ಎಬಿವಿಪಿ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ನೆರೆ ಸಂತ್ರಸ್ತರಿಗೆ ಉಚಿತ ರೇಶನ್ ಕಿಟ್ ವಿತರಣೆ

0
🌐 Belgaum News :

ಕಾಗವಾಡ: ಶ್ರೀ ರಾಮಕೃಷ್ಣ ಸೇವಾಶ್ರಮ ಪಾವಗಡ ಮತ್ತು ಇನ್ಫೋಸಿಸ್ ಫೌಂಡೇಶನ್ ಬೆಂಗಳೂರು ಮತ್ತು ಎಬಿವಿಪಿ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ನೆರೆ ಸಂತ್ರಸ್ತರಿಗೆ ಉಚಿತ ರೇಶನ್ ಕಿಟ್ ವಿತರಣೆ ಅಭಿಯಾನ ಕಾರ್ಯಕ್ರಮ ಕಾಗವಾಡ ತಾಲೂಕಿನ ನೆರೆ ಪೀಡಿತ ಗ್ರಾಮಗಳಲ್ಲಿ ಜರುಗಿತು.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಗ್ರಾಮಗಳಾದ ಮಂಗಾವತಿ, ಜುಗುಳ್ ಶಹಾಪುರ ಸೇರಿದಂತೆ ರಾಯಬಾಗ ತಾಲೂಕಿನ ಬಾವನ ಸೌದತ್ತಿ, ದಿಗ್ಗೆವಾಡಿ, ಚಿಂಚಲಿ ಗ್ರಾಮಗಳಲ್ಲಿ 3000 ರೇಷನ್ ಕಿಟ್‍ಗಳನ್ನು & ದನದ ಮೇವನ್ನು 1 ತಿಂಗಳುಗಳವರೆಗೆ ಆಗುವಷ್ಟು 10000 ಜನರಿಗೆ ಆಗುವಷ್ಟು ಕೋವಿಡ್ ಔಷಧಿ & ಸಾನಿಟೈಜರ್ ಗಳನ್ನು ಉಚಿತವಾಗಿ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಶ್ರೀಮದ್ ಸ್ವಾಮಿ ಜಪಾನಂದಜೀ, (ಅಧ್ಯಕ್ಷರು ಶ್ರೀ ರಾಮಕೃಷ್ಣ ಸೇವಾಶ್ರಮ ಪಾವಗಡ, ತುಮಕೂರ), ಶ್ರೀ ಬಿ ಮಹೇಶ್ ಕುಮಾರ್ ಪ್ರಮುಖರು ಸಮರ್ಪಣ ಇನ್ಫೋಸಿಸ್ ಫೌಂಡೇಶನ್ ಮತ್ತು ವಿವೇಕ್ ಬ್ರಿಗೇಡ್ ಬೆಂಗಳೂರು, ಶ್ರೀ ಧುಳುಗೌಡ ಪಾಟೀಲ್ ಯುವ ಮುಖಂಡರು, ಶ್ರೀ ತಾತ್ಯಾಸಾಹೇಬ್ ಕಾಟೆ, ಶ್ರೀ ರಾಮು ಕಾಟೆ, ಅನಿಲ್ ಹಂಜೆ, ಬಿ ನ್ಯಾಮಗೌಡರ್,

ಡಾ.ಮಹಾಂತೇಶ್ ಅಣ್ಣಸಾಹೇಬ್ ಲೋಟೇ ಎಬಿವಿಪಿ ಮುಖಂಡರು, ಅಮೃತ ಕುಲಕರ್ಣಿ, ( ಯುವ ಮುಖಂಡರು) ಪ್ರಸಾದ್ ಎಂ ಎಚ್ ಎಲ್ ವಿ ಅರಮನೆ ಸರ್, ಸುಮಿತ್, ಬಾಬಾಸಾಹೇಬ್, ಗುರುಪ್ರಸಾದ್, ವಿನೋದ್, ಸೋಮೇಶ್, ಯುವ ಮುಖಂಡರು ಯೋಗೇಶ ಕುಂಬಾರ, ಅನೀಲ ನಾವಲಗೇರ, ಸಚೀನ, ಸೂರಜ, ಸಂದೀಪ ಪಾಟೀಲ, ಪಂಚಾಯತ ಪ್ರತಿನಿಧಿಗಳು, ಗ್ರಾಮದ ಎಲ್ಲ ಹಿರಿಯರು ಉಪಸ್ಥಿತರಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');