ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ: ಆಯುಧ ಠೇವಣಿ ಮಾಡಬೇಕು

0
🌐 Belgaum News :

ಬೆಳಗಾವಿ,: ಬೆಳಗಾವಿ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆ 2021 ರ ನಿಮಿತ್ತ ಆಯುಧ ಅನುಜ್ಞಾ ಪತ್ರದಾರರು ಆಯುಧಗಳನ್ನು ಹತ್ತಿರದ ಪೆÇಲೀಸ್ ಠಾಣೆಯಲ್ಲಿ ಠೇವಣಿ ಮಾಡಬೇಕು ಎಂದು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಹಾಗೂ ಪೆÇೀಲಿಸ್ ಆಯುಕ್ತರಾದ ಡಾ.ಕೆ ತ್ಯಾಗರಾಜನ್ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಬೆಳಗಾವಿ ಮಹಾನಗರ ಪಾಲಿಕೆಯ ಒಟ್ಟು 58 ವಾರ್ಡುಗಳಲ್ಲಿ ಸಾರ್ವತ್ರಿಕ 2021 ರ ಚುನಾವಣೆಯು ಸೆಪ್ಟೆಂಬರ್ 3 ರಂದು ಜರುಗಲಿದ್ದು, ಚುನಾವಣೆಯು ಶಾಂತಿಯುತ ಹಾಗೂ ಮುಕ್ತವಾಗಿ ನಡೆಯುವ ದೃಷ್ಟಿಯಿಂದ ಹಾಗೂ ಚುನಾವಣಾ ಆಯೋಗದ ಉಲ್ಲೆಖಿತ-1 ರ ಆದೇಶದಲ್ಲಿ ನೀಡಿರುವ ನಿರ್ದೇಶನದ ಮೇರೆಗೆ ಚುನಾವಣೆಯ ಅವಧಿಯಲ್ಲಿ ಆಯುಧ ಕಾಯ್ದೆ-1959 ರ ಅಡಿಯಲ್ಲಿ ಆಯುಧಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.

ಆಯುಧ ಠೇವಣಿ ಮಾಡಲು ಆದೇಶ:
ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯ ಆಯುಧ ಅನುಜ್ಞಾ ಪತ್ರದಾರರು ಹೊಂದಿರುವ ಆಯುಧಗಳನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಕೂಡಲೇ ಹತ್ತಿರದ ಪೆÇಲೀಸ್ ಠಾಣೆಯಲ್ಲಿ ಠೇವಣಿ ಮಾಡಿ ಸ್ವೀಕೃತ ಪತ್ರಗಳನ್ನು ಪಡೆದುಕೊಳ್ಳುವಂತೆ ಆದೇಶಿಸಲಾಗಿದೆ.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶವು ಘೋಷಣೆಯಾದ ಒಂದು ವಾರದ ನಂತರ ಸಂಬಂಧಪಟ್ಟ ಪೆÇಲೀಸ್ ಠಾಣೆಯ ಪೆÇಲೀಸ್ ಅಧಿಕಾರಿಗಳು ಆಯುಧಗಳನ್ನು ಬಿಡುಗಡೆ ಮಾಡಿ ಅನುಜ್ಞಾ ಪತ್ರದಾರರಿಗೆ ನೀಡಲು ಸೂಚಿಸಲಾಗಿದೆ.

ಈ ಆದೇಶವು ಕರ್ತವ್ಯದ ಮೇಲೆ ಇರುವ ಪೆÇೀಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ, ಬ್ಯಾಂಕ್ ರಕ್ಷಣಾ ಸಿಬ್ಬಂದಿಗೆ ಮತ್ತು ಸರ್ಕಾರವು ಪೂರೈಸಿದ ಆಯುಧ ಹೊಂದಿರುವ ವಿವಿಧ ಇಲಾಖೆಗಳ ರಕ್ಷಣಾ ಸಿಬ್ಬಂದಿಗೆ ಅನ್ವಯಿಸುವುದಿಲ್ಲ ಎಂದು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಹಾಗೂ ಪೆÇೀಲಿಸ್ ಆಯುಕ್ತರಾದ ಡಾ.ಕೆ ತ್ಯಾಗರಾಜನ್ ತಿಳಿಸಿದ್ದಾರೆ.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');