ಕರ್ನಾಟಕದಲ್ಲಿ ಶಾಖೆ ತೆರೆದ ಶಿವಪ್ರತಾಪ ಕ್ರೆಡಿಟ್ ಸೋಸೈಟಿ

0
🌐 Belgaum News :
ಅಥಣಿ: ಮಹಾರಾಷ್ಟ್ರದ ವಿಟಾ ನಗರದ ಶಿವಪ್ರತಾಪ ಮಲ್ಟಿಸ್ಟೇಟ್ ನಾಗರಿ ಕೋ-ಆಪ್ ಕ್ರೆಡಿಟ್ ಸೊಸೈಟಿಯ ಶಾಖೆಯನ್ನು ೧೯ ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕನ್ನಡ ನಾಡಿನ ಗಡಿ ಭಾಗದ ಪ್ರಮುಖ ತಾಲೂಕು ಅಥಣಿಯಲ್ಲಿ ಪ್ರಾರಂಭಿಸಲಾಗಿದೆ ಎಂದು ಸೊಸೈಟಿ ಚೇರಮನ್ ಪ್ರತಾಪ ಸೇಠ ಸಾಳುಂಕೆ ಹೇಳಿದರು.
ಅಥಣಿಯ ತರಕಾರಿ ಮಾರುಕಟ್ಟೆಯಲ್ಲಿ ಕರ್ನಾಟಕ ರಾಜ್ಯದ ಪ್ರಥಮ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ೧೮ ವರ್ಷಗಳ ಹಿಂದೆ ಮಹಾರಾಷ್ಟ್ರದ ವಿಟಾ ನಗರದಲ್ಲಿ ಪ್ರಾರಂಭಗೊಂಡ ಶಿವಪ್ರತಾಪ ಮಲ್ಟಿಸ್ಟೇಟ್ ನಾಗರಿ ಕೋ-ಆಪ್ ಸೊಸೈಟಿಯು ಹಲವು ವರ್ಷಗಳ ಕಾಲ ಉತ್ತಮ ಆರ್ಥಿಕ ವ್ಯವಹಾರವನ್ನು ಮುನ್ನಡೆಸಿಕೊಂಡು ಬಂದ ಪರಿಣಾಮವಾಗಿ ಜನಮನ್ನಣೆ ಗಳಿಸಿದ್ದರಿಂದ ಕೆಲವೇ ವರ್ಷಗಳಲ್ಲಿ ಕೋಟ್ಯಾಂತರ ರೂಪಾಯಿ ಠೇವಣಿ ಹರಿದು ಬಂದಿದೆ.
ಇದರ ಪರಿಣಾಮ ಸೊಸೈಟಿ ಮೂಲಕ ಸಣ್ಣ ಮತ್ತು ಅತೀ ಸಣ್ಣ ವ್ಯಾಪಾರಸ್ಥರಿಗೆ ಸಾಲ ನೀಡಲು ನಿರ್ಧರಿಸಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಲು ಪ್ರಾರಂಭಿಸಿದ್ದರಿಂದ ಸಂಸ್ಥೆಯ ಮೂಲಕ ಕೊಟ್ಟ ಸಾಲ ಬಡ್ಡಿ ಸಹಿತ ವಾಪಸ್ಸ ಬಂದಿದ್ದು ಮಲ್ಟಿಸ್ಟೇಟ್ ಶಿವಪ್ರತಾಪ ಸೊಸೈಟಿಯು ಈಗಾಗಲೇ ಮಹಾರಾಷ್ಟ್ರದಲ್ಲಿ ೧೪ ಶಾಖೆಗಳ ಮೂಲಕ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅಥಣಿಯಲ್ಲಿ ೧೫ ನೇ ಶಾಖೆಯನ್ನು ಪ್ರಾರಂಭಿಸಿದ್ದೇವೆ. ಸೊಸೈಟಿ ಮೂಲಕ ಚಿನ್ನದ ಆಭರಣಗಳ ಮೇಲೆ ಅತೀ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದ್ದು, ಇಲ್ಲಿಯವರೆಗೆ ಸೊಸೈಟಿಯು ೧೬೪ ಕೋಟಿ ಠೇವಣಿ ಹಣ ಸಂಗ್ರಹಿಸಿ ೧೧೯ ಕೋಟಿ ರೂ.ಗಳಷ್ಟು ಹಣವನ್ನು ಸಾಲವಾಗಿ ನೀಡಲಾಗಿದೆ ಸೊಸೈಟಿಯಲ್ಲಿ ಹೆಚ್ಚು ಹೆಚ್ಚು ಸಣ್ಣ ಮತ್ತು ಅತೀ ಸಣ್ಣ ವ್ಯಾಪಾರಸ್ಥರು ತಮ್ಮ ಆರ್ಥಿಕ ವ್ಯವಹಾರ ಮಾಡಬೇಕು ಎಂದು ಮನವಿ ಮಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ, ಶಿವಪ್ರತಾಪ ಮಲ್ಟಿಸ್ಟೇಟ್ ನಾಗರಿ ಕೋ-ಆಪ್ ಸೊಸೈಟಿಯು ಅಥಣಿಯಲ್ಲಿ ೧೫ ಶಾಖೆಯನ್ನು ಪ್ರಾರಂಭಿಸಿರುವುದು ಸಂತೋಷದಾಯಕ ವಿಷಯವಾಗಿದೆ ನೂರಾರು ಕೋಟಿ ರೂ.ಗಳಷ್ಟು ಠೇವಣಿ ಹೊಂದಿದ ಮತ್ತು ದುಡಿಯುವ ಬಂಡವಾಳ ಹೊಂದಿರುವ ಇಂತಹ ಸೊಸೈಟಿಯಲ್ಲಿ ವ್ಯಾಪಾರಸ್ಥರು ವ್ಯವಹಾರ ನಡೆಸಬೇಕು ಮತ್ತು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಂಡು ತಮ್ಮ ವ್ಯವಹಾರವನ್ನು ಇನ್ನಷ್ಟು ಅಭಿವೃದ್ಧಿ ಪಡೆಸಿಕೊಳ್ಳಬೇಕು ಎಂದು ಹೇಳಿದರು.
ಜೆಡಿಎಸ್ ಮುಖಂಡ ಗಿರೀಶ ಬುಟಾಳೆ ಕೂಡ ಅತಿಥಿಗಳಾಗಿ ಆಗಮಿಸಿ ಮಾತನಾಡಿದ್ದರು. ಕಾಂಗ್ರೆಸ್ ಮುಖಂಡ ಸದಾಶಿವ ಬುಟಾಳಿ, ಪ್ರಥಮ ದರ್ಜೆ ಗುತ್ತಿಗೆದಾರ ನಾನಾಸಾಹೇಬ ಅವತಾಡೆ, ಮುಖಂಡರಾದ ಅವಿನಾಶ ಜಾಧವ, ಸಚಿನ ದೇಸಾಯಿ, ಉಪಾಧ್ಯಕ್ಷ ಹಣಮಂತರಾವ ಸಪಕಾಳ, ನಿರ್ದೇಶಕ ಕಂಡಳಿ, ಸದಸ್ಯರಾದ ಸತೀಶ ಸಾಳುಂಕೆ, ವಿಠ್ಠಲ್ ಸಾಳುಂಕೆ, ಜಯಸಿಂಗ ಗಾಯಕವಾಡ, ಯಶೋಧನ ಕಾಂಬಳೆ, ಗೋಪಾಳ ತಾರಳೇಕರ, ಶಿವಾಜಿರಾವ ಮಾನೆ, ಬಬನರಾವ ಧಬಡೆ, ವಿಕ್ರಮ ಪಾಟೀಲ, ಸೀತಾರಾಮ ಹಾರೂಗಡೆ, ಅಲಮ್ ಪಟೇಲ್, ಶ್ರೀಮತಿ ಸುರೇಖಾ ಜಾಧವ, ಶ್ರೀಮತಿ ರೋಹಿಣಿ ಜಾಧವ, ರಣಜೀತ ಜಾಧವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');