ಸಲ್ಮಾನ್ ಖಾನರನ್ನು ಭೇಟಿಯಾದ ಮೀರಾಬಾಯಿ ಚಾನು; ಸಲ್ಮಾನ್ ಕಾಲೆಳೆದ ನೆಟ್ಟಿಗರು

0
🌐 Belgaum News :

ಮುಂಬೈ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಕುಸ್ತಿಪಟು ಮೀರಾಬಾಯಿ ಚಾನು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಿದ್ದಾರೆ.

ಮೀರಾಬಾಯಿ ಭೇಟಿಯಾದ ವಿಚಾರವನ್ನು ಸಲ್ಮಾನ್ ಖಾನ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಮೀರಾಬಾಯಿ ಜತೆ ತೆಗೆಸಿಕೊಂಡ ಫೋಟೊವನ್ನು ಕೂಡ ಪೋಸ್ಟ್ ಮಾಡಿದ್ದಾರೆ.

ಈ ಟ್ವೀಟ್ ಅನ್ನು ಮೀರಾಬಾಯಿ ರಿಟ್ವೀಟ್ ಮಾಡಿದ್ದು, ನಾನು ನಿಮ್ಮ ದೊಡ್ಡ ಅಭಿಮಾನಿಯಾಗಿದ್ದೇನೆ. ನಿಮ್ಮನ್ನು ಭೇಟಿಯಾಗಬೇಕೆಂಬ ಕನಸು ಕೊನೆಗೂ ಈಡೇರಿದೆ ಎಂದಿದ್ದಾರೆ.

ಸಲ್ಮಾನ್ ಕಾಲೆಳೆದಿರುವ ನೆಟ್ಟಿಗರು:

ಸಲ್ಮಾನ್ ಅವರನ್ನು ಭೇಟಿಯಾದಾಗ ಮೀರಾಬಾಯಿ ಚಾನು ಉಡುಗೊರೆ ರೂಪದಲ್ಲಿ ಶಾಲೊಂದನ್ನು ನೀಡಿದ್ದಾರೆ. ಅದರಲ್ಲಿನ ಸೂಕ್ಷ್ಮ ಚಿತ್ರಗಳು ನೆಟ್ಟಿಗರ ಗಮನ ಸೆಳೆದಿದ್ದು, ಅದನ್ನು ಕೃಷ್ಣ ಮೃಗವೆಂದು ಭಾವಿಸಿ ಸಲ್ಮಾನ್ ಕಾಲೆಳೆಯುತ್ತಿದ್ದಾರೆ. ಸಲ್ಮಾನ್ ಧರಿಸಿರುವ ಶಾಲಿನ ತುದಿಯಲ್ಲಿ ಏನಿದೆ ನೋಡಿ ಎಂದು ಕೆಲವರು ಹೇಳಿದ್ದರೆ, ಮತ್ತೆ ಕೆಲವರು ಸಲ್ಮಾನ್ ಅವರನ್ನು ಪ್ರಾಂಕ್ ಮಾಡಲಾಗಿದೆ ಎಂದು ಕಾಲೆಳೆದಿದ್ದಾರೆ.

ಸಲ್ಮಾನ್ ಖಾನ್ ಈ ಮೊದಲು ಕೃಷ್ಣ ಮೃಗದ ಭೇಟೆಯಾಡಿ ಸಿಕ್ಕಿಬಿದ್ದಿದ್ದರು. ಅದಕ್ಕಾಗಿ ನೆಟ್ಟಿಗರು ಅವರ ಕಾಲೆಳೆಯುತ್ತಿದ್ದಾರೆ. ಆದರೆ ವಾಸ್ತವವಾಗಿ ಸಲ್ಮಾನ್ ಧರಿಸಿರುವುದು ಕೃಷ್ಣ ಮೃಗದ ಚಿತ್ರವಿರುವ ಶಾಲ್ ಅಲ್ಲ.

ಅದು ಮೀರಾಬಾಯಿ ಉಡುಗೊರೆ ನೀಡಿರುವ ಮಣಿಪುರದಲ್ಲಿ ವಿಶೇಷವಾಗಿ ಕಂಡುಬರುವ ಸಾಂಗೈ ಜಿಂಕೆಯ ಚಿತ್ರ. ಆದರೆ ನೆಟ್ಟಿಗರು ಅದನ್ನು ತಪ್ಪಾಗಿ ಗ್ರಹಿಸಿಕೊಂಡು ಸಲ್ಮಾನ್ ಕಾಲೆಳೆಯುತ್ತಿದ್ದಾರೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');