ಶ್ರೀಮಂತ ಪಾಟೀಲ್‍ರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರ

0
🌐 Belgaum News :

ಬೆಳಗಾವಿ: ಸಿಎಂ ಬಸವರಾಜ್ ಬೊಮ್ಮಾಯಿ ಅವರ ಸರ್ಕಾರದಲ್ಲಿ ಮರಾಠಾ ಸಮಾಜಕ್ಕೆ ಸಚಿವ ಸ್ಥಾನ ನೀಡದೆ, ಕಡೆಗಣನೆ ಮಾಡಿದ್ದಾರೆ.
ಈ ಹಿಂದೆ ಸಚಿವರಾಗಿದ್ದ ಶ್ರೀಮಂತ ಪಾಟೀಲ್ ಅವರಿಗೆ ಮತ್ತೇ ಸಚಿವ ಸ್ಥಾನ ನೀಡಬೇಕು ಇಲ್ಲದಿದ್ದರೆ ಸರ್ಕಾರದ ವಿರುದ್ಧ ಉಗ್ರವಾದ
ಹೋರಾಟ ಮಾಡುತ್ತೇವೆ ಎಂದು ಮಾಜಿ ಜಿ.ಪಂ ಸುಮಿತ್ರಾ ಓಗಳೆಅವರು ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಮಾಧ್ಯಮಗೊಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಬೊಮ್ಮಾಯಿ ಅವರು ಸರ್ಕಾರದಲ್ಲಿ
ಮರಾಠಾ ಸಮಾಜಕ್ಕೆ ಸಂಪೂರ್ಣ ಕಡೆಗಣನೆ ಮಾಡಲಾಗಿದೆ. ಮರಾಠಾ ಸಮಾಜವನ್ನು ಕಡೆಗಣನೆ ಮಾಡಿದರಿಂದ ನಮ್ಮ ಸಮಸ್ಯೆ ಯಾರ
ಬಳಿ ಹೇಳಿಕೊಳ್ಳುವುದು ಎಂಬವುದು ನಮಗೆ ತಿಳಿಯದಾಗಿದೆ. 75 ರಿಂದ 85 ಲಕ್ಷದ ವರೆಗೆ ಮರಾಠ ಸಮಾಜದ ಜನಸಂಖ್ಯೆ ಇದ್ದರು
ನಮ್ಮ ಸಮಾಜಕ್ಕೆ ಬಿಜೆಪಿ ಸರ್ಕಾರ ಕಡೆಗಣನೆ ಮಾಡಿದೆ ಎಂದು ಆರೋಪಿಸಿದರು. ನಮ್ಮ ಸಮಾಜದ ಒಂದೇ ಒಂದು ಶಾಸಕರಿಗೆ
ಸಚಿವ ಸ್ಥಾನ ನೀಡದೆ ಇರೋದರಿಂದ ಮುಂದಿನ ದಿನಗಳಲ್ಲಿ ಹೊರಟ ಮಾಡುತ್ತೇವೆ. ನಮ್ಮ ಸಮಾಜಕ್ಕೆ ಮಾನ್ಯತೆ ನೀಡುವುವರೆಗೆ ಹೋರಾಟ
ಮಾಡುತ್ತೇವೆ. ಮರಳಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');