ಖಾಸಗೀಕರಣ ವಿರೋಧಿಸಿ, ತಹಶೀಲ್ದಾರರಿಗೆ ಮನವಿ

0
🌐 Belgaum News :

ಶೇಡಬಾಳ : ಅಗಸ್ಟ್ 9 ರ ಐತಿಹಾಸಿಕ ‘ಕ್ವಿಟ್ ಇಂಡಿಯಾ’ ಚಳುವಳಿಯ ನೆನಪಿನಲ್ಲಿ ರೈತ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯಲು, ಕಾರ್ಮಿಕ ಕಾನೂನುಗಳನ್ನು ತಿದ್ದು ಪಡೆ ವಿರೋಧಿ, ಖಾಸಗೀಕರಣ ವಿರೋಧಿಸಿ, ಕಾರ್ಮಿಕರಿಗೆ ಕನಿಷ್ಟ ವೇತನ, ಸಾಮಾಜಿಕ ಸುರಕ್ಷೆ, ಮೊದಲಾದ ಬೇಡಿಕೆಗಳ ಕುರಿತು ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೀತಿಗಳನ್ನು ವಿರೋಧಿಸಿ ಕಾಗವಾಡ ತಹಶೀಲ್ದಾರರಿಗೆ ಮನವಿ ಪತ್ರ ಅರ್ಪಿಸಿ ಪ್ರತಿಭಟನೆ ಮಾಡಲಾಯಿತು.

ಸೋಮವಾರ ದಿ. 9 ರಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಕಾಗವಾಡ ಘಟಕ, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸಂಯುಕ್ತ ಆಶ್ರಯದಲ್ಲಿ “ಅಖಿಲ ಭಾರತ ಮುಷ್ಕರ” ಅಂಗವಾಗಿ ಜರುಗಿದ ಪ್ರತಿಭಟನಾ ರ್ಯಾಲಿಯು ಚೆನ್ನಮ್ಮ ಸರ್ಕಲ್‍ದಿಂದ ಪ್ರಾರಂಭವಾಗಿ ತಹಶೀಲ್ದಾರ ಕಚೇರಿಗೆ ಆಗಮಿಸಿ ಶಿರಸ್ತೇದಾರ ಅಶೋಕ ಎಚ್.ತಗಾರೆಯವರಿಗೆ ಮನವಿ ಪತ್ರ ಅರ್ಪಿಸಲಾಯಿತು.

ಮನವಿ ಪತ್ರ ಅರ್ಪಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಕಾಗವಾಡದ ಅಧ್ಯಕ್ಷೆ ಸುವರ್ಣಾ ಕಮತಗಿ ಮಾತನಾಡಿ
1) ಕೇಂದ್ರ ಸರ್ಕಾರ ಕಾರ್ಮಿಕ ವಿರೋಧ ಸಂಹಿತೆಗಳು ಹಾಗೂ ಜನ ವಿರೋಧಿ ಕೃಷಿ ಕಾನೂನುಗಳನ್ನು ಮತ್ತು ವಿದ್ಯುತ್ ತಿದ್ದುಪಡಿ ಮಸೂದೆಯನ್ನು ರದ್ದುಪಡಿಸಬೇಕು.

2) ರೈತರ ಎಲ್ಲ ಬೆಳೆಗಳಿಗೂ ಖಾತರಿ ಖರೀದಿಯೊಂದಿಗೆ ಸಮಗ್ರ ಉತ್ಪಾದನಾ ವೆಚ್ಚ ಮತ್ತು ಶೇ. 50 ಪ್ರಕಾರ ನಿಗದಿ ಪಡಿಸಿದ ಕನಿಷ್ಠ ಬೆಂಬಲ ಬೆಲೆ ದೊರೆಯುವಂತೆ ಕಾಯ್ದೆ ಮಾಡಬೇಕು. ಋಣ ಮುಕ್ತ ಕಾಯ್ದೆಯನ್ನು ಜಾರಿಗೆ ಗೊಳಿಸಬೇಕು.
3) ಭೂ ಸುಧಾರಣೆ ಕಾಯ್ದೆಗೆ ಮಾಡಿರುವ ತಿದ್ದುಪಡೆಯನ್ನು ಹಿಂಪಡೆಯಬೇಕು. ಸೇರಿದಂತೆ ಹಲವಾರು ಬೇಡಿಕೆಗಳ ಮನವಿ ಪತ್ರವನ್ನು ಅರ್ಪಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದವರು ಈಡೇರಿಸುವಂತೆ ಮನವಿ ಮಾಡಿಕೊಂಡರು.

ಈ ಸಮಯದಲ್ಲಿ ಕಾಗವಾಡ ತಾಲೂಕಿನ ಅಂಗನವಾಡಿ ಅಧ್ಯಕ್ಷೆ ಸುವರ್ಣಾ ಕಮತಗಿ, ಕಾರ್ಯದರ್ಶಿ ಸವಿತಾ ಹಿರೇಮಠ, ರೂಪಾ ಸಲಗರ, ಸೇವಂತಾ ಕಾಂಬಳೆ, ಅಂಜನಾ ಢಾಲೆ, ಸಾವಿತ್ರಿ ಕಾಂಬಳೆ, ಸುಮನ ಪಾಟೀಲ, ಶರಾವತಿ ಬಿಢೆ, ಸುಮಿತ್ರಾ ಮುಗುಳಿ, ಛಾಯಾ ಕಲೂತಿ, ಲತಾ ಕಟಾರೆ, ಬಿಸಿಯೂಟದ ಸೀಮಾ ಬುರ್ಕೆ, ಸವಿತಾ ಬಾಲಗೊಳ, ಗ್ರಾಮ ಪಂಚಾಯತಿಯ ಅಸ್ಲಂ, ಪದಮಣ್ಣ ಕುಂಬಾರ, ಮುರಗೇಶ ಸೇರಿದಂತೆ ಅನೇಕರು ಇದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');