ಸಿಟಿ ರವಿಗೆ ಇತಿಹಾಸ ಗೊತ್ತಿಲ್ಲ; ಯಾರ ಬಗ್ಗೆಯೂ ಲಘುವಾಗಿ ಮಾತನಾಡಬಾರದು: ಸಿದ್ದರಾಮಯ್ಯ ಕಿಡಿ

0
🌐 Belgaum News :

ಬೆಂಗಳೂರು: ಸಿಟಿ ರವಿಗೆ ಇತಿಹಾಸ ಗೊತ್ತಿಲ್ಲ. ಗುಜರಾತ್ ನ ಸ್ಟೇಡಿಯಂ ಗೆ ನರೇಂದ್ರ ಮೋದಿಯವರ ಹೆಸರು ಯಾಕೆ ಇಟ್ಟಿದ್ದಾರೆ? ಅದಕ್ಕೆ ಏನಂತ ಕರಿತಾರೆ  ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಸಿಟಿ ರವಿಯವರು ಕಾಂಗ್ರೆಸ್ ನವರು ನೆಹರೂ ಹುಕ್ಕಾ ಬಾರ್ ತೆರೆಯಲಿ ಎಂದು ಹೇಳಿದ್ದಕ್ಕೆ ಸಿದ್ದರಾಮಯ್ಯ ಈ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದರು.

ದೆಹಲಿಯಲ್ಲಿ ಅರುಣ್ ಜೇಟ್ಲಿ ಹೆಸರ್ಯಾಕೆ ಇಟ್ಟಿದ್ದಾರೆ? ಯಶವಂತಪುರದತ್ತಿರ ಧೀನ ದಯಾಳ ಉಪಾಧ್ಯಾಯ ಮೇಲ್ಸೇತುವೆಗೆ ಹೆಸರಿಟ್ಟಿದ್ದಾರೆ ಯಾಕೆ ? ವಾಜಪೇಯಿ ಹೆಸರು, ಯಲಹಂಕದಲ್ಲಿ ಸಾವರ್ಕರ್ ಹೆಸರು ಯಾಕೆ ಇಟ್ಟಿದ್ದಾರೆ ? ಅವಕ್ಕೆಲ್ಲಾ ಬೇಕಾದರೆ ಹುಕ್ಕಾ ಬಾರ್ ಅಂತ ಹೆಸರಿಡಲಿ . ಆದರೆ ನಾನು ಅವರೆಲ್ಲರ ಬಗ್ಗೆ ಲಘುವಾಗಿ ಮಾತನಾಡಲ್ಲ’ ಎಂದರು.

ನೆಹರೂರವರು ಈ ದೇಶಕ್ಕೆ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದಂತಹವರು. ಅವರ ಇಡೀ ಕುಟುಂಬ ಬಲಿದಾನ ಮಾಡಿದೆ. ರಾಜೀವ್ ಗಾಂಧಿ ಯಾಕೆ ಸತ್ತರು? ಇಂದಿರಾ ಗಾಂಧಿ ಯಾಕೆ ಸತ್ತರು ಎಂದು ಸಿಟಿ ರವಿ ತಿಳಿಯಲಿ. ಸಿಟಿ ರವಿಗೆ ಇತಿಹಾಸ ಗೊತ್ತಿಲ್ಲ  ಎಂದು ಸಿದ್ದರಾಮಯ್ಯ ಹೇಳಿದರು.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');