ಬಾಲಕಿ ನಾಪತ್ತೆ

0
🌐 Belgaum News :

ಬಾಲಕಿ ನಾಪತ್ತೆ

ಬೆಳಗಾವಿ,: ವಡಗಾವಿಯ ಸಫಾರಗಲ್ಲಿ ನಿವಾಸಿಯಾದ ಕೇದಾರ ಪುಂಡಲೀಕ ಕಿತ್ತೂರ ಇವರ ಮಗಳಾದ ಗಾಯತ್ರಿ ಕಿತ್ತೂರ ಆಗಸ್ಟ್ 9 ರಂದು ಮದ್ಯಾಹ್ನ 12 ಗಂಟೆಗೆ ಮನೆಯಲ್ಲಿ ಶಾಲೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ. ಈ ಕುರಿತು ಶಹಾಪೂರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಯುವತಿಯ ಗಾಯತ್ರಿ 14 ವರ್ಷ 9 ತಿಂಗಳು, ವರ್ಷದವಳಾಗಿದ್ದು 5 ಪೂಟ ಎತ್ತರವಾಗಿದ್ದಾಳೆ, ಸದೃಢ ಮೈ, ಕೋಲು ಮುಖ, ಗೋದಿಗೆಂಪು ಮೈ ಬಣ್ಣ, ಕಪ್ಪು ಬಣ್ಣದ ಚೂಡಿದಾರ ಧರಿಸಿದ್ದು, ಕನ್ನಡ ಮರಾಠಿ ಹಾಗೂ ಹಿಂದಿ ಭಾಷೆ ಮಾತನಾಡುತ್ತಾಳೆ.
ಸದರಿ ಬಾಲಕಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಬೆಳಗಾವಿ ನಗರ ಪೆÇಲೀಸ್ ಕಂಟ್ರೋಲ್ ರೂಮ್ ಸಂಖ್ಯೆ 0831-2405233, ಶಹಾಪೂರ ಪೆÇಲೀಸ್ ಠಾಣೆಯಲ್ಲಿ ದೂರವಾಣಿ ಸಂಖ್ಯೆ: 0831-2405244 ಹಾಗೂ ಪೆÇಲೀಸ್ ಇನ್ಸ್ಪೆಕ್ಟರ್ ಮೋ ಸಂಖ್ಯೆ: 9480804046 ಗೆ ಸಂಪರ್ಕಿಸಬಹುದು ಎಂದು ಬೆಳಗಾವಿಯ ಶಹಾಪೂರ ಪೆÇಲೀಸ್ ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

10 ದಿನಗಳ ಪೇಪರ ಪೈಲ್, ಎನವಲಪ್ ಮತ್ತು ಬ್ಯಾಗ ತಯಾರಿಕೆ ಉಚಿತ ತರಬೇತಿ

ಬೆಳಗಾವಿ,: ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಸಿಬಿಆರ್‍ಸೆಟಿ) ಬೆಳಗಾವಿ ಜಿಲ್ಲೆಯ ಗ್ರಾಮೀಣ ಮಹಿಳಾ ನಿರುದ್ಯೋಗಿಗಳಿಗೆ ಅಗಸ್ಟ್ 16 ರಿಂದ 25 ರವರಗೆ 10 ದಿನಗಳ ಕಾಲ ಪೇಪರ ಪೈಲ್, ಎನವಲಪ್ ಮತ್ತು ಬ್ಯಾಗ ತಯಾರಿಕೆ ಉಚಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ಆಸಕ್ತವುಳ್ಳ ಅಭ್ಯರ್ಥಿಗಳು 18 ರಿಂದ 45 ವರ್ಷದ ವಯೋಮಿತಿ ಹೊಂದಿರಬೇಕು ಹಾಗೂ ತರಬೇತಿ ಪಡೆದ ನಂತರ ಸ್ವ ಉದ್ಯೋಗ ಕೈಗೊಳ್ಳಲು ಸಿದ್ಧರಿರಬೇಕು. ತರಬೇತಿಯ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯವನ್ನು ನೀಡಲಾಗುವದು.
ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳು ಬಿಳಿ ಹಾಳೆಯ ಮೇಲೆ ಅಥವಾ ನಮ್ಮ ಸಂಸ್ಥೆಯಲ್ಲಿ ದೊರೆಯುವ ಅರ್ಜಿ ನಮೂನೆಯಲ್ಲಿ ತಮ್ಮ ಹೆಸರು, ವಿಳಾಸ, ವಿದ್ಯಾಭ್ಯಾಸ, ಅನುಭವ ಮುಂತಾದ ಮಾಹಿತಿಗಳನ್ನು ಬರೆದು ಅರ್ಜಿಯ ಜೊತೆಗೆ ಬಿಪಿಎಲ್ ರೇಶನ್ ಕಾರ್ಡ, ಆಧಾರ ಕಾರ್ಡ, ಬ್ಯಾಂಕ ಪಾಸಬುಕ್ ಝೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ ಅಗಸ್ಟ್ 14 ರ ಒಳಗಾಗಿ ಸಂಸ್ಥೆಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಸಿಬಿ ಆರ್‍ಸೆಟಿ) ನಿರ್ದೇಶಕರು, ಪ್ಲಾಟ ನಂ. ಸಿ ಎ – 03 (ಪಾರ್ಟ) ಕಣಬರ್ಗಿ ಇಂಡಸ್ತ್ರಿಯಲ್ ಎರಿಯಾ, ಆಟೋ ನಗರ. ಬೆಳಗಾವಿ. ಅಥವಾ ದೂರವಾಣಿ ಸಂಖ್ಯೆ 9845750043, 8296792166, 8660038694, 8867388906, 0831-2440644, ಇವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದಾರೆ.////

ಡೇ ನಲ್ಮ್ ಯೋಜನೆಯಡಿ ವಿವಿಧ ಉಪಘಟಕಗಳ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಬೆಳಗಾವಿ,: 2021-22 ನೇ ಸಾಲಿನಲ್ಲಿ ವಿವಿಧ ಉಪಘಟಕಗಳ ಅಡಿ ನಿಪ್ಪಾಣಿ ನಗರಸಭೆ ವ್ಯಾಪ್ತಿಯಲ್ಲಿ ದೀನದಯಾಳ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (DAY NULM) ಯೋಜನೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನಗರ ಸ್ವಯಂ ಉದ್ಯೋಗ ಕಾರ್ಯಕ್ರಮ: ಕಿರು ಉದÀ್ಯಮ ಕೈಗೊಳ್ಳಲು ರಾಷ್ಟ್ರಿಕೃತ ಬ್ಯಾಂಕಿನಿಂದ ರೂ. 2.00 ಲಕ್ಷ ವರೆಗೆ ಸಾಲ ಪಡೆದು ಉದ್ಯೋಗ ಕೈಗೊಳ್ಳುವುದು ಹಾಗೂ ಈ ಯೊಜನೆಯಡಿ ಶೇ. 5 ರಷ್ಟು ಬಡ್ಡಿ ಸಹಾಯಧನ ನಿಡಲಾಗುವುದು.
ಸ್ವಯ ಸಹಾಯ ಗುಂಪುಗಳ ರಚನೆ: ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಬಡತನ ರೇಖೆಕಿಂತ ಕೆಳಗಿರುವ 10 ರಿಂದ 20 ಮಹಿಳೆಯರು ಗುಂಪು ರಚನೆ ಮಾಡುವುದು ಮತ್ತು ಗುಂಪು ಉದ್ಯೋಗಕ್ಕಾಗಿ ರಾಷ್ಟ್ರೀಕೃತ ಬ್ಯಾಂಕಿನಿಂದ ಸಾಲ ಪಡೆದು ಉದ್ಯಮ ಕೈಗೊಳ್ಳುವುದು ಸಾಲದ ಮೊತ್ತ ರೂ. 2.00 ಲಕ್ಷ ದಿಂದ ರೂ. 10.00 ಲಕ್ಷ ಗಳ ವರೆಗೆ ಈ ಯೊಜನೆಯಡಿ ಶೇ. 5 ರಷ್ಟು ಬಡ್ಡಿ ಸಹಾಯದನ ನೀಡಲಾಗುವುದು.
ಬೀದಿ ವ್ಯಾಪಾರಸ್ಥರ ಯೋಜನೆ: ನಗರಸಭೆ ವ್ಯಾಪ್ತಿಯಲ್ಲಿ ಇಗಾಗಲೇ Pಒ Sಗಿಂ ನಿಧಿಯಡಿ ಬೀದಿ ವ್ಯಾಪಾರಸ್ಥರ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ ಬೀದಿ ವ್ಯಾಪಾರಸ್ಥರಿಗೆ ರೂ. 10,000/- ಹಾಗೂ ರೂ. 20,000/- ಬ್ಯಾಕಿನಿಂದ ಸಾಲ ಮಂಜೂರಾತಿ ಮಾಡಿಕೊಡುವುದು ಹಾಗೂ ಶೇ. 5 ರಷ್ಟು ಬಡ್ಡಿ ಸಹಾಯಧನ ಈ ಯೋಜನೆಯಡಿ ನೀಡಲಾಗುವುದು ಮತ್ತು ಬೀದಿ ವ್ಯಾಪಾರಸ್ಥರ ಗುರುತಿನ ಚೀಟಿಯನ್ನು ಈ ಕಚೇರಿಯಿಂದ ನೀಡಲಾಗುವುದು.
ಸಲ್ಲಿಸಬೇಕಾದ ದಾಖಲೆಗಳ ವಿವರ: ಅರ್ಜಿ ನಮೂನೆ (ದ್ವಿ ಪ್ರತಿಯಲ್ಲಿ), ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ದ್ವಿ ಪ್ರತಿಯಲ್ಲಿ), ಆಧಾರ ಕಾರ್ಡ / ರೇಶನ ಕಾರ್ಡ (ದ್ವಿ ಪ್ರತಿಯಲ್ಲಿ), ಶೈಕ್ಷಣಿಕ ದಾಖಲೆಗಳು (ದ್ವಿ ಪ್ರತಿಯಲ್ಲಿ) ಸಲ್ಲಿಸಬೇಕು. ಹೀಗೆ ಈ ಮೇಲಿನ ಯೋಜನೆಗಳ ಪ್ರಯೊಜನ ಪಡೆಯಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಅಗಸ್ಟ 15 ರ ಒಳಗಾಗಿ ಡೇ-ನಲ್ಮ್ ಶಾಖೆಗೆ ಮೇಲೆ ನಮೂದಿಸಿದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ನಿಪ್ಪಾಣಿಯ ನಗರಸಭೆಯ ಸಮುದಾಯ ಸಂಘಟನಾ ಅಧಿಕಾರಿಯಾದ, ಎಸ್. ಜೆ ಕುರಣೆ, ಇವರನ್ನು ಸಂರ್ಪಕಿಸ ಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

ಸರ್ಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಳಗಾವಿ,: ಬೆಳಗಾವಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳ ತಾತ್ಕಾಲಿಕವಾಗಿ ಅರೆಕಾಲಿಕ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಆಗಸ್ಟ್ 25 ಕೊನೆಯ ದಿನಾಂಕವಾಗಿದ್ದು ನಿಗದಿತ ದಾಖಲಾತಿಗಳೊಂದಿಗೆ ಸಂಸ್ಥೆಗೆ ಖುದ್ದಾಗಿ ಅಥವಾ ಇ-ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ: 0831-2951386, ಪ್ರಾಚಾರ್ಯರ ದೂರವಾಣಿ ಸಂಖ್ಯೆ: 9481130811 ಹಾಗೂ ಇ-ಮೇಲ್ ವಿಳಾಸ: 113gpt@gmail.com ಗೆ ಸಂಪರ್ಕಿಸಬಹುದು ಎಂದು ಬೆಳಗಾವಿಯ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
/////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');