ಎಸ್ ಎಸ್ ಎಲ್ ಸಿ ಪರೀಕ್ಷೆ::ಪ್ರಥಮ ಸ್ಥಾನ ಪಡೆದ ಆಕಾಶ ಮರಬದ ಗೆ ಸನ್ಮಾನ

0
🌐 Belgaum News :

 

ಬೆಳಗಾವಿ 13:- ಇತ್ತೀಚೆಗೆ ಜರುಗಿದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸರಕಾರಿ ಪ್ರೌಢ ಶಾಲೆ ಮಹಾಂತೇಶ ನಗರದ ವಿದ್ಯಾರ್ಥಿ ಆಕಾಶ ಬಾಳೇಶ ಮರಬದ ಈತನು ಶೇ 84 ರಷ್ಟು ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದ ನಿಮಿತ್ತ ಇಂದು ಕನ್ನಡ ಸಾಹಿತ್ಯ ಭವನದಲ್ಲಿ ಜರುಗಿದ ಸಭೆಯಲ್ಲಿ ಸನ್ಮಾನ ಮಾಡಿ ಅಭಿನಂದಿಸಲಾಯಿತು

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಡಾ, ಆನಂದ ಹೊಸೂರ ಹಾಗೂ ಬೆಳಗಾವಿ ತಾಲೂಕಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಬಸವರಾಜ ಸುಣಗಾರ,  ಬೆಳಗಾವಿ ವರದಿ ಕನ್ನಡ  ದಿನಪತ್ರಿಕೆ  ಸಂಪಾದಕರಾದ ಸತೀಶ್ ಗುಡಗೇನಟ್ಟಿ ಯವರು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಮುಂದಿನ ವಿದ್ಯಾಭ್ಯಾಸ ಕ್ಕೆ ಅನುಕೂಲ ವಾಗುವ ನಿಟ್ಟಿನಲ್ಲಿ ಆಥಿ೯ಕ ಸಹಾಯ ನೀಡಿದರು

ಬೈಲಹೊಂಗಲ ತಾಲೂಕಿನ ಭೈರನಟ್ಟಿ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಆಕಾಶ ಮರಬದ ನಗರದ ಕನ್ನಡ ಪರ ಹೋರಾಟ ಗಾತಿ೯ ಕಸ್ತೂರಿ ಭಾಂವಿ  ಯವರ ಮನೆಯಲ್ಲಿ ಆಶ್ರಯ ಪಡೆದು ವಿದ್ಯಾಭ್ಯಾಸ ಮಾಡಿದ್ದು, ಗ್ರಾಮೀಣ ಭಾಗದಪ್ರತಿಭಾವಂತ ವಿದ್ಯಾರ್ಥಿಯಾಗಿರುವನು, ಉಪಸ್ಥಿತ ಗಣ್ಯರು, ಸನ್ಮಾನ ಮಾಡಿ ಆತನ ಮುಂದಿನ ವಿದ್ಯಾಭ್ಯಾಸ ಕ್ಕೆ ಶುಭ ಕೋರಿದರು

ಈ ಸಮಯದಲ್ಲಿ ಎಬಿವಿಪಿ ರಾಜ್ಯ ಕಾಯ೯ದಶಿ೯ ಪ್ರತೀಕ ಮಾಳಿ, ರೋಹಿತ್ ಉಮನಾದಿಮಠ, ಶಿಕ್ಷಕ ಸಂಘದ ಪದಾಧಿಕಾರಿಗಳಾದ ರಾಜೇಂದ್ರ ಗೋಶ್ಯಾನಟ್ಟಿ, ಶಿವಾನಂದ ರೋಡಬಸಣ್ಣವರ, ರಾಜೇಂದ್ರ ಕುಮಾರ ಚಲವಾದಿ, ಎಮ್ ಬಿ ಮರಲಕ್ಕನವರ, ಬಿ ಎಚ್ ಹೋಂಗಲ,ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');