ಗ್ರಾಹಕರ ಅನುಕೂಲತೆ ಹೆಚ್ಚಿಸಲು ಯುಪಿಐ ಆಟೊ ಪೇ

0
🌐 Belgaum News :

English-ICICI Prudential Life Insurance ties up with NPCI (1)

 

ಬೆಳಗಾವಿ : ಗ್ರಾಹಕರಿಗೆ ಯುನಿಫೈಡ್ ಪೇಮೆಂಟ್ಸ್ ಇಂಟರ್‍ಫೇಸ್ (ಯುಪಿಐ) ಆಟೊಪೇ ಸೌಲಭ್ಯವನ್ನು ಒದಗಿಸುವ ಸಲುವಾಗಿ ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್‍ಇನ್ಶೂರೆನ್ಸ್, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‍ಸಿಪಿಐ) ಜತೆ ಒಪ್ಪಂದ ಮಾಡಿಕೊಂಡಿದೆ, ಇದು ಗ್ರಾಹಕರು ತಮ್ಮ ಮನೆಗಳಲ್ಲೇ ಸುರಕ್ಷಿತವಾಗಿ ಕುಳಿತುಕೊಂಡು ವಿಮಾ ಪಾಲಿಸಿಗಳನ್ನು ಖರೀದಿಸಲು ಮತ್ತು ವಿಮಾಕಂತು ಪಾವತಿ ಮಾಡಲು ಗ್ರಾಹಕರನ್ನು ಸಶಕ್ತಗೊಳಿಸಲಿದೆ.

ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್, ತನ್ನ ಗ್ರಾಹಕರ ಅನುಕೂಲಕ್ಕಾಗಿ ವಿಮಾಕಂತು ಪಾವತಿಗೆಯು ಪಿಐ ಆಟೊಪೇ ಆರಂಭಿಸಲು ಎನ್‍ಪಿಸಿಐ ಜತೆ ಒಪ್ಪಂದ ಮಾಡಿಕೊಂಡ ಮೊಟ್ಟ ಮೊದಲ ವಿಮಾ ಕಂಪನಿ ಎನಿಸಿದೆ. ಇದು ಇಡೀ ಪಾವತಿ ಪ್ರಕ್ರಿಯೆಯನ್ನು ಸರಳಗೊಳಿಸಲಿದ್ದು, ಈ ಮೂಲಕ ಗ್ರಾಹಕರಿಗೆ ಹೆಚ್ಚಿನ ಅನುಕೂಲತೆ ಕಲ್ಪಿಸಲಿದೆ.

ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಶೂರೆನ್ಸ್‍ನ ಮುಖ್ಯಸ್ಥ ಆಶೀಶ್ ರಾವ್ ಮಾತನಾಡಿ, ಗ್ರಾಹಕರು ತಮ್ಮ ಜೀವ ವಿಮಾ ಪಾಲಿಸಿಗಳ ವಿಮಾ ಕಂತನ್ನು ಇನ್‍ಸ್ಟೆಂಟ್ ವಿಧಾನದ ಮೂಲಕ ಪಾವತಿ ಮಾಡಲು ಅನುವಾಗುವಂತೆ ಯುಪಿಐ ಆಟೊಪೇ ಪಾವತಿ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಎನ್‍ಸಿಪಿಐ ಜತೆ ಪಾಲುದಾರಿಕೆ ಮಾಡಿಕೊಳ್ಳಲು ನಮಗೆ ಅತೀವ ಸಂತಸ ಎನಿಸುತ್ತಿದೆ. ಗ್ರಾಹಕರು ಈ ಇ-ಮ್ಯಾಂಡೆಟ್ ಸೌಲಭ್ಯವನ್ನು ತನ್ನ ನಿಯತವಾದ ವಿಮಾಕಂತು ಪಾವತಿ ನವೀಕರಣಕ್ಕಾಗಿ ಪಡೆಯಬಹುದಾಗಿದೆ ಹಾಗೂ ಈ ಮೂಲಕ ತಮ್ಮ ಸ್ವಂತ ಹಾಗೂ ಕುಟುಂಬದ ಹಣಕಾಸು ಸುಭದ್ರತೆಯನ್ನು ಖಾತರಿಪಡಿಸಿಕೊಳ್ಳಬಹುದಾಗಿದೆ ಎಂದರು.

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್‍ಇಂಡಿಯಾ (ಎನ್‍ಸಿಪಿಐ) ಉತ್ಪನ್ನಗಳ ವಿಭಾಗದ ಮುಖ್ಯಸ್ಥ ಕುನಾರ್ ಕಲಾವತಿಯಾ ಮಾತನಾಡಿ, ಯುಪಿಐ ಆಟೊಪೇ ಮೂಲಕ ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಶೂರೆನ್ಸ್ ಜತೆ ಸಹಯೋಗ ಹೊಂದಲು ನಮಗೆ ಸಂತಸವಾಗಿದೆ. ಇಡೀ ವಿಮಾ ವಲಯದಲ್ಲಿ ವಿನೂತನ ಪ್ರಯತ್ನವಾಗಿದೆ. ಗ್ರಾಹಕರಿಗೆ ತಮ್ಮ ಆವರ್ತನೀಯ ಪಾವತಿಗೆ ಪೂರಕವಾಗಲಿದ್ದು, ಗ್ರಾಹಕ ಭಾವನೆ ಬೆಳೆಸಲು ಅನುಕೂಲವಾಗಲಿದೆ ಎನ್ನುವುದು ನನ್ನ ನಂಬಿಕೆ ಎಂದರು.

ಗ್ರಾಹಕರಿಗೆ ಉತ್ಕøಷ್ಟ ಮತ್ತು ಸುಲಲಿತ ಅನುಭವವನ್ನು ಒದಗಿಸಲು ನೆರವಾಗಲಿದೆ. ಕಂಪನಿಯು ಸತತ ಹದಿಮೂರನೇ ತಿಂಗಳ ನಿರಂತರತೆ 2022ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಅವಧಿಗೆ 87.6% ಆಗಿದ್ದು, ಇದು ಇಡೀ ಜೀವ ವಿಮಾ ಉದ್ಯಮದಲ್ಲೇ ಗರಿಷ್ಠ ಪ್ರಮಾಣ ಎನಿಸಿದೆ. ಗ್ರಾಹಕರಿಗೆ ನುಕೂಲಕರ ಮತ್ತು ಸುರಕ್ಷಿತ ಪಾವತಿ ವ್ಯವಸ್ಥೆಯ ಆಯ್ಕೆ ಒದಗಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');