ಸ್ಕೌಟ್ಸ್ ಮತ್ತು ಗೈಡ್ಸ್ ಶಾಲಾ ಮಕ್ಕಳಿಗೆ ಬಿಡುಗಡೆಯಾದ ಅನುದಾನ ಶಾಲೆಗಳಿಗೆ ತಲುಪಿಸುವಂತೆ ಸಚಿವರಿಗೆ ಮನವಿ

0
🌐 Belgaum News :

ಚಿಕ್ಕೋಡಿ : ಸ್ಕೌಟ್ಸ್ ಮತ್ತು ಗೈಡ್ಸ್ ಶಾಲಾ ಮಕ್ಕಳಿಗೆ ಬಿಡುಗಡೆಯಾದ ಅನುದಾನವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ದಳಗಳಿರುವ ಶಾಲೆಗಳಿಗೆ ತಲುಪಿಸಬೇಕೆಂದು ಒತ್ತಾಯಿಸಿ ಬುಧುವಾರ ಸ್ಕೌಟ್ಸ್ ಮತ್ತು ಗೈಡ್ಸ್ ಚಿಕ್ಕೋಡಿ ವಿಭಾಗದ ಶಿಕ್ಷಕರು ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ರಾಜ್ಯದ ಪ್ರತಿ ಜಿಲ್ಲೆ, ತಾಲೂಕು ಹಾಗೂ ಗ್ರಾಮಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳನ್ನು ಶಾಲಾ ಮಕ್ಕಳಿಗಾಗಿ ಅನುದಾನ ಬಿಡುಗಡೆಯಾಗಿದೆ. ಆದರೆ, ಸ್ಕೌಟ್ಸ್ ಮತ್ತು ಗೈಡ್ಸ್ ದಳವಿರುವ ಶಾಲೆಗಳಿಗೆ ಸರ್ಕಾರ ಅನುದಾನ ತಲುಪುತ್ತಿಲ್ಲ, ಹೀಗಾಗಿ ಸಚಿವರು ಸೂಕ್ತ ಗಮನ ಹರಿಸಿ ಯವ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಶಾಲೆಗಳಿಗೆ ಸರ್ಕಾರದ ಅನುದಾನ ತಲುಪಿಸಬೇಕೆಂದು ಮನವಿ ಮಾಡಿದರು.

ಸಂಸ್ಥೆ ಕಾರ್ಯದರ್ಶಿ ಎನ್.ಜಿ.ಪಾಟೀಲ, ಜೆ.ಎಂ.ಚೌಗಲಾ, ಎಸ್.ಎನ್.ತೆಗ್ಗಿಹಾಳ, ಎಚ್.ಜಿ.ಜೋಶಿ, ಜಿ.ಎಂ.ಬಿಸಲನಾಯಿಕ, ಎಲ್.ಎಸ್.ಧನವಾಡೆ, ಸಿ.ಎಂ.ಕಾಂಬಳೆ, ಪುಸ್ಪಾ ಕುಂಬಾರ ಮುಂತಾದವರು ಉಪಸ್ಥಿತರಿದ್ದರು.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');