ನನ್ನ ವಿರೋಧ ಹಾಕೊಂಡ್ರೆ ಯಾರು ಅಧಿಕಾರದಲ್ಲಿ ಇರಲ್ಲ: ಯತ್ನಾಳ್ ಕಿಡಿ​​

0
🌐 Belgaum News :

ಹುಬ್ಬಳ್ಳಿ:  ಮಂತ್ರಿ ಸ್ಥಾನಕ್ಕಾಗಿ ಲಾಬಿ ನಡೆಸುವುದಿಲ್ಲ. ನಾನು ವಿರೋಧಿ ಅಲ್ಲ, ನನ್ನ ವಿರೋಧ ಹಾಕೊಂಡ್ರೆ ಯಾರು ಅಧಿಕಾರದಲ್ಲಿ ಇರಲ್ಲ ಎಂದು  ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್​​​ವೈ ವಿರುದ್ಧ ನಾನು ಮಾತನಾಡಿದಕ್ಕೆ ಮಂತ್ರಿ ಸ್ಥಾನ ಸಿಗಲಿಲ್ಲ ಎನ್ನಬೇಡಿ. ನನ್ನ ವಿರೋಧ ಕಟ್ಟಿಕೊಂಡಿದ್ದಕ್ಕೆ ಬಿಎಸ್​ವೈ ಸಿಎಂ ಸ್ಥಾನ ಕಳೆದುಕೊಂಡಿದ್ದಾರೆ.   ನಾನು ಜೀರೊದಿಂದ ಹೀರೋ ಆದವನು. ಮೊದಲು ಜೀರೊ ಆಗಿದ್ದೆ, ಈಗ ಮತ್ತೆ ಜನರು ನನ್ನನ್ನು ಹೀರೋ ಮಾಡಿದ್ದಾರೆ. ‌

ಮುಖ್ಯಮಂತ್ರಿ ಬದಲಾವಣೆ ಆಗಬೇಕೆಂದು ನಮ್ಮ ಬೇಡಿಕೆಯಾಗಿತ್ತು. ಹೈಕಮಾಂಡ್​​ ಈಗಾಗಲೇ ಬದಲಾವಣೆ ಮಾಡಿದೆ. ನಾವೆಲ್ಲಾ ಈಗಿನ ಮುಖ್ಯಮಂತ್ರಿಗಳಿಗೆ ಸಹಕಾರ ಕೊಡಬೇಕು ಎಂದರು.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');