ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಿದ ಶಾಸಕ ಅನಿಲ ಬೆನಕೆ

0
🌐 Belgaum News :

ಬೆಳಗಾವಿ, ರಾಜ್ಯ ಸರ್ಕಾರದ ಮಹತ್ವದಯೋಜನೆಯಾದ ಭಾಗ್ಯಲಕ್ಷ್ಮಿಯೋಜನೆಜನಪ್ರಿಯತೆ ಹೊಂದಿದೆ. ಈ ಯೋಜನೆಯ ಲಾಭವನ್ನು ಹೆಣ್ಣು ಮಕ್ಕಳಿಗೆ ಸಿಗಬೇಕು ಎಂದು ಶಾಸಕ ಅನಿಲ ಬನೆಕೆ ಅವರು ತಿಳಿಸಿದರು.

ಬುಧವಾರ ಮಹಾನಗರ ಪಾಲಿಕೆಯತಮ್ಮಕಚೇರಿಯಲ್ಲಿ ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ ಮಾಡದಿದ ಬಳಿಕ ಮಾತನಾಡಿದಅವರು, ಹೆಣ್ಣುಮಕ್ಕಳಿಗೆ 18 ವರ್ಷತುಂಬಿದ ಬಳಿಕ ಅವರಿಗೆ 1 ಲಕ್ಷರೂಪಾಯಿರಾಜ್ಯ ಸರ್ಕಾರ ನೀಡುವಯೋಜನೆಇದಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಬೇಟಿ ಬಚಾವೋ ಬೇಟಿ ಪಡಾವೋ ಎಂಬ ಯೋಜನೆಜಾರಿಗೆತಂದಿದ್ದು, ಪ್ರತಿಯೊಂದು ಹೆಣ್ಣು ಮಕ್ಕಳಿಗೂ ಶಿಕ್ಷಣ ಸಿಗಬೇಕು. ಹೆಣ್ಣುಮಕ್ಕಳು ಶಿಕ್ಷಣ ಪಡೆದುಕೊಂಡರೆಅವರುಎಲ್ಲಾಕ್ಷೇತ್ರದಲ್ಲಿ ಹೆಸರು ಮಾಡಬಹುದುಎಂದು ತಿಳಿಸಿದರು.

ಇತ್ತೀಚೆಗೆ ನಡೆದಓಲಂಪಿಕ್ ನಲ್ಲಿ ಭಾರತ ಪರ ಹೆಣ್ಣು ಮಕ್ಕಳು ಹೆಚ್ಚು ಪದಕಗಳನ್ನು ಗೆಲ್ಲುವ ಮೂಲಕ ಸಾಧನೆ ಮಾಡಿದ್ದಾರೆ. ಹಾಗಾಗಿ ಹೆಣ್ಣು ಮಕ್ಕಳನ್ನು ಶಿಕ್ಷಣ ನೀಡಿ, ಬೆಳೆಸಬೇಕು. ಭಾಗ್ಯಲಕ್ಷ್ಮಿಯೋಜನೆಯುಒಂದುಕುಟುಂಬದಇಬ್ಬರು ಹೆಣ್ಣು ಮಕ್ಕಳಿಗೆ ಅನ್ವಯವಾಗುತ್ತದೆಎಂದು ಶಾಸಕ ಅನಿಲ ಬೆನಕೆ ಅವರು ತಿಳಿಸಿದರು

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');