೆಬೆತ್ತಲೆಯಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ
ಉರುಳುಸೇವೆ ಮಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬ್ಯಾರಿಕೇಡ್ಗಳನ್ನು ತೆಗೆದು
ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ನುಗ್ಗಿ ಮುತ್ತಿಗೆ  ಹಾಕಲು ಯತ್ನಿಸಿದ ಅವರನ್ನು ಪೆÇಲೀಸರು ತಡೆದರು.

ಈ ವೇಳೆ ವಾಗ್ವಾದವೂ ನಡೆಯಿತು.
’ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಅಧೀನದಲ್ಲಿರುವ ಉದ್ದಿಮೆ ಅಥವಾ ಸಂಸ್ಥೆಗಳನ್ನು ಖಾಸಗೀಕರಣ ಮಾಡಿ ಕಾಪೆರ್Çರೇಟ
ಹಾಗೂ ಬಹುರಾಷ್ಟ್ರೀಯ ಕಂಪನಿಗಳಿಗೆ ಗುತ್ತಿಗೆ ನೀಡುತ್ತಿರುವುದು ಪ್ರಜಾಪ್ರಭುತ್ವದ ಆಶಯಕ್ಕೆವಿರುದ್ಧವಾಗಿದೆ’ ಎಂದು ದೂರಿದರು.
’ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ಕ್ವಿಟ್ ಇಂಡಿಯಾ ಚಳವಳಿ ನಡೆಸಿ, ಬ್ರಿಟಿಷರನ್ನು ಭಾರತ ಬಿಟ್ಟಿ ತೊಲಗಿಸಲು ಹೋರಾಡಲಾಯಿತು.
ಸ್ವಾತಂತ್ರ್ಯ ಪಡೆಯಲಾಯಿತು.

ಈಗ ಸರ್ಕಾರಗಳು ವಿದೇಶಿ ಕಂಪನಿಗಳನ್ನು ಆಹ್ವಾನಿಸಿ ಖಾಸಗೀಕರಣದ ಹೆಸರಲ್ಲಿ ಅವರ ಕೈಗೆ ನಮ್ಮ ಉದ್ದಿಮೆಗಳನ್ನು ನೀಡಿ ನಮ್ಮನ್ನು
ಗುಲಾಮಗಿರಿಗೆ ತಳ್ಳುತ್ತಿವೆ ಹಾಗೂ ಸ್ವಾತಂತ್ರ್ಯ  ಹರಣ ಮಾಡುತ್ತಿವೆ. ಇದಕ್ಕಾಗಿ ಕಾಯ್ದೆಗಳನ್ನು ರೂಪಿಸುತ್ತಿವೆ. ಇದು ಸರಿಯಲ್ಲ’ ಎಂದು
ತಿಳಿಸಿದರು.

’ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತ ವಿರೋಧಿ ಕಾನೂನುಗಳಿಂದ ಕುಟುಂಬಗಳು  ಬೀದಿಗೆ ಬರುತ್ತಿವೆ. ಕೃಷಿಗೆ ಸಂಬಂಧಿಸಿದ
ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ   ಆಗ್ರಹಿಸಿ ದೆಹಲಿಯ ಗಡಿಗಳಲ್ಲಿ ಹೋರಾಟ ಆರಂಭವಾಗಿ ತಿಂಗಳುಗಳೇ ಕಳೆದಿವೆ. ಅದಕ್ಕೆ ಸರ್ಕಾರ ಸ್ಪಂದಿಸಿಲ್ಲ. ಈ ನಡುವೆ, ವಿದ್ಯುತ್ ಖಾಸಗೀಕರಣಕ್ಕೆ ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ
ರೈತರ ಸಮಾಧಿ ಮೇಲೆ ರಾಜಕಾರಣ ಮಾಡುತ್ತಿದ್ದಾರೆ ಎನ್ನಬೇಕಾಗುತ್ತದೆ’ ಎಂದು ಸಂಚಾಲಕ ಗಣಪತಿ ಇಳಿಗೆರ ಆರೋಪಿಸಿದರು.

’ರೈತರ ಹೋರಾಟದ ವಿಚಾರದಲ್ಲಿ ಸರ್ಕಾರ ಮೊಂಡುತನ ಪ್ರದರ್ಶಿಸುತ್ತಿರುವುದು ಖಂಡನೀಯ’ ಎಂದರು.’ತಮ್ಮ ಉತ್ಪನ್ನಗಳಿಗೆ ಸರಿಯಾದ ಬೆಲೆ  ದೊರೆಯದೆ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.  ಹೀಗಿರುವಾಗ, ಪಂಪ್‍ಸೆಟ್‍ಗಳಿಗೆ ಡಿಜಿಟಲ್ ಮೀಟರ ಅಳವಡಿಸಿದರೆ ಮತ್ತು ಮುಂಗಡವಾಗಿ ಶುಲ್ಕ ಪಾವತಿಸಿ ವ್ಯವಸಾಯ ಮಾಡಬೇಕೆಂದರೆ  ಸಮಂಜಸವಲ್ಲ. ಸರ್ಕಾರದ ಈ ಧೋರಣೆಯು ನಮ್ಮನ್ನು ವ್ಯವಸಾಯದಿಂದ ಒಕ್ಕಲೆಬ್ಬಿಸುವ ಪೂರ್ವನಿಯೋಜಿತ ಹುನ್ನಾರವೆಂದೇ  ಹೇಳಬೇಕಾಗುತ್ತದೆ.ಯಾವುದೇ ಕಾರಣಕ್ಕೂ ರೈತ ವಿರೋಧಿ

ಕಾನೂನುಗಳನ್ನು ಜಾರಿಗೊಳಿಸಬಾರದು’ ಎಂದು ಆಗ್ರಹಿಸಿದರು. ಜಿಲ್ಲಾಧಿಕಾರಿ ಕಚೇರಿಗೆಮನವಿ ಸಲ್ಲಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ
ಸತ್ತೆಪ್ಪ ಮಲ್ಲಾಪೂರ, ಸೋಮು ರೈನಾಪುರ, ಸಿದ್ದಪ್ಪ ಹನಗಂಡಿ, ರಾಜು ಮರ್ವೆ, ಎಂ.ಎಸ್. ಹಿರೇಮಠ, ಕಲ್ಲಪ್ಪ ವಾಲಿಕಾರ ಇದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');