ದಂಡಯಾತ್ರೆ ಮಾಡಲ್ಲ, ಸಚಿವ ಸ್ಥಾನ ನೀಡಿದ್ರೆ ಅನುಕೂಲ ಇತ್ತು: ಶಾಸಕ ಅಭಯ್ ಪಾಟೀಲ್

0
🌐 Belgaum News :

ಬೆಳಗಾವಿ: ಕ್ಷೇತ್ರದ  ಅಭಿವೃದ್ಧಿ ಕೆಲಸಗಳಿಗೆ ನಾನು ಒತ್ತು ಕೊಡುತ್ತೆನೆ ಹೊರತು ಅಧಿಕಾರಕ್ಕಲ್ಲ.  ನನಗೂ ದಂಡಯಾತ್ರೆ ಮಾಡಲು ಬರುತ್ತದೆ, ಸುಮ್ಮನಿರುವುದೇ ನನ್ನ ದೌರ್ಬಲ್ಯವಲ್ಲ ಎಂದು  ಶಾಸಕ ಅಭಯ್ ಪಾಟೀಲ್ ಅಸಮಾಧಾನ ಹೊರಹಾಕಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲರ ವಿಶ್ವಾಸ ಹಾಗೂ   ಶಿಸ್ತಿನ ಪಕ್ಷದಲ್ಲಿ ನಾವಿದ್ದೆವೆ ಎಂಬುವುದು ಅರಿವಾಗಬೇಕು. ಪಕ್ಷ ನಮಗೆ ಬಹಳಷ್ಟು ಕೊಟ್ಟಿದೆ, ನನ್ನ ಕ್ಷೇತ್ರದಲ್ಲಿ ಕಾರ್ಯಕರ್ತರು ಹಗಲಿರುಳು ಕಾರ್ಯನಿರ್ವಹಿಸುತ್ತಾರೆ. ಪಕ್ಷದ ತೀರ್ಮಾನದ ಬಗ್ಗೆ ಮಾತನಾಡುವಷ್ಟು ದೊಡ್ಡವರಲ್ಲ.

ಆದರೆ, ಆ ದಂಡಯಾತ್ರೆ ಮಾಡಲು ನನಗೆ  ಇಚ್ಛೆ ಇಲ್ಲ. ಸಿಎಂ ಬದಲಾವಣೆ ಯಾವ ಉದ್ದೇಶಕ್ಕೆ ಆಯ್ತು ನನಗೆ ಗೊತ್ತಿಲ್ಲ. ಅನಂತಕುಮಾರ್ ಅವರು ಇದ್ದಿದ್ರೆ  ನನಗೆ ಸಚಿವ ಸ್ಥಾನ ಲಭ್ಯಸುವ ಸಾಧ್ಯತೆ ಇತ್ತು. ನಾನು ಯಾವುದಕ್ಕೂ ಲಾಬಿ ಮಾಡುವನಲ್ಲಎಂದರು.

ಬಿಜೆಪಿ ಒಳ್ಳೆಯ ಅಧಿಕಾರದ ಸ್ಥಾನ ಕೊಟ್ಟಿದೆ.  2004 ರಿಂದ ಶಾಸಕನಾಗಿದ್ದು 90ರ ದಶಕದಿಂದಲೂ ಪಕ್ಷದಲ್ಲಿ ಇದ್ದೇನೆ.   2008ರ ನಂತರ ಬಂದವರಿಗೂ ಅಧಿಕಾರ ಸಿಕ್ಕಿದೆ.  ಪರಿವಾರ ಹಿನ್ನೆಲೆ ಬಂದಂತಹ ಶಾಸಕರಿಗೆ ಸಭ್ಯತೆ ಸಂಸ್ಕಾರ ಕೊಟ್ಟಿದ್ದರಿಂದ ಇತಿಮಿತಿಯಲ್ಲಿರಬೇಕಾಗುತ್ತದೆ.

ಬೆಳಗಾವಿ ಲೋಕಸಭಾ ಕ್ಷೇತ್ರದವರಿಗೆ ಸಚಿವ ಸ್ಥಾನ ನೀಡಿದ್ರೆ ಅನುಕೂಲ ಆಗ್ತಿತ್ತು. ಮುಂಬರುವ ಮಹಾನಗರ ಪಾಲಿಕೆ, ಜಿ.ಪಂ, ತಾ.ಪಂ. ಚುನಾವಣೆಯಲ್ಲಿ ಅನುಕೂಲ ಆಗುತ್ತಿತ್ತು. ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡ್ತೀನಿ ಅಂದ್ರೆ ನೂರಕ್ಕೆ ನೂರು ಒಪ್ಪಲ್ಲ. ನಾನು ಜಾತಿ ನೋಡಿ ಪಕ್ಷ ಸೇರಿಲ್ಲ, ನನ್ನ ಕೆಲಸ ಕಾರ್ಯ ನೋಡಿ ಗುರುತಿಸಬೇಕಾಗಿತ್ತು ಎಂದು ಶಾಸಕ ಅಭಯ್ ಪಾಟೀಲ್ ಹೇಳಿದರು.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');