ಮಾಗಡಿ ಪೊಲೀಸ್​​ ಅಧಿಕಾರಿ ಮೇಲೆಯೇ ಹಲ್ಲೆ ನಡೆಸಿದ ಗ್ರಾಮಸ್ಥರು

0
🌐 Belgaum News :

ರಾಮನಗರ : ಮಾಗಡಿ ಪಿಎಸ್​​ಐ ಶ್ರೀಕಾಂತ್​​ ಮೇಲೆ ಜೋಗಿಪಾಳ್ಯದ ಗ್ರಾಮಸ್ಥರು ಬುಧವಾರ ಸಂಜೆ ಹಲ್ಲೆ ಮಾಡಿರುವ ಘಟನೆ ರಾಮನಗರದಲ್ಲಿ ನಡೆದಿದೆ.

ಜೋಗಿಪಾಳ್ಯದ ಗ್ರಾಮದ ಆವರಣವೊಂದರಲ್ಲಿ ಜಲ್ಲಿ ಕ್ರಷರ್​​​ ನಡೆಯುತ್ತಿದೆ. ಇಲ್ಲಿ ನಡೆಯುತ್ತಿರುವ ಜಲ್ಲಿ ಕ್ರಷರ್​​​ ತಡೆಯಲು ಗ್ರಾಮಸ್ಥರು ಮುಂದಾಗಿದ್ದಾರೆ. ಈ ವಿಚಾರ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಪಿಎಸ್​​​ಐ ಶ್ರೀಕಾಂತ್​​​ ಮತ್ತು ಗ್ರಾಮಸ್ಥರ ನಡುವೆ ಜಗಳ ನಡೆದಿದೆ.

ಪೊಲೀಸರು ಮತ್ತು ಗ್ರಾಮಸ್ಥರ ನಡುವಿನ ಜಗಳ ಮಾತಿಗೆ ಮಾತು ಬೆಳೆದು ತಾರಕಕ್ಕೇರಿದೆ. ಈ ಸಂದರ್ಭದಲ್ಲಿ ಪಿಎಸ್​​ಐ ಶ್ರೀಕಾಂತ್​​ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಮಾಗಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');