೭೫ ನೇ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆ

0
🌐 Belgaum News :
ಅಥಣಿ: 75 ನೇಯ ಸ್ವಾತಂತ್ರೋತ್ಸವದ ಪೂರ್ವಭಾವಿ ಸಭೆಯನ್ನು ಅಥಣಿ ತಹಶಿಲ್ದಾರ ಕಚೇರಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವಿವಿಧ ಸಮಾಜ ಮುಖಂಡರು ಮತ್ತು ಸಂಘಸಂಸ್ಥೆಗಳ ಸದಸ್ಯರಿಂದ ಸಲಹೆ ಸೂಚನೆಗಳಿಗೆ ಮುಕ್ತ ಅವಕಾಶವನ್ನು ಒದಗಿಸಿ ಕೊಡಲಾಗಿತ್ತು ಈ ವೇಳೆ ಮಾತನಾಡಿದ ಡಾಕ್ಟರ್ ಅನೀಲ ಸೌದಾಗರ ಕೋವಿಡ್ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲು ನಮ್ಮ ತಕರಾರು ಇಲ್ಲ ಸಾರ್ವಜನಿಕ ಹಿತಾಸಕ್ತಿಗಾಗಿ ಅಧಿಕಾರಿಗಳ ನಮ್ಮ ಸಮ್ಮತಿ ಇದೆ ಆದರೆ ಪಟ್ಟಣದ ಎಲ್ಲ ಜನರ ಆಶಯದಂತೆ ಸ್ವಾತಂತ್ರ್ಯ ದಿನಾಚರಣೆ ಆಚರಿಸುವಂತಾಗಬೇಕು.
ಪಟ್ಟಣದ ಎಲ್ಲ ಪುತ್ಥಳಿಗಳ ವೃತ್ತಗಳಲ್ಲಿ ಸ್ವಚ್ಚತಾ ಕಾರ್ಯ ಹಮ್ಮಿಕೊಳ್ಳುವ ಮೂಲಕ ಮಾಲಾರ್ಪಣೆ ಮಾಡಿ ಗೌರವಿಸಬೇಕು ಎಂದರು.ಈ ವೇಳೆ ಮಾತನಾಡಿ ಪ್ರಕಾಶ ಅಂಬೇಡ್ಕರ್ ಬ್ರಿಗೇಡ್ ನ ಮಹಂತೇಶ್ ಬಾಡಗಿ ಸಂವಿಧಾನ ಶಿಲ್ಪಿ ಭಾರತರತ್ನ ಡಾಕ್ಟರ್ ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರ ಇಡುವ ಮೂಲಕ ಗೌರವಿಸಬೇಕು ಯಾವುದೇ ರೀತಿಯ ನಿರ್ಲಕ್ಷ್ಯ ಸಲ್ಲದು ಎಂದರಲ್ಲದೆ ಸಹಕಾರಿ ಸಂಘಗಳು ಮತ್ತು ಶಾಲೆಗಳು ಹಾಗೂ ಸ್ವಸಹಾಯ ಸಂಘಗಳು ಧ್ವಜಾರೋಹಣ ಕಾರ್ಯಕ್ರಮ ನಿಗದಿತ ಸಮಯಕ್ಕೆ ಶಿಸ್ತುಬದ್ದವಾಗಿ ಮಾಡಬೇಕು ಎಂದರು.
ಈ ವೇಳೆ ಮಾತನಾಡಿದ ಅಥಣಿ ಪಿ ಎಸ್ ಐ ಕುಮಾರ್ ಹಾಡಕಾರ ತಾಲೂಕು ಆಡಳಿತದ ಜೊತೆಗೆ ಅಗತ್ಯ ಇರುವ ಎಲ್ಲ ಸಹಾಯ ಸಹಕಾರವನ್ನು ಪೋಲಿಸ್ ಇಲಾಖೆಯಿಂದ ಮಾಡಲಾಗುತ್ತದೆ.ಸಾಕಷ್ಟು ಕಡೆ ಧ್ವಜಾರೋಹಣ ವೇಳೆ ಅಚಾತುರ್ಯ ಸಂಭವಿಸುವ ಸಾಧ್ಯತೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಧ್ವಜಾರೋಹಣ ಮಾಡಬೇಕು ಅಲ್ಲದೆ ಕೊವಿಡ್  ಸಮಯದಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದರು.
ಈ ವೇಳೆ ಮಾತನಾಡಿದ ಉಪತಹಶಿಲ್ದಾರ ಮಹದೇವ ಬಿರಾದಾರ ಕಳೆದ ಎರಡು ವರ್ಷಗಳಿಂದ ಕೊರೊನಾ ಮಹಾಮಾರಿಯ ಕಾರಣದಿಂದಾಗಿ ಗಣರಾಜ್ಯೋತ್ಸವ,ಸ್ವಾತಂತ್ರ್ಯ ದಿನಚಾರಣೆ,ಹಬ್ಬ ಹರಿದಿನಗಳನ್ನು ಸರಳವಾಗಿ ಆಚರಿಸುವ ಅನಿವಾರ್ಯತೆ ಎದುರಾಗಿದ್ದು ಸರ್ಕಾರದ ಸುತ್ತೋಲೆಯಂತೆ ಜನಹಿತಕ್ಕಾಗಿ ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಸಿಲು ನಿರ್ಧರಿಸಲಾಗಿದೆ ಆದ್ದರಿಂದ ತಾಲೂಕಿನ ಜನರು ಸಹಕರಿಸುವಂತೆ ಮನವಿ ಮಾಡಿದರು
ಈ ವೇಳೆ ಅಧಿಕಾರಿಗಳಾದ ಅಥಣಿ ಪಿಎಸ್ಐ ಕುಮಾರ ಹಾಡಕರ, ಪ್ರವೀಣ ಪಾಟೀಲ, ಮಹೇಶ ಪತ್ರಿ, ರವಿಂದ್ರ ಹಾದಿಮನಿ,  ಜಯಶ್ರೀ ಹೀರೇಮಠ, ಶೀತಲ್ ಹೊಂಗಲ್,ಶ್ವೇತಾ ಹಾಡಕಾರ,
ವೆಂಕಟೇಶ ಕುಲಕರ್ಣಿ,ಮೃತ್ಯುಂಜಯ ಮಾಳಿ, ಮುಖಂಡರಾದ ಅನೀಲ ಸೌದಾಗರ ಮಹಂತೇಶ ಬಾಡಗಿ,ಕಲ್ಲೆಶ ಮಡ್ಡಿ, ಮಂಜು ಹೋಳಿಕಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');