ಕೆನರಾ ರೊಬೆಕೊ ಮ್ಯೂಚ್ಯುವಲ್ ಫಂಡ್‍ನಿಂದ ವ್ಯಾಲ್ಯೂ ಫಂಡ್ ಆರಂಭ ಸಾರ್ವಜನಿಕ ಹೂಡಿಕೆ ಪ್ರಕ್ರಿಯೆ ಆ.13 ಕ್ಕೆ ಆರಂಭ ಆ27 ಕ್ಕೆ ಅಂತ್ಯ

0
🌐 Belgaum News :

 

ಬೆಳಗಾವಿ ;ಕೆನರಾ ರೊಬೆಕೊ ಅಸೆಟ್ ಮ್ಯಾನೇಜ್‍ಮೆಂಟ್ ಕಂಪನಿ ಲಿಮಿಟೆಡ್ ತನ್ನ ಹೊಸ ಫಂಡ್ ಆಫರ್ (ಎನ್‍ಎಫ್‍ಒ) ಕೆನರಾ ರೊಬೆಕೊ ವ್ಯಾಲ್ಯೂ ಫಂಡ್ ಅನ್ನು ಘೋಷಣೆ ಮಾಡಿದೆ. ಇದೊಂದು ಓಪನ್-ಎಂಡೆಡ್ ಈಕ್ವಿಟಿ ಸ್ಕೀಂ ಆಗಿದ್ದು, ಮೌಲ್ಯಯುತವಾದ ಹೂಡಿಕೆ ಕಾರ್ಯತಂತ್ರವನ್ನು ಅನುಸರಿಸುತ್ತದೆ. ಇದರಿಂದ ತಮ್ಮ ಆಂತರಿಕ ಮೌಲ್ಯಗಳಿಗಿಂತ ಕಡಿಮೆ ಬೆಲೆಯಲ್ಲಿ ವ್ಯಾಪಾರ ಮಾಡುವ ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ಮತ್ತು ಭವಿಷ್ಯದಲ್ಲಿ ಅವರ ನಿಜವಾದ ಮೌಲ್ಯವನ್ನು ಅರಿತುಕೊಳ್ಳುವ ನಿರೀಕ್ಷೆ ಇದೆ.
ಕೆನರಾ ರೊಬೆಕೊ ವ್ಯಾಲ್ಯೂ ಫಂಡ್ ಅನ್ನು ಬಿಡುಗಡೆ ಮಾಡುವ ಬಗ್ಗೆ ಮಾತನಾಡಿದ ಸಂಸ್ಥೆಯ ಮಾರಾಟ & ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಮೋಹಿತ್ ಭಾಟಿಯಾ ಅವರು, ಜಾಗತಿಕ ಮತ್ತು ದೇಶೀಯ ಲಿಕ್ವಿಡಿಟಿಯಿಂದ ಮಾರುಕಟ್ಟೆಗಳು ನಡೆಸಲ್ಪಡುತ್ತಿರುವ ಈ ಸಂದರ್ಭದಲ್ಲಿ ನಮ್ಮ ಹೊಸ ಕೊಡುಗೆಯಾದ ಕೆನರಾ ರೊಬೆಕೊ ವ್ಯಾಲ್ಯೂ ಫಂಡ್ ಅನ್ನು ಪರಿಚಯಿಸುತ್ತಿರುವುದಕ್ಕೆ ನಮಗೆ ಸಂತಸವೆನಿಸುತ್ತಿದೆ ಎಂದು ತಿಳಿಸಿದರು.
ಇನ್ವೆಸ್ಟ್‍ಮೆಂಟ್, ಈಕ್ವಿಟೀಸ್‍ನ ಮುಖ್ಯಸ್ಥ ನಿಮೇಶ್ ಚಂದನ್ ಅವರು ಮಾತನಾಡಿ, “ಬಹುತೇಕ ಸಂದರ್ಭಗಳಲ್ಲಿ ನಾನು ಹೂಡಿಕೆದಾರರೊಂದಿಗೆ ಕಡಿಮೆ ಪ್ರೈಸ್-ಟು-ಬುಕ್ ಅಥವಾ ಪ್ರೈಸ್-ಟು-ಅರ್ನಿಂಗ್ ಅನುಪಾತಗಳೊಂದಿಗೆ ಕಂಪನಿಯನ್ನು ಖರೀದಿಸುವುದಾಗಿ ಹೇಳುತ್ತಾರೆ. ಅಥವಾ ಅವರು ಉತ್ತಮ ಲಾಭಾಂಶದ ಬಗ್ಗೆ ಚಿಂತನೆ ನಡೆಸುತ್ತಾರೆ. ಇವು ಕಂಪನಿಯ ಸಾಪೇಕ್ಷ ಮೌಲ್ಯವನ್ನು ನಿರ್ಣಯಿಸುವ ಮಾರ್ಗಗಳಾಗಿದ್ದರೂ, ಮೌಲ್ಯಯುತವಾದ ಹೂಡಿಕೆಯು ಈ ನಿಯತಾಂಕಗಳಲ್ಲಿ ಅಗ್ಗದ ಕಂಪನಿಗಳನ್ನು ಖರೀದಿಸಲು ಇಚ್ಛಿಸುವುದಿಲ್ಲ. ಮೌಲ್ಯಯುತವಾದ ಹೂಡಿಕೆಯು ಒಂದು ವಿಶಾಲವಾದ ತತ್ತ್ವ ಶಾಸ್ತ್ರವಾಗಿದ್ದು, ಅದು ಕಂಪನಿಯನ್ನು ತನ್ನ ಆಂತರಿಕ ಮೌಲ್ಯಕ್ಕಿಂತ ಕಡಿಮೆ ಬೆಲೆಗೆ ಖರೀದಿಸುವುದನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು.
ಕೆನರಾ ರೊಬೆಕೊ ವ್ಯಾಲ್ಯೂ ಫಂಡ್ ಎನ್‍ಎಫ್‍ಒ ಆಗಸ್ಟ್ 13, 2021 ಕ್ಕೆ ಓಪನ್ ಆಗಲಿದ್ದು, ಆಗಸ್ಟ್ 27, 2021 ಕ್ಕೆ ಅಂತ್ಯಗೊಳ್ಳಲಿದೆ. ಈ ಹೊಸ ಯೋಜನೆಯು ಹಾಲಿ ಇರುವ ಹೂಡಿಕೆಗೆ ಸೆಪ್ಟಂಬರ್ 6, 2021 ಕ್ಕೆ ಮತ್ತೆ ಆರಂಭವಾಗಲಿದೆ.
ಈ ಎನ್‍ಎಫ್‍ಒದಲ್ಲಿ ಹೂಡಿಕೆಯ ಕನಿಷ್ಠ ಹಣ 5000 ರೂಪಾಯಿಗಳಾಗಿದ್ದು, ನಂತರದಲ್ಲಿ 1 ರೂಪಾಯಿಯಂತೆ ಸೇರ್ಪಡೆಗೊಳ್ಳಲಿದೆ. ಮಾಸಿಕ ಎಸ್‍ಐಪಿ 1,000 ರೂಪಾಯಿಗಳಾಗಿದೆ.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');