ವಿಜ್ಷಾನ ವಿಭಾಗದ ಜಂಟಿ ಆಶ್ರಯದಲ್ಲಿ ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಯಿತು.

0
🌐 Belgaum News :

ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯ ಅಂಗವಾಗಿ ರಾಣಿಚನ್ನಮ್ಮ ವಿಶ್ವವಿದ್ಯಾಲಯದಲ್ಲಿ , ಗ್ರಂಥಾಲಯ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಷಾನ ವಿಭಾಗದ ಜಂಟಿ ಆಶ್ರಯದಲ್ಲಿ ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಯಿತು.

ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರು ಪ್ರೊ. ಪದ್ಮಶಾಲಿ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಗ್ರಂಥಪಾಲಕರ ದಿನಾಚರಣೆಯ ಶುಭಹಾರೈಸುತ್ತಾ, ಗ್ರಂಥಾಲಯದಲ್ಲಿರುವ ಸಂಪನ್ಮೂಲಗಳಾದ ದಿನಪತ್ರಿಕೆಗಳು, ಪುಸ್ತಕಗಳು ಆಕರ ಗ್ರಂಥಗಳಿಂದ ಹಿಡಿದು ಲಭ್ಯವಿರುವ ಎಲ್ಲ ಇ-ರಿಸೋರ್ಸಗಳ ಸದುಪಯೋಗ ಪಡೆಯುವಂತೆ ಪ್ರಾಧ್ಯಾಪಕ ಮಿತ್ರರಿಗೆ ಹಾಗೂ ವಿದ್ಯಾರ್ಥಿ ವೃಂದದವರಿಗೆ ಕರೆನೀಡಿದರು.

ಗ್ರಂಥಪಾಲಕರಾದ ಡಾ.ವಿನಾಯಕ ಬಂಕಾಪೂರ ಇವರು ಗ್ರಂಥಪಾಲಕರ ದಿನಾಚರಣೆಯ ಕುರಿತು ಸ್ವಾಗತ ಕೋರುತ್ತಾ, ಪ್ರಾಸ್ತಾವಿಕವಾಗಿ ಡಾ.ರಂಗನಾಥನ್ ಅವರ 129 ನೇ ಜನ್ಮ ದಿನಾಚರಣೆ ಕುರಿತು, ಅವರ ಕೊಡುಗೆಗಳು ಹಾಗೂ 5 Laws of Library Science ಬಗ್ಗೆ ಮತ್ತು ಇವತ್ತಿನ ದಿನಗಳಲ್ಲಿ ಗ್ರಂಥಾಲಯ ಕಾರ್ಯಗಳು ಡಿಜಿಟಲ್ ಸೇವೆಗಳ ಮುಖಾಂತರ ಕೊಡಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಣಕಾಸು ಸಚಿವರಾದ ಡಾ.ಡಿ..ಎನ್. ಪಾಟೀಲ, ಪ್ರೋ.ಮಾರಣ್ಣ, ಡಾ.ಕಿರಣಕುಮಾರ.ಪಿ, ಡಾ.ರಮೇಶ ಕುರಿ, ಡಾ.ಮಹಾಂತೇಶ ಚಲವಾದಿ, ಪ್ರೊ.ಸಂತೋಷ ಪಾಟೀಲ್ಡಾ.ಕಿರಣ ಪಿ.ಸವಣೂರ, ಡಾ. ಬಸವರಾಜ ಆರ್ ಬಗಾಡೆ ಸೇರಿದಂತೆ ಅನೇಕ ಪ್ರಾಧ್ಯಾಪಕರು ವಿದ್ಯಾರ್ಥಿಗಳು ಹಾಗೂ ಗ್ರಂಥಾಲಯದ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕೊನೆಯಲ್ಲಿ ಸಹಾಯಕ ಗ್ರಂಥಪಾಲಕರಾದ ಡಾ.ಭವಾನಿ ಶಂಕರ ನಾಯ್ಕ ಇವರ ವಂದನೆಗಳೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');