ಅಜೊಲ್ಲಾ ಬೆಳೆಯನ್ನು ಭತ್ತದಲ್ಲಿ ಬೆಳಯುವುದರಿಂದ ಹಲವು ಲಾಭ: ಎಚ್.ಡಿ.ಕೋಳೆಕರ

0
🌐 Belgaum News :

ಬೆಳಗಾವಿ,: ಅಜೊಲ್ಲಾ ಒಂದು ಫರ್ನ ಜಾತಿಗೆ ಸೇರಿದ ಸಸ್ಯವಿದ್ದು ಇದು ವಾತಾವರಣದಲ್ಲಿಯ ಸಾರಜನಕ ಸ್ಧಿರಿಕರಿಸುತ್ತದೆ. ಹಸಿರೆಲೆ ಗೊಬ್ಬರವಾಗಿ ಉಪಯೋಗವಾಗುತ್ತದೆ ಹಾಗೂ ಜಾನುವಾರುಗಳಿಗೆ ಒಳ್ಳೆಯ ಪೌಷ್ಟಿಕ ಆಹಾರವಾಗಿ ಉಪಯೋಗಿಸ ಬಹುದೆಂದು ಬೆಳಗಾವಿ ವಿಭಾಗದ ಉಪ ಕೃಷಿ ನಿರ್ದೇಶಕರಾದ ಎಚ್.ಡಿ.ಕೋಳೆಕರ ತಿಳಿಸಿದರು.

ಬೆಳಗಾವಿ ತಾಲೂಕಿನ ಕಡೋಲಿ, ಬಾದರವಾಡಿ ಹಾಗೂ ಮಜಗಾಂವ ಗ್ರಾಮಗಳಲ್ಲಿ ಆತ್ಮಾ ಯೋಜನೆಯಡಿ ಆಗಸ್ಟ್ 12 ರಂದು ಖಾದರವಾಡಿ ಗ್ರಾಮದ ರೈತರ ಗದ್ದೆಗಳಲ್ಲಿ ಅಜೊಲ್ಲಾ ಸಸಿಗಳನ್ನು ಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರೈತರಿಗೆ ಅಜೊಲ್ಲಾ ಕಲ್ಚರ ವಿತರಿಸಿ, ಭತ್ತದ ಬೆಳೆಯಲ್ಲಿ ಅಜೊಲ್ಲಾ ಬಳಕೆ ಒಂದು ಉತ್ತಮ ಬೇಸಾಯ ಪದ್ಧತಿಯಾಗಿದ್ದು, ಈ ತಾಂತ್ರಿಕತೆಯನ್ನು ರೈತರಲ್ಲಿ ಜನಪ್ರಿಯಗೊಳಿಸಲು ಬೆಳಗಾವಿ ತಾಲೂಕಿನ ಕಡೋಲಿ, ಬಾದರವಾಡಿ ಹಾಗೂ ಮಜಗಾಂವ ಗ್ರಾಮಗಳಲ್ಲಿ ಕೃಷಿ ಇಲಾಖೆಯ ಆತ್ಮಾ ಯೋಜನೆಯಡಿ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಅಜೊಲ್ಲಾ ಬಳಕೆಯ ಪ್ರಾಮುಖ್ಯತೆಯನ್ನು ರೈತರಿಗೆ ಮನವರಿಕೆ ಮಾಡಲು ಈ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಂಡಿದ್ದು ಪ್ರಾತ್ಯಕ್ಷಿಕೆಯ ಯಶಸ್ಸನ್ನು ಆಧಾರಿಸಿ ಮುಂದಿನ ದಿನಗಳಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಜೊಲ್ಲಾ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗುವುದು ಎಂದು ಬೆಳಗಾವಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಆರ್.ಬಿ.ನಾಯ್ಕರ ತಿಳಿಸಿದರು.

ಕಾರ್ಯಕ್ರಮದಲ್ಲಿ ಉಚಗಾಂವ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅರುಣ ಪಾಟೀಲ, ಸಹಾಯಕ ಕೃಷಿ ಅಧಿಕಾರಿ. ಎಸ್.ಟಿ.ಕಾಂಬಳೆ ಆತ್ಮಾ ಯೋಜನೆಯ ಉಪಯೋಜನಾ ಅಧಿಕಾರಿ ಮಠದ, ಬಿ.ಟಿ.ಎಮ್, ರಾಜಶೇಖರ ಭಟ್ಟ ಎಟಿಮ್, ಮಂಜುನಾಥ ಹಕ್ಕಲದವರ ಗ್ರಾಮ ಪಂಚಾಯತ ಸದಸ್ಯರು ಹಾಗೂ ರೈತರು ಉಪಸ್ಧಿತರಿದ್ದರು ಎಂದು ಬೆಳಗಾವಿ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');